ಪದೇ ಪದೇ ಪ್ರಶ್ನೆ ಕೇಳಿದವರಿಗೆ ಯಶ್​ ಉತ್ತರ; ಝಲಕ್ ತೋರಿಸಿದ ರಾಕಿ ಭಾಯ್​

ಯಶ್​ ಏನೇ ಮಾಡಿದರೂ ಸ್ಪೆಷಲ್​ ಆಗುತ್ತದೆ. ಈಗ ಅವರು ಸಣ್ಣದೊಂದು ವಿಡಿಯೋ ಝಲಕ್ ತೋರಿಸಿದ್ದಾರೆ. ‘ಟಾಕ್ಸಿಕ್​’ ಸಿನಿಮಾದ ಬಗ್ಗೆ ಅಪ್​ಡೇಟ್​ ತಿಳಿಯಲು ಕಾದಿದ್ದ ಎಲ್ಲರೂ ಈ ವಿಡಿಯೋವನ್ನು ಕಣ್ಣರಳಿಸಿಕೊಂಡು ನೋಡಿದ್ದಾರೆ. ಆದರೆ ಅದರಲ್ಲಿ ಕಾಣಿಸಿದ್ದು ಏನು? ಅಷ್ಟಕ್ಕೂ ಯಶ್​ ಅವರ ಹೊಸ ವಿಡಿಯೋ ಯಾವುದು ಎಂಬ ಬಗ್ಗೆ ವಿವರ ಇಲ್ಲಿದೆ..

ಪದೇ ಪದೇ ಪ್ರಶ್ನೆ ಕೇಳಿದವರಿಗೆ ಯಶ್​ ಉತ್ತರ; ಝಲಕ್ ತೋರಿಸಿದ ರಾಕಿ ಭಾಯ್​
ಯಶ್​
Follow us
ಮದನ್​ ಕುಮಾರ್​
|

Updated on: Mar 27, 2024 | 5:45 PM

ನಟ ಯಶ್​ (Yash) ಅವರು ಸಿನಿಮಾ ಕೆಲಸಗಳನ್ನು ಬಹಳ ಸಾವಧಾನದಿಂದ ಮಾಡುತ್ತಾರೆ. ಆದರೆ ಫಲಿತಾಂಶ ಬಹಳ ದೊಡ್ಡದಾಗಿರುತ್ತದೆ. ಅದಕ್ಕೆ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಗೆಲುವೇ ಸಾಕ್ಷಿ. ಈಗ ಅವರು ಟಾಕ್ಸಿಕ್​’ (Toxic) ಸಿನಿಮಾಗೂ ಸಹ ದೀರ್ಘ ಸಮಯವನ್ನು ಮೀಸಲಿಟ್ಟಿದ್ದಾರೆ. ಯಾವುದೇ ಅವಸರ ಇಲ್ಲದೇ ಅವರು ಕೆಲಸ ಮಾಡುತ್ತಿದ್ದಾರೆ. ಅಪ್​ಡೇಟ್​ ಸಲುವಾಗಿ ಯಶ್​ ಅವರಿಗೆ ಹಲವು ಪ್ರಶ್ನೆಗಳು ಎದುರಾಗುತ್ತಲೇ ಇವೆ. ಅಂಥವರಿಗೆಲ್ಲ ‘ರಾಕಿಂಗ್​ ಸ್ಟಾರ್​’ (Rocking Star) ಈಗ ಝಲಕ್​ ತೋರಿಸಿದ್ದಾರೆ. ಏನದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಸೋಶಿಯಲ್​ ಮೀಡಿಯಾದಲ್ಲಿ ಯಶ್​ ಅವರು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಯಶ್​ ಕುಳಿತುಕೊಂಡಿರುವ ದೃಶ್ಯ ಇದರಲ್ಲಿದೆ. ಆಗ ಪತ್ರಕರ್ತೆಯೊಬ್ಬರು ಪಿಸುದನಿಯಲ್ಲಿ ‘Question Question Question.. He avoids’ ಎಂದು ಕೆಜಿಎಫ್​ ಸ್ಟೈಲ್​ನಲ್ಲಿ ಹೇಳುತ್ತಾರೆ. ಬಳಿಕ ‘ಫಾಲೋ ಮೀ’ ಎನ್ನುತ್ತಾರೆ ಯಶ್​. ಇಡೀ ವಿಡಿಯೋದಲ್ಲಿ ಇರುವುದು ಇಷ್ಟು ಮಾತ್ರ. ಇದನ್ನು ನೋಡಿ ಅಭಿಮಾನಿಗಳ ಕೌತುಕ ಜಾಸ್ತಿ ಆಗಿದೆ.

‘ಒಂದು ಪ್ರಶ್ನೆಯಿಂದ ಅಚ್ಚರಿ ಆಯಿತು. ನಾನು ಇದನ್ನು ತಪ್ಪಿಸಲು ಸಾಧ್ಯವಿಲ್ಲ. ನಿಜವಾಗಿಯೂ ಪವರ್​ಫುಲ್​ ಆದಂತಹ ಒಂದು ವಿಚಾರಕ್ಕಾಗಿ ಕಾಯಿರಿ’ ಎಂದು ಯಶ್​ ಅವರು ಈ ವಿಡಿಯೋಗೆ ಕ್ಯಾಪ್ಷನ್​ ನೀಡಿದ್ದಾರೆ. ಹಾಗಂತ ಇದು ಸಿನಿಮಾಗೆ ಸಂಬಂಧಿಸಿದ ವಿಡಿಯೋ ಅಲ್ಲ. ಯಾಕೆಂದರೆ, #Ad ಎಂದು ಯಶ್​ ಅವರು ಹ್ಯಾಶ್​ ಟ್ಯಾಗ್​ ಬಳಸಿದ್ದಾರೆ. ಹಾಗಾಗಿ ಇದು ಯಾವುದೋ ಪ್ರತಿಷ್ಠಿತ ಕಂಪನಿಯ ಜಾಹೀರಾತು ಎಂಬುದು ನೆಟ್ಟಿಗರಿಗೆ ಅರ್ಥ ಆಗಿದೆ. ಆದರೆ ಆ ಬ್ರ್ಯಾಂಡ್​ ಯಾವುದು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಯಶ್​ ಹಂಚಿಕೊಂಡ ಹೊಸ ವಿಡಿಯೋ:

View this post on Instagram

A post shared by Yash (@thenameisyash)

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಬ್ಲಾಕ್​ ಬಸ್ಟರ್​ ಆದ ಬಳಿಕ ಯಶ್​ ಅವರು ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದರು. ಹಾಗಾಗಿ ಅವರಿಗೆ ದೊಡ್ಡ ದೊಡ್ಡ ಕಂಪನಿಗಳಿಂದ ಆಫರ್​ ಬರುತ್ತಿದೆ. ಈಗಾಗಲೇ ಅವರು ‘ಪೆಪ್ಸಿ’, ‘ವಿಲನ್​’ ಮುಂತಾದ ಕಂಪನಿಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಇವುಗಳ ಜಾಹೀರಾತಿನಲ್ಲಿ ನಟಿಸಿರುವ ಅವರಿಗೆ ಕೈತುಂಬ ಸಂಭಾವನೆ ಸಿಗುತ್ತಿದೆ. ಈಗ ಅವರು ಕಾಣಿಸಿಕೊಂಡಿರುವ ಹೊಸ ಜಾಹೀರಾತಿನ ಬಗ್ಗೆಯೂ ಕೌತುಕ ಮೂಡಿದೆ.

‘ಟಾಕ್ಸಿಕ್​’ ಸಿನಿಮಾದ ಶೂಟಿಂಗ್​ ಸೆಟ್​ನಿಂದ ಯಶ್​ ಫೋಟೋಗಳು ಲೀಕ್​

ಯಶ್​ ನಟನೆಯ ‘ಟಾಕ್ಸಿಕ್​’ ಸಿನಿಮಾಗೆ ಗೀತು ಮೋಹನ್​ದಾಸ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಪಾತ್ರವರ್ಗದ ಬಗ್ಗೆ ಹಲವು ಅಂತೆ-ಕಂತೆಗಳು ಹರಿದಾಡುತ್ತಿವೆ. ಸಾಯಿ ಪಲ್ಲವಿ, ಕರೀನಾ ಕಪೂರ್​ ಖಾನ್​ ಮುಂತಾದ ನಟಿಯರ ಹೆಸರುಗಳು ಕೇಳಿಬರುತ್ತಿವೆ. ಆ ಬಗ್ಗೆಯೂ ಅಪ್​ಡೇಟ್​ ಸಿಗಲಿ ಎಂದು ಯಶ್​ ಫ್ಯಾನ್ಸ್​ ಬಯಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್