‘ಮ್ಯಾಟ್ನಿ’ ಸಿನಿಮಾ ನಟಿ ರಚಿತಾಗೆ ದರ್ಶನ್​ ಕಡೆಯಿಂದ ಇಂಥ ಬೆಂಬಲ ಸಿಕ್ಕಿದ್ದು ಇದೇ ಮೊದಲು

‘ಮ್ಯಾಟ್ನಿ’ ಸಿನಿಮಾ ನಟಿ ರಚಿತಾಗೆ ದರ್ಶನ್​ ಕಡೆಯಿಂದ ಇಂಥ ಬೆಂಬಲ ಸಿಕ್ಕಿದ್ದು ಇದೇ ಮೊದಲು

ಮದನ್​ ಕುಮಾರ್​
|

Updated on: Mar 27, 2024 | 9:29 PM

ರಚಿತಾ ರಾಮ್​ ಅವರು ‘ಮ್ಯಾಟ್ನಿ’ ಸಿನಿಮಾದಲ್ಲಿ ಸತೀಶ್​ ನೀನಾಸಂ ಜೊತೆ ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮಕ್ಕೆ ದರ್ಶನ್​, ಡಾಲಿ ಧನಂಜಯ್​ ಅವರು ಅತಿಥಿಗಳಾಗಿ ಆಗಮಿಸಿದ್ದಾರೆ. ವೇದಿಕೆಯಲ್ಲಿ ಮಾತನಾಡಿದ ರಚಿತಾ ರಾಮ್​ ಅವರು ದರ್ಶನ್​ ಅವರ ಸಹಕಾರವನ್ನು ಸ್ಮರಿಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..

ಏಪ್ರಿಲ್​ 5ರಂದು ‘ಮ್ಯಾಟ್ನಿ’ ಸಿನಿಮಾ (Matinee Movie) ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಸತೀಶ್​ ನೀನಾಸಂ, ರಚಿತಾ ರಾಮ್​, ಅದಿತಿ ಪ್ರಭುದೇವ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಸಿನಿಮಾದ ಸಾಂಗ್​ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿತ್ತು. ಇಂದು (ಮಾರ್ಚ್​ 27) ಟ್ರೇಲರ್​ ರಿಲೀಸ್​ ಮಾಡಲಾಗಿದೆ. ವಿಶೇಷ ಏನೆಂದರೆ, ಬೆಂಗಳೂರಿನ ಮಂತ್ರಿ ಮಾಲ್​ನಲ್ಲಿ ನಡೆದ ‘ಮ್ಯಾಟ್ನಿ’ ಟ್ರೇಲರ್​ ಬಿಡುಗಡೆ ಕಾರ್ಯಕ್ರಮಕ್ಕೆ ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ (Darshan) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ. ವಿಶೇಷ ಏನೆಂದರೆ, ದರ್ಶನ್​ ಅವರು ರಚಿತಾ ರಾಮ್​ ಅಭಿನಯದ ಸಿನಿಮಾದ ಟ್ರೇಲರ್​ ಲಾಂಚ್​ ಮಾಡಿದ್ದು ಇದೇ ಮೊದಲು. ಆ ಬಗ್ಗೆ ರಚಿತಾ ಅವರು ವೇದಿಕೆಯಲ್ಲಿ ಮಾತನಾಡಿದ್ದಾರೆ. ‘ಮಾಲ್​ನಲ್ಲಿ ನನ್ನ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದ್ದು ಇದೇ ಮೊದಲು. ನಿಮ್ಮೆಲ್ಲರ ಪ್ರೀತಿ ಸಿಕ್ಕಿದೆ. ಅದಕ್ಕೆ ಧನ್ಯವಾದ. ದರ್ಶನ್​ ಸರ್​ ಬಂದು ನನ್ನ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಿದ್ದು ಇದೇ ಮೊದಲು. ನಾನು ಅವರ ಬ್ಯಾನರ್​ನಿಂದ ಬಂದವಳು. 10 ವರ್ಷಗಳ ಬಳಿಕ ಅವರು ನನ್ನ ಸಿನಿಮಾದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಧನ್ಯವಾದಗಳು’ ಎಂದು ರಚಿತಾ ರಾಮ್​ (Rachita Ram) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.