ಅವಧಿ ಮೀರಿ ಪಾರ್ಟಿ ಮಾಡಿದ ಪ್ರಕರಣ: ನಟ ದರ್ಶನ್ಗೆ ಸಿಕ್ತು ಬಿಗ್ ರಿಲೀಫ್
ಕೆಲ ತಿಂಗಳ ಹಿಂದೆ ದರ್ಶನ್ ಹಾಗೂ ತಂಡ ಜೆಟ್ಲ್ಯಾಗ್ನಲ್ಲಿ ಪಾರ್ಟಿ ಮಾಡಿದ ಆರೋಪ ಎದುರಾಗಿತ್ತು. ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ಬಳಿಕ ಪೊಲೀಸರು ನೋಟಿಸ್ ಕೊಟ್ಟ ಹಿನ್ನೆಲೆಯಲ್ಲಿ ದರ್ಶನ್, ರಾಕ್ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಷ್ ಮೊದಲಾದವರು ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಿದ್ದರು.
‘ಕಾಟೇರ’ ಸಿನಿಮಾ (Katera Movie) ಸೆಲೆಬ್ರಿಟಿ ಶೋ ಬಳಿಕ ನಟ ದರ್ಶನ್ ಹಾಗೂ ಅವರ ತಂಡ ಬೆಂಗಳೂರಿನ ರಾಜಾಜಿ ನಗರದಲ್ಲಿ ಇರುವ ಜೆಟ್ಲ್ಯಾಗ್ನಲ್ಲಿ ತಡರಾತ್ರಿವರೆಗೆ ಪಾರ್ಟಿ ಮಾಡಿದ ಆರೋಪ ಎದುರಾಗಿತ್ತು. ಈಗ ಈ ಪ್ರಕರಣದಲ್ಲಿ ದರ್ಶನ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸುಬ್ರಹ್ಮಣ್ಯನಗರ ಪೊಲೀಸರು ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಇದರಲ್ಲಿ ಒಂದು ಪ್ರಮುಖ ಅಂಶ ಉಲ್ಲೇಖ ಮಾಡಿದ್ದಾರೆ. ಇದರಿಂದ ದರ್ಶನ್ ಹಾಗೂ ತಂಡ ನಿಟ್ಟುಸಿರು ಬಿಡುವಂತೆ ಆಗಿದೆ.
ಕೆಲ ತಿಂಗಳ ಹಿಂದೆ ದರ್ಶನ್ ಹಾಗೂ ತಂಡ ಜೆಟ್ಲ್ಯಾಗ್ನಲ್ಲಿ ಪಾರ್ಟಿ ಮಾಡಿದ ಆರೋಪ ಎದುರಾಗಿತ್ತು. ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ಬಳಿಕ ಪೊಲೀಸರು ನೋಟಿಸ್ ಕೊಟ್ಟ ಹಿನ್ನೆಲೆಯಲ್ಲಿ ದರ್ಶನ್, ರಾಕ್ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಷ್ ಮೊದಲಾದವರು ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯಲ್ಲಿ ‘ಊಟ ಮಾಡಿದ್ದೇವೆ ಅಷ್ಟೆ, ಪಾರ್ಟಿ ಮಾಡಿಲ್ಲ’ ಎಂದಿದ್ದರು. ಈ ಹೇಳಿಕೆಯನ್ನು ಪೊಲೀಸರು ಪರಿಗಣನೆಗೆ ತೆಗೆದುಕೊಂಡಿದ್ದಾರೆ.
ಓವರ್ ನೈಟ್ ಪಾರ್ಟಿ ಆಗಿರಲಿಲ್ಲ. ಊಟದ ಪಾರ್ಟಿ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಆಗಿದೆ. ನಟ ದರ್ಶನ್, ರಾಕ್ಲೈನ್ ಸೇರಿ ಹಲವರು ಪಾರ್ಟಿ ಮಾಡಿದ್ದ ಆರೋಪ ಇತ್ತು. ಈಗ ಚಾರ್ಜ್ಶೀಟ್ನಲ್ಲಿ ಮಾಡಲಾದ ಉಲ್ಲೇಖದಿಂದ ಎಲ್ಲರೂ ನಿಟ್ಟುಸಿರು ಬಿಡುವಂತೆ ಆಗಿದೆ.
ಇದನ್ನೂ ಓದಿ: ಕುದುರೆ ಓಡಿಸೋದ್ರಲ್ಲಿ ತಂದೆಯನ್ನೂ ಮೀರಿಸ್ತಾರೆ ವಿನೀಶ್ ದರ್ಶನ್; ಇಲ್ಲಿದೆ ವಿಡಿಯೋ
ಎಂಟು ಜನರಿಗೆ ನೋಟಿಸ್
ಕೇಸ್ ಸಂಬಂಧ ದರ್ಶನ್ ಸೇರಿ 8 ನಟರಿಗೆ ನೋಟಿಸ್ ನೀಡಲಾಗಿತ್ತು. ಪೊಲೀಸರು ನೋಟಿಸ್ ಕೊಟ್ಟು ಎಂಟು ಜನರನ್ನು ವಿಚಾರಣೆ ಮಾಡಿದ್ದರು. ಸದ್ಯ 8 ನಟರನ್ನು ಸಾಕ್ಷಿಗಳಾಗಿ ಪರಿಗಣನೆ ಮಾಡಿ ಚಾರ್ಜ್ಶೀಟ್ ಸಲ್ಲಿಕೆ ಆಗಿದೆ. ಸುಬ್ರಹ್ಮಣ್ಯನಗರ ಪೊಲೀಸರಿಂದ ACMM ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಚಾರ್ಜ್ಶೀಟ್ನಲ್ಲಿ ದರ್ಶನ್ ಸೇರಿ ಎಲ್ಲರಿಗೂ ರಿಲೀಫ್ ಸಿಕ್ಕಂತೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ