AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರರ್ ಸಿನಿಮಾನಲ್ಲಿ ರಚಿತಾ, ಸತೀಶ್ ನೀನಾಸಂ, ‘ಮ್ಯಾಟ್ನಿ’ಗೆ ದರ್ಶನ್ ಬೆಂಬಲ

Matinee Trailer: ಸತೀಶ್ ನೀನಾಸಂ, ರಚಿತಾ ರಾಮ್, ಅದಿತಿ ಪ್ರಭುದೇವ ಇನ್ನೂ ಹಲವು ಕಲಾವಿದರು ನಟಿಸಿರುವ ಹಾರರ್ ಸಿನಿಮಾ ‘ಮ್ಯಾಟ್ನಿ’ಗೆ ನಟ ದರ್ಶನ್ ಬೆಂಬಲ ನೀಡಿದ್ದಾರೆ.

ಹಾರರ್ ಸಿನಿಮಾನಲ್ಲಿ ರಚಿತಾ, ಸತೀಶ್ ನೀನಾಸಂ, ‘ಮ್ಯಾಟ್ನಿ’ಗೆ ದರ್ಶನ್ ಬೆಂಬಲ
ಮಂಜುನಾಥ ಸಿ.
|

Updated on: Mar 28, 2024 | 12:48 PM

Share

ತೆರೆ ಮೇಲೆ ಕ್ಯೂಟ್ ಹಾಗೂ ರೋಮ್ಯಾಂಟಿಕ್ ಪಾತ್ರಗಳಲ್ಲಿ ನಟಿಸಿದ್ದ ರಚಿತಾ ರಾಮ್ (Rachitha Ram) ಮೊದಲ ಬಾರಿಗೆ ಹಾರರ್ ಸಿನಿಮಾ ‘ಮ್ಯಾಟ್ನಿ’ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಸತೀಶ್ ನಿನಾಸಂ ಕೂಡ ಇದೆ ಮೊದಲ ಬಾರಿಗೆ ಹಾರರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಸಾಕಷ್ಟು ಕುತೂಹಲ ಮೂಡಿಸಿದ್ದು ಸಿನಿಮಾದಲ್ಲಿ ಯಾರು ಡೆವಿಲ್ ಎನ್ನುವುದು ಕುತೂಹಲ ಮೂಡಿಸಿದೆ. ಸತೀಶ್ ನೀನಾಸಂ (Satish Neenasam) ಹಾಗೂ ಡಿಂಪಲ್ ಕ್ವೀನ್ ರಚಿತರಾಮ್ ಅಭಿನಯದ ‘ಮ್ಯಾಟ್ನಿ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಮ್ಯಾಟಿ’ ಸಿನಿಮಾದ ಟ್ರೈಲರ್ ಲಾಂಚ್ ಮಾಡುವ ಮೂಲಕ ಸಿನಿಮಾಗೆ ಬೆಂಬಲ ನೀಡಿದ್ದಾರೆ.

ಚಿತ್ರದಲ್ಲಿ ಸತೀಶ್, ರಚಿತಾ ರಾಮ್ ಸೇರಿದಂತೆ ಅದಿತಿ ಪ್ರಭುದೇವಾ, ಶಿವರಾಜ್ ಕೆಆರ್ ಪೇಟೆ, ನಾಗಭೂಷಣ್, ಮೈಸೂರು ಪೂರ್ಣ, ದಿಗಂತ್ ದಿವಾಕರ್, ತುಳಸಿ ಶಿವರಾಮ್, ತಬಲ ನಾಣಿ ಹೀಗೆ ಸಾಕಷ್ಟು ಅನುಭವಿ ಕಲಾವಿದರು ಅಭಿನಯ ಮಾಡಿದ್ದಾರೆ. ಇನ್ನು ‘ಮ್ಯಾಟ್ನಿ’ ಸಿನಿಮಾವನ್ನು ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದು, ಪಾರ್ವತಿ ಗೌಡ ಮೊದಲ ಬಾರಿಗೆ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ, ಸುಧಾಕರ್ ಮತ್ತು ಕೀರ್ತನ್ ಪೂಜಾರಿ ಛಾಯಾಗ್ರಾಹಣವಿದೆ.

ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನೀನಾಸಂ ಸತೀಶ್ ‘ಯಾಕೋ ‘ಮ್ಯಾಟ್ನಿ’ ಸಿನಿಮಾ ಇನ್ನು ರಿಲೀಸ್ ಮಾಡಿಲ್ಲ ಮೊದಲು ರಿಲೀಸ್ ಮಾಡಿ ಎಂದು ದರ್ಶನ್ ಹೇಳಿದ್ದರು. ಆಗ ಟ್ರೈಲರ್ ಲಾಂಚ್ ಗೆ ಬರಲೇಬೇಕು ಅಂತ ಕೇಳಿಕೊಂಡಿದ್ದೆ. ಮೊದಲು ಸಿನಿಮಾ ಲಾಂಚ್ ಮಾಡಿ ಬರುತ್ತೇನೆ ಅಂದಿದ್ದರು. ರಚಿತಾ ಅವರು ಆಗಲೇ ಮಾತನಾಡಿದ್ದರು. ನಿಮಗಾಗಿ ಹಾಗೂ ರಚಿತಾ ಇದ್ದಾರೆ ಖಂಡಿತ ಬರುತ್ತೇನೆ ಅಂದಿದ್ದರು. ಹಾಗೂ ಗೆಳೆಯ ಡಾಲಿ ಕೂಡ ಇದ್ದಾರೆ. ಮ್ಯಾಟ್ನಿಗೆ ದೊಡ್ಡ ಶಕ್ತಿ ಸಿಕ್ಕಿದೆ, ದೊಡ್ಡ ಮಟ್ಟದಲ್ಲಿ ರೀಚ್ ಆಗಿದೆ’ ಎಂದರು.

ಇದನ್ನೂ ಓದಿ:ಮಂಡ್ಯಕ್ಕೆ ಸತೀಶ್ ನೀನಾಸಂ ಚುನಾವಣಾ ರಾಯಭಾರಿ, ಮತದಾನ ತಪ್ಪಿಸಬೇಡಿ ಎಂದ ನಟ

ಮ್ಯಾಟ್ನಿ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಡಾಲಿ ಧನಂಜಯ್ ಭಾಗಿಯಾಗಿದ್ದರು. ಸಿನಿಮಾದಲ್ಲಿ ರಚಿತಾ ಡೆವಿಲ್ ಲುಕ್ ನೋಡಿ ಡಾಲಿ ಹಾಗೂ ದರ್ಶನ್ ಫಿದಾ ಆಗಿದ್ದಾರೆ. ವೇದಿಕೆ ಮೇಲೆ ಮಾತನಾಡಿದ ರಚಿತಾ, ‘ನನ್ನ ಸಿನಿಮಾದ ಟ್ರೈಲರ್ ಅನ್ನು ಮೊದಲ ಬಾರಿಗೆ ದರ್ಶನ್ ಸರ್ ಲಾಂಚ್ ಮಾಡ್ತಾ ಇದ್ದಾರೆ. ತುಂಬಾ ಖುಷಿ ಹಾಗೂ ತುಂಬಾ ಹೆಮ್ಮೆಯಾಗುತ್ತೆ. ನಾನು ತೂಗುದೀಪ ಬ್ಯಾನರ್ ನಿಂದ ಲಾಂಚ್ ಆದವಳು. ಹತ್ತು ವರ್ಷದ ಬಳಿಕ ನನ್ನ ಸಿನಿಮಾದ ಟ್ರೈಲರ್ ಲಾಂಚ್ ಗೆ ಬಂದಿದ್ದು ತುಂಬಾ ಖುಷಿಯಾಗುತ್ತೆ. ವೇದಿಕೆ ಮೇಲೆ ಇರುವ ಡಾಲಿ, ಸತೀಶ್, ದರ್ಶನ್ ಸರ್ ಈ ಮೂವರು ಕಲಾವಿದರ ಜೊತೆ ನಾನು ಕೆಲಸ ಮಾಡಿದ್ದೇನೆ. ತುಂಬಾ ಖುಷಿಯಾಗುತ್ತೆ. ‘ಮ್ಯಾಟ್ನಿ’ ಸಿನಿಮಾ ನೋಡಿ ಎಂದು ಕೇಳಿಕೊಂಡರು.

ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿ, ಮ್ಯಾಟ್ನಿ ಸಿನಿಮಾ ಇದೇ 5ನೇ ತಾರೀಖು ಎಲ್ಲಾ ಚಿತ್ರಮಂದಿರಗಳಲ್ಲಿ ಬರುತ್ತಿದೆ. ಮ್ಯಾಟ್ನಿ ಸಿನಿಮಾ ಎಂದ ಮಾತ್ರಕ್ಕೆ ಮ್ಯಾಟ್ನಿ ಟೈಮಲ್ಲಿ ಹೋಗ್ಬೇಡಿ, ಮಾರ್ನಿಂಗ್ ಶೋಗೆ ಹೋಗಿ’ ಎಂದರು. ಇನ್ನು ಸತೀಶ್ ಅವರ ಬಗ್ಗೆ ಮಾತನಾಡಿದ ದರ್ಶನ್, ‘ನೀನಾಸಂನಿಂದ ಬಂದು ಸಿನಿಮಾ ರಂಗದಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿ ಇಲ್ಲಿವರೆಗೂ ಬಂದಿದ್ದಾರೆ. ಈ ಜರ್ನಿ ತುಂಬಾ ದೊಡ್ಡದು. ಇನ್ನು ನಾಯಕಿಯಾಗಿ ಹತ್ತು ವರ್ಷಗಳು ಸಿನಿಮಾರಂಗದಲ್ಲಿ ಇದ್ದು ಜಹಿಸುವುದು ಅಂದ್ರೆ ಸುಮ್ಮನೆ ಅಲ್ಲ. ಶ್ರಮ ಕಾಣುತ್ತಿದೆ’ ಎಂದು ರಚಿತಾ ಅವರ ಬಗ್ಗೆಯೂ ಹೇಳಿದರು. ಇನ್ನು ಚಿತ್ರದ ಹಾಡುಗಳು ಈಗಾಗಲೇ ಹಿಟ್ ಲೀಸ್ಟ್ ಸೇರಿದ್ದು ಟ್ರೇಲರ್ ಕೂಡ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚು ಮಾಡಿದೆ. ಏಪ್ರಿಲ್ 5ಕ್ಕೆ ಮ್ಯಾಟ್ನಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
‘ಯಾವುದು ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ’: ಶಿವಲಿಂಗೇಗೌಡ
‘ಯಾವುದು ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ’: ಶಿವಲಿಂಗೇಗೌಡ
ಆಡಿಯೋ ವೈರಲ್​​ ಬಳಿಕವೂ ಸಿಕ್ಕಿದ ಸಚಿವ ಸ್ಥಾನ: ಜಮೀರ್​​ ಹೇಳಿದ್ದೇನು?
ಆಡಿಯೋ ವೈರಲ್​​ ಬಳಿಕವೂ ಸಿಕ್ಕಿದ ಸಚಿವ ಸ್ಥಾನ: ಜಮೀರ್​​ ಹೇಳಿದ್ದೇನು?
‘ಇದು ನಿರಾಶಾದಾಯಕ ಪಟ್ಟಿ’: ತನ್ವೀರ್ ಸೇಠ್ ತೀವ್ರ ಬೇಸರ
‘ಇದು ನಿರಾಶಾದಾಯಕ ಪಟ್ಟಿ’: ತನ್ವೀರ್ ಸೇಠ್ ತೀವ್ರ ಬೇಸರ
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ