ಟೊಮ್ಯಾಟೋ ದರದ ವಿಚಾರದಲ್ಲಿ ಹೇಳಿಕೆ ನೀಡಿ ಟ್ರೋಲ್ ಆದ ಸುನೀಲ್ ಶೆಟ್ಟಿ; ಕೊನೆಗೂ ಕ್ಷಮೆ ಕೇಳಿದ ನಟ

ಟೊಮ್ಯಾಟೋ ಬೆಲೆ ವಿಚಾರದಲ್ಲಿ ವಾರದ ಹಿಂದೆ ಹೇಳಿಕೆ ಒಂದನ್ನು ನೀಡಿದ್ದರು. ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಈಗ ಈ ವಿಚಾರದಲ್ಲಿ ಸುನೀಲ್ ಶೆಟ್ಟಿ ಅವರು ಕ್ಷಮೆ ಕೇಳಿದ್ದಾರೆ.

ಟೊಮ್ಯಾಟೋ ದರದ ವಿಚಾರದಲ್ಲಿ ಹೇಳಿಕೆ ನೀಡಿ ಟ್ರೋಲ್ ಆದ ಸುನೀಲ್ ಶೆಟ್ಟಿ; ಕೊನೆಗೂ ಕ್ಷಮೆ ಕೇಳಿದ ನಟ
ಸುನೀಲ್ ಶೆಟ್ಟಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 19, 2023 | 8:18 AM

ಸೆಲೆಬ್ರಿಟಿಗಳು ಮಾತನಾಡುವಾಗ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಯಾವ ರೀತಿಯಲ್ಲಿ ಹೇಳಿಕೆ ನೀಡಿದರೂ ಅದನ್ನು ಟ್ರೋಲ್ ಮಾಡಲಾಗುತ್ತದೆ. ಬಾಲಿವುಡ್ ನಟ ಸುನೀಲ್ ಶೆಟ್ಟಿಗೂ (Suniel Shetty) ಈಗ ಹಾಗೆಯೇ ಆಗಿದೆ. ಅವರು ನೀಡಿರುವ ಹೇಳಿಕೆ ಅವರಿಗೆ ಮುಳುವಾಗಿದೆ. ಅವರು ಟೊಮ್ಯಾಟೋ ಬೆಲೆ (Tomato Price) ವಿಚಾರದಲ್ಲಿ ವಾರದ ಹಿಂದೆ ಹೇಳಿಕೆ ಒಂದನ್ನು ನೀಡಿದ್ದರು. ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಈಗ ಈ ವಿಚಾರದಲ್ಲಿ ಸುನೀಲ್ ಶೆಟ್ಟಿ ಅವರು ಕ್ಷಮೆ ಕೇಳಿದ್ದಾರೆ. ನನಗೆ ರೈತರ ಬಗ್ಗೆ ಕಾಳಜಿ ಇದೆ ಎಂದಿದ್ದಾರೆ.

ಸುನೀಲ್ ಶೆಟ್ಟಿ ಹೇಳಿದ್ದೇನು?

ಇತ್ತೀಚೆಗೆ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರು ಅದನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಕೇವಲ ಜನಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳ ಮೇಲೂ ಇದರ ಪ್ರಭಾವ ಉಂಟಾಗಿದೆ. ‘ನನ್ನ ಪತ್ನಿ ಯಾವಾಗಲೂ ತಾಜಾ ತರಕಾರಿಗಳನ್ನು ಖರೀದಿಸಲು ಆದ್ಯತೆ ನೀಡುತ್ತಾಳೆ. ಇತ್ತೀಚಿನ ದಿನಗಳಲ್ಲಿ ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದ್ದು, ಇದು ನಮ್ಮ ಮೇಲೂ ಪರಿಣಾಮ ಬೀರಿದೆ. ನಾನು ಈಗ ಕಡಿಮೆ ಟೊಮ್ಯಾಟೋಗಳನ್ನು ತಿನ್ನುತ್ತಿದ್ದೇನೆ. ಸೂಪರ್‌ಸ್ಟಾರ್ ಆಗಿರುವುದರಿಂದ ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಜನರು ಭಾವಿಸಿರಬಹುದು. ಆದರೆ ಇದು ನಿಜವಲ್ಲ. ನಾವು ಇಂತಹ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ’ ಎಂದಿದ್ದಾರೆ ಸುನೀಲ್ ಶೆಟ್ಟಿ.

ಟೀಕೆಗೆ ಒಳಗಾಗಿದ್ದ ಸುನೀಲ್ ಶೆಟ್ಟಿ

ಸುನೀಲ್ ಶೆಟ್ಟಿ ಅವರು ಹಣ ಖರ್ಚಾಗುತ್ತದೆ ಎನ್ನುವ ಕಾರಣಕ್ಕೆ ಕಡಿಮೆ ಟೊಮ್ಯಾಟೋ ತಿನ್ನುತ್ತೇನೆ ಎಂದಿದ್ದರು. ಅವರು ಸಾಮಾನ್ಯ ರೀತಿಯಲ್ಲೇ ಇದ್ದನ್ನು ಹೇಳಿದ್ದರು. ಆದರೆ ಕೆಲವರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ‘ಟೊಮ್ಯಾಟೋ ಬೆಲೆ ಜಾಸ್ತಿ ಆಗಿರುವುದರಿಂದ ರೈತರಿಗೆ ಸಹಾಯ ಆಗಿದೆ. ಇದು ಸುನೀಲ್ ಶೆಟ್ಟಿ ಅವರ ಗಮನದಲ್ಲಿಲ್ಲ. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ’ ಎಂದೆಲ್ಲ ಟೀಕೆ ಮಾಡಲಾಗಿತ್ತು.

ಇದನ್ನೂ ಓದಿ: ಸುನೀಲ್ ಶೆಟ್ಟಿ ಅಳಿಯನ್ನಾಗುತ್ತಿರುವ ಕೆಎಲ್ ರಾಹುಲ್ ಎಷ್ಟು ಕೋಟಿಯ ಒಡೆಯ ಗೊತ್ತಾ?

ಸ್ಪಷ್ಟನೆ ನೀಡಿದ ಸುನೀಲ್ ಶೆಟ್ಟಿ

‘ನಾನು ನಮ್ಮ ರೈತರನ್ನು ಪ್ರಾಮಾಣಿಕವಾಗಿ ಬೆಂಬಲಿಸುತ್ತೇನೆ. ಅವರ ಬಗ್ಗೆ ನನಗೆ ಕೆಟ್ಟ ಆಲೋಚನೆ ಬರುವುದಿಲ್ಲ. ಅವರ ಬೆಂಬಲದೊಂದಿಗೆ ನಾನು ಕೆಲಸ ಮಾಡಿದ್ದೇನೆ. ರೈತರು ನನ್ನ ಜೀವನದ ಪ್ರಮುಖ ಭಾಗ. ಹೋಟೆಲ್ ಉದ್ಯಮಿಯಾಗಿ ಅವರೊಂದಿಗೆ ನನ್ನ ಸಂಪರ್ಕ ಯಾವಾಗಲೂ ಇರುತ್ತದೆ. ನನ್ನ ಯಾವುದೇ ಹೇಳಿಕೆಗಳು ಅವರಿಗೆ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನನ್ನ ಕನಸಿನಲ್ಲಿಯೂ ಅವರ ವಿರುದ್ಧ ಮಾತನಾಡಲು ನಾನು ಯೋಚಿಸುವುದಿಲ್ಲ. ದಯವಿಟ್ಟು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಈ ವಿಷಯದಲ್ಲಿ ನಾನು ಹೆಚ್ಚಿಗೆ ಏನನ್ನೂ ಹೇಳಲಾರೆ’ ಎಂದಿದ್ದಾರೆ ಸುನೀಲ್ ಶೆಟ್ಟಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:48 am, Wed, 19 July 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್