‘ಮ್ಯಾಟ್ನಿ’ ಸಿನಿಮಾದಲ್ಲಿ ಸತೀಶ್​ ನೀನಾಸಂ ಜೊತೆ ರಿಯಲ್​ ಸ್ನೇಹಿತರ ದಂಡು

ಸತೀಶ್​ ನೀನಾಸಂ ಅಭಿನಯದ ‘ಮ್ಯಾಟ್ನಿ’ ಸಿನಿಮಾ ಏಪ್ರಿಲ್ 5ರಂದು ಬಿಡುಗಡೆ ಆಗಲಿದೆ. ಅವರ ರಿಯಲ್​ ಲೈಫ್​ ಗೆಳೆಯರಾದ ಶಿವರಾಜ್​ ಕೆ.ಆರ್. ಪೇಟೆ, ನಾಗಭೂಷಣ, ಪೂರ್ಣಚಂದ್ರ ಮೈಸೂರು, ದಿಗಂತ್ ದಿವಾಕರ್ ಅವರು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.​ ಸ್ನೇಹಿತರ ಕಾಂಬಿನೇಷನ್​ ಹೇಗಿರಲಿದೆ ಅಂತ ತಿಳಿಯುವ ಕೌತುಕ ಸಿನಿಪ್ರಿಯರಲ್ಲಿ ಮೂಡಿದೆ.

‘ಮ್ಯಾಟ್ನಿ’ ಸಿನಿಮಾದಲ್ಲಿ ಸತೀಶ್​ ನೀನಾಸಂ ಜೊತೆ ರಿಯಲ್​ ಸ್ನೇಹಿತರ ದಂಡು
‘ಮ್ಯಾಟ್ನಿ’ ಸಿನಿಮಾ ಪಾತ್ರವರ್ಗ
Follow us
ಮದನ್​ ಕುಮಾರ್​
|

Updated on: Apr 01, 2024 | 7:29 PM

ಕನ್ನಡ ಚಿತ್ರರಂಗದ ಖ್ಯಾತ ನಟ ಸತೀಶ್ ನೀನಾಸಂ (Sathish Ninasam), ‘ಡಿಂಪಲ್ ಕ್ವೀನ್’ ರಚಿತಾ ರಾಮ್, ಅದಿತಿ ಪ್ರಭುದೇವ ನಟಿಸಿರುವ ‘ಮ್ಯಾಟ್ನಿ’ ಸಿನಿಮಾ ಈಗಾಗಲೇ ಟ್ರೇಲರ್ ಹಾಗೂ ಸಾಂಗ್ಸ್​ ಮೂಲಕ ನಿರೀಕ್ಷೆ ಹುಟ್ಟುಹಾಕಿದೆ. ಕೆಲವೇ ದಿನಗಳ ಹಿಂದೆ ನಟ ದರ್ಶನ್ ಅವರು ಈ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡುವ ಮೂಲಕ ಹೊಸ ಮೆರುಗು ತಂದು ಕೊಟ್ಟರು. ಪಾತ್ರವರ್ಗದ ಕಾರಣದಿಂದಲೂ ‘ಮ್ಯಾಟ್ನಿ’ ಸಿನಿಮಾ (Matinee Movie) ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಸತೀಶ್ ನೀನಾಸಂ, ಅದಿತಿ ಪ್ರಭುದೇವ ಹಾಗೂ ರಚಿತಾ ರಾಮ್ (Rachita Ram) ಮಾತ್ರವಲ್ಲದೆ ಇನ್ನೂ ಅನೇಕ ಕಲಾವಿದರು ನಟಿಸಿದ್ದಾರೆ. ಇದು ಹಾರರ್ ಕಾಮಿಡಿ ಸಿನಿಮಾ. ಇದರಲ್ಲಿ ಸ್ನೇಹಿತರ ಸಂಗಮ ಆಗಿದೆ. ಸತೀಶ್ ನೀನಾಸಂ ಅವರ ಗೆಳಯರಾಗಿ ನಾಗಭೂಷಣ, ಶಿವರಾಜ್​ ಕೆ.ಆರ್. ಪೇಟೆ, ಪೂರ್ಣಚಂದ್ರ ಮೈಸೂರು, ದಿಗಂತ್ ದಿವಾಕರ್ ಅವರು ನಟಿಸಿದ್ದಾರೆ. ನಿಜಜೀವನದಲ್ಲಿಯೂ ಇವರೆಲ್ಲ ಸ್ನೇಹಿತರು ಅನ್ನೋದು ವಿಶೇಷ.

‘ಮ್ಯಾಟ್ನಿ’ ಸಿನಿಮಾದಲ್ಲಿ ನಾಗಭೂಷಣ್ ಅವರು ನೆಕ್ಸನ್ ಎಂಬ ಪಾತ್ರ ಮಾಡಿದ್ದಾರೆ. ನಾಗಭೂಷಣ್ ಮತ್ತು ಸತೀಶ್​ ನೀನಾಸಂ ಅವರು ತೆರೆ ಹಂಚಿಕೊಂಡಿರುವುದು ಇದೇ ಮೊದಲು. ಹಾಸ್ಯದ ಪಾತ್ರಗಳ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಾ ಬಂದಿರುವ ಶಿವರಾಜ್ ಕೆ.ಆರ್. ಪೇಟೆ ಅವರು ‘ಮ್ಯಾಟ್ನಿ’ ಚಿತ್ರದಲ್ಲಿ ನವೀನ್ ಎಂಬ ರಿಯಲ್ ಎಸ್ಟೇಟ್​ ಉದ್ಯಮಿಯಾಗಿ ನಟಿಸಿದ್ದಾರೆ. ಶಿವರಾಜ್ ಕೆ.ಆರ್. ಪೇಟೆ ಮತ್ತು ಸತೀಶ್​ ಅವರ ಕಾಂಬಿನೇಷನ್​ನಲ್ಲಿ ಬರುತ್ತಿರುವ 4ನೇ ಸಿನಿಮಾ ಇದು.

ಇದನ್ನೂ ಓದಿ: ದರ್ಶನ್​ ಬರೋತನಕ ‘ಮ್ಯಾಟ್ನಿ’ ಸಮಾರಂಭ; ಬಂದ್ಮೇಲೆ ‘ಡಿ ಬಾಸ್​’ ಪ್ರೋಗ್ರಾಂ: ಸತೀಶ್​ ನೀನಾಸಂ

ಶಿವರಾಜ್ ಕೆ.ಆರ್. ಪೇಟೆ ಅವರಿಗೆ ಕಾಮಿಡಿ ಹೊಸದೇನೂ ಅಲ್ಲ. ಆದರೆ ‘ಮ್ಯಾಟ್ನಿ’ ಸಿನಿಮಾದಲ್ಲಿ ಕಾಮಿಡಿ ಜತೆಗೆ ಹಾರರ್ ಸಹ ಇರುವುದರಿಂದ ಅಭಿಮಾನಿಗಳಿಗೆ ಡಬಲ್ ಮನರಂಜನೆ ಇರಲಿದೆ. ‘ಟಿಕೆಟ್ ತೆಗೆದುಕೊಂಡು ಚಿತ್ರಮಂದಿರದ ಒಳಗೆ ಹೋದರೆ, ಪ್ರೇಕ್ಷಕರಿಗೆ ಈ ಬೇಸಿಗೆಯಲ್ಲೂ ತಂಪಾಗಿ ಸಿನಿಮಾ ನೋಡಿ, ಹೊರಬಂದ ಅನುಭವ ಆಗುತ್ತೆ’ ಎಂದು ಶಿವರಾಜ್ ಕೆ.ಆರ್. ಪೇಟೆ ಹೇಳಿದ್ದಾರೆ. ನಟ ಪೂರ್ಣಚಂದ್ರ ಅವರು ಆನಂದ ಎನ್ನುವ ಗುರೂಜಿ ಪಾತ್ರವನ್ನು ಈ ಸಿನಿಮಾದಲ್ಲಿ ಮಾಡಿದ್ದಾರೆ. ‘ನಾವೆಲ್ಲರು ಈ ಚಿತ್ರದಲ್ಲಿ ಮಾತ್ರವಲ್ಲದೇ ರಿಯಲ್ ಲೈಫ್​ನಲ್ಲಿಯೂ ಸ್ನೇಹಿತರಾದ್ದರಿಂದ ನಟಿಸಲು ಇನ್ನಷ್ಟು ಸುಲಭ ಆಯಿತು’ ಎಂದಿದ್ದಾರೆ ಪೂರ್ಣಚಂದ್ರ.

ಇದನ್ನೂ ಓದಿ: ಹಾರರ್ ಸಿನಿಮಾನಲ್ಲಿ ರಚಿತಾ, ಸತೀಶ್ ನೀನಾಸಂ, ‘ಮ್ಯಾಟ್ನಿ’ಗೆ ದರ್ಶನ್ ಬೆಂಬಲ

ಸಿನಿಮಾದಲ್ಲಿ ಬರುವ ಇನ್ನೋರ್ವ ಸ್ನೇಹಿತನ‌ ಪಾತ್ರಕ್ಕೆ ದಿಗಂತ್ ದಿವಾಕರ್ ಅವರು ಬಣ್ಣ ಹಚ್ಚಿದ್ದಾರೆ. ಈವರೆಗೂ ಹಲವು ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರ ಮಾಡಿದ್ದ ಅವರು ಇದೇ ಮೊದಲ ಬಾರಿಗೆ ‘ಮ್ಯಾಟ್ನಿ’ ಸಿನಿಮಾದಲ್ಲಿ ಒಂದು ಪೂರ್ಣಾವಧಿಯ ಪಾತ್ರ ಮಾಡಿದ್ದಾರೆ. ಜಯದೇವ್ ಅಲಿಯಾಸ್ ಜೆಡಿ ಎಂಬ ಪಾತ್ರದಲ್ಲಿ ಅವರು ನಟಿಸಿದ್ದಾರೆ. ‘ಮ್ಯಾಟ್ನಿ’ ಸಿನಿಮಾ ಏಪ್ರಿಲ್ 5ರಂದು ಬಿಡುಗಡೆ ಆಗಲಿದೆ. ಸ್ನೇಹಿತರ ಕಾಂಬಿನೇಷನ್​ ಹೇಗಿರಲಿದೆ ಎಂಬುದನ್ನು ತಿಳಿಯುವ ಕೌತುಕ ಸಿನಿಪ್ರಿಯರಲ್ಲಿ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ