Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿ ಸಂಸದ ತನ್ನ ವಿರುದ್ಧ ಮಾತಾಡದಂತೆ ತಂದಿರುವ ತಡೆಯಾಜ್ಞೆಯನ್ನು ಹಿಂಪಡೆದರೆ ಅವರ ಕೊಳಕು ಮನಸ್ಥಿತಿ ಬಿಚ್ಚಿಡುತ್ತೇನೆ: ಎಂ ಲಕ್ಷ್ಮಣ

ಹಾಲಿ ಸಂಸದ ತನ್ನ ವಿರುದ್ಧ ಮಾತಾಡದಂತೆ ತಂದಿರುವ ತಡೆಯಾಜ್ಞೆಯನ್ನು ಹಿಂಪಡೆದರೆ ಅವರ ಕೊಳಕು ಮನಸ್ಥಿತಿ ಬಿಚ್ಚಿಡುತ್ತೇನೆ: ಎಂ ಲಕ್ಷ್ಮಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 27, 2024 | 5:37 PM

ತಾನೊಬ್ಬ ಸರಳ ವ್ಯಕ್ತಿ ಮತ್ತು ಸದಾ ಜನರ ನಡುವೆ ಇರುವವ ಮತ್ತು ಅವರು ಕರೆ ಮಾಡಿದಾಗೆಲ್ಲ ಕೈಗೆ ಸಿಗುವ ವ್ಯಕ್ತಿಯಾಗಿದ್ದೇನೆ, ತಾನು ಕಾರಲ್ಲಿ ಓಡಾಡಲ್ಲ, ಜೂಜುಕೋರನಲ್ಲ, ಮದ್ಯವ್ಯಸನಿ ಅಲ್ಲ, ಧೂಮ್ರಪಾನಿಯೂ ಅಲ್ಲ, ರಾತ್ರಿಯ ವ್ಯವಹಾರಗಳು ತನಗಿಲ್ಲ, ಭ್ರಷ್ಟಾಚಾರದ ಹಣದಲ್ಲಿ ರೆಸಾರ್ಟ್ ನಿರ್ಮಾಣದ ಕೆಲಸಕ್ಕೆ ಮುಂದಾಗಿಲ್ಲಎಂದು ಲಕ್ಷ್ಮಣ ಹೇಳಿದರು.

ಮೈಸೂರು: ನಗರದಲ್ಲಿಂದು ಕಾರ್ಯಕರ್ತರ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ (M Laxman) ತಾನು ಸರಳ ವ್ಯಕ್ತಿ ಅಂತ ಹೇಳುತ್ತಾ ಹಾಲಿ ಸಂಸದ ಪ್ರತಾಪ್ ಸಿಂಹ (Pratap Simha) ಮೇಲೆ ಪರೋಕ್ಷ ದಾಳಿ ನಡೆಸಿದರು. ತಮ್ಮ ವಿರುದ್ಧ ಕಾಮೆಂಟ್ ಮಾಡದಂತೆ ಪ್ರತಾಪ್ ಸಿಂಹ ನ್ಯಾಯಾಲಯದಿಂದ ತಡೆಯಾಜ್ಞೆ (stay order) ಪಡೆದುಕೊಂಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ಲಕ್ಷ್ಮಣ ಸಂಸದನ ಹೆಸರೇಳದೆ ದಾಳಿ ನಡೆಸಿದರು. ತಾನೊಬ್ಬ ಸರಳ ವ್ಯಕ್ತಿ ಮತ್ತು ಸದಾ ಜನರ ನಡುವೆ ಇರುವವ ಮತ್ತು ಅವರು ಕರೆ ಮಾಡಿದಾಗೆಲ್ಲ ಕೈಗೆ ಸಿಗುವ ವ್ಯಕ್ತಿಯಾಗಿದ್ದೇನೆ, ತಾನು ಕಾರಲ್ಲಿ ಓಡಾಡಲ್ಲ, ಜೂಜುಕೋರನಲ್ಲ, ಮದ್ಯವ್ಯಸನಿ ಅಲ್ಲ, ಧೂಮ್ರಪಾನಿಯೂ ಅಲ್ಲ, ರಾತ್ರಿಯ ವ್ಯವಹಾರಗಳು ತನಗಿಲ್ಲ, ಭ್ರಷ್ಟಾಚಾರದ ಹಣದಲ್ಲಿ ರೆಸಾರ್ಟ್ ನಿರ್ಮಾಣದ ಕೆಲಸಕ್ಕೆ ಮುಂದಾಗಿಲ್ಲ, ಮಡಿಕೇರಿಯಲ್ಲಿ ನೂರಾರು ಎಕರೆ ಕಾಫಿ ಪ್ಲಾಂಟೇಷನ್ ತನಗಿಲ್ಲ, ಈಗಲೂ ತಾನು ಬೆಂಗಳೂರಿಗೆ ಟ್ರೈನು ಮತ್ತು ಮಡಿಕೇರಿಗೆ ಬಸ್ಸಲ್ಲಿ ಹೋಗೋದು, ತನ್ನದು ಕ್ಲೀನ್ ಇಮೇಜ್ ಎಂದು ಲಕ್ಷ್ಮಣ ಹೇಳಿದರು.

ತಾನು ಒಕ್ಕಲಿಗ ಅಲ್ಲ ಎನ್ನುವ ಸಂಸದನ ಕೊಳಕು ಮನಸ್ಥಿಯನ್ನು ಜನರ ಮುಂದೆ ಬಿಚ್ಚಿಡಬೇಕಿದೆ, ಅವರೊಂದಿಗೆ ಮಾಧ್ಯಮ ಮುಂದೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ, ಅವರು ದಯವಿಟ್ಟು ಅ ತಡೆಯಾಜ್ಞೆಯನ್ನು ಹಿಂಪಡೆಯಲಿ ಎಂದು ಲಕ್ಷ್ಮಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಜ್ಯ ಬಿಜೆಪಿ ಒಂದೇ ಕುಟುಂಬದ ಹಿಡಿತಕ್ಕೆ ಸಿಕ್ಕಿ ನಲುಗಿರುವುದರಿಂದ ಹೊಸದಾಗಿ ಕಟ್ಟಬೇಕಿದೆ ಎನ್ನುತ್ತಿದ್ದಾರೆ ನಾಯಕರು: ಪ್ರಿಯಾಂಕ್ ಖರ್ಗೆ