ದರ್ಶನ್ ಬರೋತನಕ ‘ಮ್ಯಾಟ್ನಿ’ ಸಮಾರಂಭ; ಬಂದ್ಮೇಲೆ ‘ಡಿ ಬಾಸ್’ ಪ್ರೋಗ್ರಾಂ: ಸತೀಶ್ ನೀನಾಸಂ
ಹಾರರ್ ಕಥಾಹಂದರ ಇರುವ ‘ಮ್ಯಾಟ್ನಿ’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ಅತಿಥಿಯಾಗಿ ಬಂದು ಟ್ರೇಲರ್ ರಿಲೀಸ್ ಮಾಡಿದ್ದಾರೆ. ಈ ವೇದಿಕೆಯಲ್ಲಿ ಸಿನಿಮಾದ ಹೀರೋ ಸತೀಶ್ ನೀನಾಸಂ ಅವರು ದರ್ಶನ್ ಬಗ್ಗೆ ಮಾತನಾಡಿದ್ದಾರೆ. ‘ಡಿ ಬಾಸ್’ ನೀಡಿದ ಬೆಂಬಲವನ್ನು ಸತೀಶ್ ವಿವರಿಸಿದ್ದಾರೆ.
ಜನಪ್ರಿಯ ನಟ ಸತೀಶ್ ನೀನಾಸಂ ಅವರು ‘ಮ್ಯಾಟ್ನಿ’ (Matinee) ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅವರಿಗೆ ಜೋಡಿಯಾಗಿ ರಚಿತಾ ರಾಮ್, ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ. ಮನೋಹರ್ ಕಾಂಪಲ್ಲಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಪಾರ್ವತಿ ಎಸ್. ಗೌಡ ನಿರ್ಮಾಣ ಮಾಡಿರುವ ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಇಂದು (ಮಾರ್ಚ್ 27) ನಡೆದಿದೆ. ಬೆಂಗಳೂರಿನ ಖಾಸಗಿ ಮಾಲ್ನಲ್ಲಿ ನಡೆದ ಟ್ರೇಲರ್ ಲಾಂಚ್ ಇವೆಂಟ್ಗೆ ನಟ ದರ್ಶನ್ (Darshan) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ. ಅವರಿಗೆ ಡಾಲಿ ಧನಂಜಯ್ ಸಾಥ್ ನೀಡಿದ್ದಾರೆ. ತಮ್ಮ ಸಿನಿಮಾಗೆ ಸಪೋರ್ಟ್ ಮಾಡಲು ಬಂದ ದರ್ಶನ್ ಅವರಿಗೆ ಸತೀಶ್ (Sathish Ninasam) ಧನ್ಯವಾದ ಅರ್ಪಿಸಿದ್ದಾರೆ. ‘ಡಿ ಬಾಸ್’ ನೀಡಿದ ಬೆಂಬಲದ ಬಗ್ಗೆ ಅವರು ಮಾತನಾಡಿದ್ದಾರೆ.
‘ಶ್ರೀರಂಗಪಟ್ಟಣದಲ್ಲಿ ನಡೆದ ‘ಬೆಳ್ಳಿ ಪರ್ವ’ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ಊಟ ಮಾಡುವಾಗ ದರ್ಶನ್ ಸರ್ ಒಂದು ಮಾತು ಕೇಳಿದರು. ಮ್ಯಾಟ್ನಿ ಸಿನಿಮಾ ಯಾಕೆ ಇನ್ನೂ ರಿಲೀಸ್ ಮಾಡಿಲ್ಲ? ಮೊದಲು ರಿಲೀಸ್ ಮಾಡಿ ಅಂದ್ರು. ನೀವೇ ಟ್ರೇಲರ್ ಲಾಂಚ್ಗೆ ಬರಬೇಕು ಸರ್ ಅಂತ ನಾನು ಕೇಳಿಕೊಂಡೆ. ‘ನೀವು ಕರೆಯೋದೇ ಬೇಡ, ನಾನು ಬರ್ತೀನಿ’ ಅಂತ ಅವರು ಹೇಳಿದರು’ ಎಂದು ಆ ದಿನವನ್ನು ಸತೀಶ್ ನೀನಾಸಂ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮನಾಲಿ ಚಳಿಯಲ್ಲಿ ಸತೀಶ್-ಅದಿತಿ ಪ್ರಭುದೇವ; ‘ಮ್ಯಾಟ್ನಿ’ ಚಿತ್ರದ ಹೊಸ ಹಾಡು ರಿಲೀಸ್
‘ನಂತರ ನಾನು ದರ್ಶನ್ ಸರ್ಗೆ ಫೋನ್ ಮಾಡಿದೆ. ‘ಯಾವ ಡೇಟ್ ಆದರೂ ಪರವಾಗಿಲ್ಲ ನಾನು ಬರುತ್ತೇನೆ’ ಅಂತ ಅವರು ಹೇಳಿದರು. ಅದಾಗಲೇ ರಚಿತಾ ರಾಮ್ ಅವರು ಮಾತನಾಡಿದ್ದರು. ದರ್ಶನ್ ಅವರಿಗೆ ನಾನು ಯಾವಾಗಲೂ ಋಣಿ ಆಗಿರುತ್ತೇನೆ. ‘ಬ್ಯೂಟಿಫುಲ್ ಮನಸುಗಳು’ ಚಿತ್ರದಿಂದ ಇಲ್ಲಿಯತನಕ ನಾವು ಯಾವಾಗ ಕರೆದರೂ ಬರಲ್ಲ ಅಂತ ಅವರು ಹೇಳಿಲ್ಲ. ಅವರ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ನಾನು ಯಾವಾಗಲೂ ಉಳಿಸಿಕೊಳ್ಳುತ್ತೇನೆ’ ಎಂದಿದ್ದಾರೆ ಸತೀಶ್.
ಸತೀಶ್ ನೀನಾಸಂ ಮಾತಾಡಿದ ವಿಡಿಯೋ ಇಲ್ಲಿದೆ:
‘ಸ್ಪೆಷಲ್ ಗೆಸ್ಟ್ ಆಗಿ ಬಂದಿರುವ ನನ್ನ ಗೆಳೆಯ ಡಾಲಿ ಧನಂಜಯ್ ಯಾವಾಗಲೂ ಜೊತೆಯಾಗಿ ನಿಲ್ಲುತ್ತಾನೆ. ಅವನಿಗೂ ಸ್ಪೆಷಲ್ ಥ್ಯಾಂಕ್ಸ್. ತಮ್ಮನ್ನು ಪ್ರೀತಿಸುವವರ ಜೊತೆ ದರ್ಶನ್ ಯಾವಾಗಲೂ ಇರುತ್ತಾರೆ. ಅವರು ಬರುವ ತನಕ ಮಾತ್ರ ಇದು ನಮ್ಮ ಮ್ಯಾಟ್ನಿ ಸಿನಿಮಾದ ಸಮಾರಂಭ ಆಗಿತ್ತು. ಅವರು ಬಂದ್ಮೇಲೆ ಇದು ಡಿ ಬಾಸ್ ಪ್ರೋಗ್ರಾಂ ಆಯಿತು. ಅದು ಸಂತೋಷ್. ಅವರು ಇದ್ದ ಕಡೆಯಲ್ಲಿ ಒಂದು ಸೆಲೆಬ್ರೇಷನ್ ಇರುತ್ತದೆ. ಅದು ಖಂಡಿತಾ ಬೇಕು. ಮ್ಯಾಟ್ನಿ ಸಿನಿಮಾಗೆ ಇಂದು ದೊಡ್ಡ ಶಕ್ತಿ ಸಿಕ್ಕಿದೆ. ಅವರು ಬಂದಿದ್ದಕ್ಕೆ ದೊಡ್ಡ ಮಟ್ಟಕ್ಕೆ ರೀಚ್ ಆಗಿದೆ’ ಎಂದು ಸತೀಶ್ ನೀನಾಸಂ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:54 pm, Wed, 27 March 24