‘ನಾನು, ವಿಜಯ್, ಸ್ಪೀಕರ್ ಒಂದೇ ಕಾಲೇಜಲ್ಲಿ ಓದಿದವರು’: ಕಾಲೇಜು ದಿನಗಳ ವಿಧಾನಸಭೆಯಲ್ಲಿ ನೆನಪಿಸಿದ ಉದಯನಿಧಿ ಹೇಳಿದ್ದೇನು ನೋಡಿ!
ತಮಿಳುನಾಡು ವಿಧಾನಸಭೆಯಲ್ಲಿ ಮಂಗಳವಾರ ಉದಯನಿಧಿ ಸ್ಟಾಲಿನ್ ಮತ್ತು ಸಿಎಂ ವಿಜಯ್ ನಡುವೆ ಕಾಲೇಜು ದಿನಗಳ ನೆನಪುಗಳನ್ನು ಮೆಲುಕು ಹಾಕುವುದರೊಂದಿಗೆ ರಾಜಕೀಯ ಚರ್ಚೆಯೂ ನಡೆಯಿತು. ಡಿಎಂಕೆ ಆಡಳಿತದಲ್ಲಿ ಸೀನಿಯರ್ ಬ್ಯಾಚ್ ಆಗಿದ್ದು, ಹೊಸದಾಗಿ ಅಧಿಕಾರ ಹಿಡಿದಿರುವ ವಿಜಯ್‌ಗೆ ರಾಜಕೀಯ ಪಾಠ ಮಾಡಲು ನಾವು ಸಿದ್ಧರಿದ್ದೇವೆ ಎಂದು ಉದಯನಿಧಿ ಹೇಳಿದ್ದಾರೆ.
ಚೆನ್ನೈ, ಮೇ 12: ತಮಿಳುನಾಡು ವಿಧಾನಸಭೆಯಲ್ಲಿ ಮಂಗಳವಾರ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಹಳೆಯ ಸ್ನೇಹದ ನೆನಪುಗಳನ್ನು ಮೆಲುಕು ಹಾಕಿದ್ದು ಗಮನ ಸೆಳೆದಿದೆ. ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಮುಖ್ಯಮಂತ್ರಿ ವಿಜಯ್ ಅವರ ಕಾಲೆಳೆಯುತ್ತಲೇ, ತಮಿಳುನಾಡು ರಾಜಕೀಯದಲ್ಲಿ ಡಿಎಂಕೆ ಎಷ್ಟು ಅನುಭವಿ ಪಕ್ಷ ಎಂಬ ಸಂದೇಶವನ್ನೂ ರವಾನಿಸಿದರು.
‘ನಾನು, ಸಿಎಂ ವಿಜಯ್ ಮತ್ತು ಸ್ಪೀಕರ್ ಪ್ರಭಾಕರ್ ಎಲ್ಲರೂ ಒಂದೇ ಕಾಲೇಜಿನಲ್ಲಿ ಓದಿದವರು. ಆದರೆ ಆಡಳಿತದ ವಿಷಯಕ್ಕೆ ಬಂದರೆ ಡಿಎಂಕೆ ‘ಸೀನಿಯರ್ ಬ್ಯಾಚ್’. ಆಡಳಿತ ಹೇಗೆ ನಡೆಸಬೇಕು ಎಂಬುದನ್ನು ನಾವು ನಿಮಗೆ ಕಲಿಸಲು ಸಿದ್ಧರಿದ್ದೇವೆ’ ಎಂದು ಉದಯನಿಧಿ ಸ್ಟಾಲಿನ್ ಸಿಎಂ ವಿಜಯ್ ಉದ್ದೇಶಿಸಿ ಹೇಳಿದರು. ಇದೇ ವೇಳೆ, ವಿಜಯ್ ತುಟಿಯಂಚಿನಲ್ಲಿ ಕಿರು ನಗು ಮೂಡಿದ್ದು ಕಾಣಿಸಿತು. ಈ ಮಾತಿನ ಮೂಲಕ ವಿಜಯ್ ಅವರು ರಾಜಕೀಯಕ್ಕೆ ಹೊಸಬರು ಮತ್ತು ಡಿಎಂಕೆ ಅನುಭವದ ಮುಂದೆ ಇನ್ನೂ ಕಲಿಯುವುದು ಸಾಕಷ್ಟಿದೆ ಎಂದು ಉದಯನಿಧಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSLನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್

