Suniel Shetty Birthday: ಸುನೀಲ್ ಶೆಟ್ಟಿ ಒಟ್ಟೂ ಆಸ್ತಿ ಎಷ್ಟು? ಈ ನಟನ ಸಂಪಾದನೆಗೆ ಇದೆ ಹಲವು ಮಾರ್ಗ

Suniel Shetty Birthday Net Worth: ಸುನೀಲ್ ಶೆಟ್ಟಿ ಅವರು ಫಿಟ್ನೆಸ್​ಗೆ ಹೆಚ್ಚು ಒತ್ತು ನೀಡುತ್ತಾರೆ. ಅವರು ನಿತ್ಯ ವರ್ಕೌಟ್ ಮಾಡುತ್ತಾರೆ. 62ನೇ ವಯಸ್ಸಿನಲ್ಲೂ ಅವರು ಸಖತ್ ಫಿಟ್ ಆಗಿದ್ದಾರೆ. ಅವರು ಆರೋಗ್ಯಯುತ ಆಹಾರ ಸೇವನೆ ಮಾಡುತ್ತಾರೆ. ನಟನೆಯ ಹೊರತಾಗಿ, ಸುನೀಲ್ ಶೆಟ್ಟಿ ಅವರು ಅನೇಕ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಮಾಲೀಕರಾಗಿದ್ದಾರೆ. ಸುನೀಲ್ ಶೆಟ್ಟಿ ಅವರ ಪತ್ನಿ ಮನ ಶೆಟ್ಟಿ ಕೂಡ ಯಶಸ್ವಿ ಉದ್ಯಮಿ.

Suniel Shetty Birthday: ಸುನೀಲ್ ಶೆಟ್ಟಿ ಒಟ್ಟೂ ಆಸ್ತಿ ಎಷ್ಟು? ಈ ನಟನ ಸಂಪಾದನೆಗೆ ಇದೆ ಹಲವು ಮಾರ್ಗ
ಸುನೀಲ್ ಶೆಟ್ಟಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Aug 11, 2023 | 11:38 AM

ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ಅವರು ಬಾಲಿವುಡ್​ನ ಬೇಡಿಕೆಯ ಹೀರೋ. ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಇಂದು (ಆಗಸ್ಟ್ 11) ಅವರಿಗೆ ಜನ್ಮದಿನದ ಸಂಭ್ರಮ. ಎಲ್ಲ ಕಡೆಗಳಿಂದ ಅವರಿಗೆ ಬರ್ತ್​​ಡೇ ವಿಶ್​ಗಳು ಬರುತ್ತಿವೆ. ನಟನೆಯ ಜೊತೆಗೆ ಸುನೀಲ್ ಶೆಟ್ಟಿ (Suniel Shetty Birthday) ಅವರು ಬಿಸ್ನೆಸ್​​ನಲ್ಲೂ ತೊಡಗಿಕೊಂಡಿದ್ದಾರೆ. ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿರುವ ಸುನೀಲ್ ಶೆಟ್ಟಿ ಬಿಸ್ನೆಸ್ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಅವರ ವಾರ್ಷಿಕ ಗಳಿಕೆ ಕೋಟಿಗಳಲ್ಲಿದೆ. ಅವರ ಒಟ್ಟೂ ಆಸ್ತಿ ಎಷ್ಟು? ಯಾವೆಲ್ಲ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಸುನೀಲ್ ಶೆಟ್ಟಿ ಅವರು ಫಿಟ್ನೆಸ್​ಗೆ ಹೆಚ್ಚು ಒತ್ತು ನೀಡುತ್ತಾರೆ. ಅವರು ನಿತ್ಯ ವರ್ಕೌಟ್ ಮಾಡುತ್ತಾರೆ. 62ನೇ ವಯಸ್ಸಿನಲ್ಲೂ ಅವರು ಸಖತ್ ಫಿಟ್ ಆಗಿದ್ದಾರೆ. ಅವರು ಆರೋಗ್ಯಯುತ ಆಹಾರ ಸೇವನೆ ಮಾಡುತ್ತಾರೆ. ನಟನೆಯ ಹೊರತಾಗಿ, ಸುನೀಲ್ ಶೆಟ್ಟಿ ಅವರು ಅನೇಕ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಮಾಲೀಕರಾಗಿದ್ದಾರೆ. ಸುನೀಲ್ ಶೆಟ್ಟಿ ಅವರ ಪತ್ನಿ ಮನಾ ಶೆಟ್ಟಿ ಕೂಡ ಯಶಸ್ವಿ ಉದ್ಯಮಿ.

ಒಂದು ತಿಂಗಳಿಗೆ 50 ಲಕ್ಷ ರೂಪಾಯಿ ಗಳಿಕೆ

ಸುನೀಲ್ ಶೆಟ್ಟಿ 1992ರಲ್ಲಿ ಬಿಡುಗಡೆಯಾದ ‘ಬಲ್ವಾನ್’ ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಸುನೀಲ್ ಶೆಟ್ಟಿ ಅವರ ಒಟ್ಟೂ ಆಸ್ತಿ 120 ಕೋಟಿ ರೂಪಾಯಿ ಎನ್ನಲಾಗಿದೆ. ಸುನೀಲ್ ಶೆಟ್ಟಿ ಒಂದು ತಿಂಗಳಿಗೆ 50 ಲಕ್ಷ ರೂಪಾಯಿಗೂ ಹೆಚ್ಚು ಸಂಪಾದನೆ ಮಾಡುತ್ತಾರೆ. ಅವರ ವಾರ್ಷಿಕ ಗಳಿಕೆ ಸುಮಾರು 7ರಿಂದ 9 ಕೋಟಿ ರೂಪಾಯಿ. ಸುನೀಲ್ ಶೆಟ್ಟಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.

ಸುನೀಲ್ ಮುಂಬೈನಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಈ ಬಂಗಲೆಯ ಮೌಲ್ಯ ಸುಮಾರು 20 ಕೋಟಿ ರೂಪಾಯಿ ಇದೆ. ಇದಲ್ಲದೇ ಖಂಡಾಲದಲ್ಲಿ ಸುನೀಲ್ ಶೆಟ್ಟಿ ಫಾರ್ಮ್ ಹೌಸ್ ಕೂಡ ನಿರ್ಮಿಸಿದ್ದಾರೆ. ಈ ಫಾರ್ಮ್ ಹೌಸ್ ಬೆಲೆಯೂ ಕೋಟಿಯಲ್ಲಿದೆ. ಇದನ್ನು ಅವರು ಕನಸಿನ ಮನೆ ಎಂದು ಕರೆಯುತ್ತಾರೆ. ಸುನೀಲ್ ಶೆಟ್ಟಿ ಪತ್ನಿ ಮನಾ ಅವರೊಂದಿಗೆ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿದ್ದಾರೆ. ಇದರ ಅಡಿಯಲ್ಲಿ ಅವರು ಮುಂಬೈನಲ್ಲಿ 21 ಐಷಾರಾಮಿ ವಿಲ್ಲಾಗಳನ್ನು ನಿರ್ಮಿಸಿದ್ದಾರೆ. ಈ ವಿಲ್ಲಾಗಳನ್ನು ಖ್ಯಾತ ನಾಮರು ಖರೀದಿ ಮಾಡಿದ್ದಾರೆ.

ಇದನ್ನೂ ಓದಿ: ಟೊಮ್ಯಾಟೋ ದರದ ವಿಚಾರದಲ್ಲಿ ಹೇಳಿಕೆ ನೀಡಿ ಟ್ರೋಲ್ ಆದ ಸುನೀಲ್ ಶೆಟ್ಟಿ; ಕೊನೆಗೂ ಕ್ಷಮೆ ಕೇಳಿದ ನಟ

ಸುನೀಲ್ ಶೆಟ್ಟಿಗೆ ದುಬಾರಿ ಮತ್ತು ಐಷಾರಾಮಿ ಕಾರುಗಳೆಂದರೆ ಸಖತ್ ಇಷ್ಟ. ಅವರ ಕಾರು ಕ್ರೇಜ್ ಹೊಂದಿದ್ದಾರೆ. ಹಮ್ಮರ್ H3, ಮರ್ಸಿಡಿಸ್ ಬೆಂಜ್ ಎಸ್​ಯುವಿ, ಲ್ಯಾಂಡ್ ಕ್ರೂಸರ್, ಜೀಪ್ ರಾಂಗ್ಲರ್ ಮುಂತಾದ ಐಷಾರಾಮಿ ವಾಹನಗಳಿವೆ. ಸುನೀಲ್ ಶೆಟ್ಟಿ ಶ್ವಾನ ಪ್ರೇಮಿ ಕೂಡ ಹೌದು. ಅವರ ಬಳಿ ವಿದೇಶಿ ತಳಿಯ ನಾಯಿಗಳಿವೆ. ಇವುಗಳು ಕೂಡ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತವೆ. ಈ ವರ್ಷದ ಆರಂಭದಲ್ಲಿ ಸುನೀಲ್ ಶೆಟ್ಟಿ ಮಗಳು ಆಥಿಯಾ ಶೆಟ್ಟಿ ಮದುವೆ ಕ್ರಿಕೆಟರ್ ಕೆಎಲ್​ ರಾಹುಲ್ ಜೊತೆ ನೆರವೇರಿದೆ.

ಪ್ರೊಡಕ್ಷನ್ ಹೌಸ್ ಮಾಲೀಕ ಸುನೀಲ್ ಶೆಟ್ಟಿ

ಸುನೀಲ್ ಶೆಟ್ಟಿ ಉತ್ತಮ ನಟರಲ್ಲದೆ, ನಿರ್ಮಾಪಕ ಕೂಡ ಹೌದು. ಪಾಪ್‌ಕಾರ್ನ್ ಎಂಟರ್‌ಟೇನ್​​ಮೆಂಟ್ ಪ್ರೈವೇಟ್ ಲಿಮಿಟೆಡ್ ಪ್ರೊಡಕ್ಷನ್ ಹೌಸ್‌ನ ಮಾಲೀಕರಾಗಿದ್ದಾರೆ. ಇದರಿಂದ ಅವರಿಗೆ ಹಣ ಬರುತ್ತದೆ.

ಸಿನಿಮಾ ವಿಚಾರ

ಸುನೀಲ್ ಶೆಟ್ಟಿ 2016ರಿಂದ ಈಚೆ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಹೀರೋ ಆಗಿ ನಟಿಸೋದು ಕಡಿಮೆ ಆಗಿದೆ. ಸದ್ಯ ಅವರು ‘ಹೇರಾ ಫೇರಿ 3’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಹೀರೋ. ಈ ಸಿನಿಮಾದ ಮೊದಲೆರಡು ಪಾರ್ಟ್ ಹಿಟ್ ಎನಿಸಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:38 am, Fri, 11 August 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ