KL Rahul Athiya Shetty Wedding: ಸುನೀಲ್ ಶೆಟ್ಟಿ ಅಳಿಯನ್ನಾಗುತ್ತಿರುವ ಕೆಎಲ್ ರಾಹುಲ್ ಎಷ್ಟು ಕೋಟಿಯ ಒಡೆಯ ಗೊತ್ತಾ?

KL Rahul Athiya Shetty Wedding: ಸದ್ಯ ಕ್ರಿಕೆಟ್​ನ ಮೂರು ಮಾದರಿಯಲ್ಲೂ ಟೀಂ ಇಂಡಿಯಾ ಪರ ಕಣಕ್ಕಿಳಿಯುತ್ತಿರುವ ರಾಹುಲ್, ಐಪಿಎಲ್​ನಲ್ಲೂ ಲಕ್ನೋ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ. ಹೀಗಾಗಿ ರಾಹುಲ್​ಗೆ ಬಿಸಿಸಿಐ ಮತ್ತು ಐಪಿಎಲ್ ಒಪ್ಪಂದಗಳಿಂದ ಮತ್ತು ಜಾಹೀರಾತುಗಳಿಂದ ಕೋಟ್ಯಂತರ ರೂಪಾಯಿ ಆದಾಯ ಹರಿದುಬರುತ್ತಿದೆ.

TV9 Web
| Updated By: ಪೃಥ್ವಿಶಂಕರ

Updated on:Jan 23, 2023 | 11:06 AM

ಟೀಂ ಇಂಡಿಯಾ ಕ್ರಿಕೆಟಿಗ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಸೋಮವಾರ, ಅಂದರೆ ಇಂದು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಭಾರತದ ಈ ಸ್ಟಾರ್ ಬ್ಯಾಟ್ಸ್‌ಮನ್ ರಾಹುಲ್, ಮತ್ತೊಬ್ಬ ಕನ್ನಡಿಗ, ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮಗಳಾದ ನಟಿ ಅಥಿಯಾ ಶೆಟ್ಟಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಮನೆಯಲ್ಲಿ ಮದುವೆ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿವೆ.

1 / 5
ಮದುವೆಗೆ ಕೆಲವೇ ಕೆಲವು ಮಂದಿಯನ್ನು ಮಾತ್ರ ಆಹ್ವಾನಿಸಲಾಗಿದ್ದು, ಮದುವೆಯ ನಂತರ ಮುಂಬೈನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಯಲಿದೆ ಎಂದು ತಿಳಿದುಬಂದಿದೆ. ಇನ್ನು ಸ್ಟಾರ್ ನಟನ ಮಗಳನ್ನು ಕೈ ಹಿಡಿಯುತ್ತಿರುವ ರಾಹುಲ್ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವುದಾದರೆ ಅದರ ಬಗೆಗಿನ ಒಂದಿಷ್ಟು ಕುತೂಹಲಕರ ಮಾಹಿತಿ ಇಲ್ಲಿದೆ.

2 / 5
ಸದ್ಯ ಕ್ರಿಕೆಟ್​ನ ಮೂರು ಮಾದರಿಯಲ್ಲೂ ಟೀಂ ಇಂಡಿಯಾ ಪರ ಕಣಕ್ಕಿಳಿಯುತ್ತಿರುವ ರಾಹುಲ್, ಐಪಿಎಲ್​ನಲ್ಲೂ ಲಕ್ನೋ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ. ಹೀಗಾಗಿ ರಾಹುಲ್​ಗೆ ಬಿಸಿಸಿಐ ಮತ್ತು ಐಪಿಎಲ್ ಒಪ್ಪಂದಗಳಿಂದ ಮತ್ತು ಜಾಹೀರಾತುಗಳಿಂದ ಕೋಟ್ಯಂತರ ರೂಪಾಯಿ ಆದಾಯ ಹರಿದುಬರುತ್ತಿದೆ. ಬಿಸಿಸಿಐನ ಎ ಗ್ರೇಡ್ ಗುತ್ತಿಗೆಯ ಆಟಗಾರನಾಗಿರುವ ರಾಹುಲ್ ಪ್ರತಿ ವರ್ಷ 5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.

3 / 5
ಹಾಗೆಯೇ ಐಪಿಎಲ್​ನಲ್ಲೂ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರಾಗಿರುವ ರಾಹುಲ್, ಐಪಿಎಲ್ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ ನಾಯಕರೂ ಆಗಿದ್ದು, ಲಕ್ನೋ ಅವರನ್ನು 17 ಕೋಟಿ ರೂ.ಗೆ ಖರೀದಿಸಿದೆ.

4 / 5
ಅಲ್ಲದೆ ಕ್ರಿಕೆಟ್ ಹೊರತಾಗಿ ಅನೇಕ ದೊಡ್ಡ ಕಂಪನಿಗಳ ಬ್ರ್ಯಾಂಡ್‌ ಅಂಬಾಸಿಡರ್ ಆಗಿರುವ ರಾಹುಲ್ ಅವರ ಒಟ್ಟು ಆಸ್ತಿಯ ಮೂಲ್ಯ ಸುಮಾರು 75 ಕೋಟಿ ರೂ. ಎಂದು ಹೇಳಲಾಗುತ್ತಿದೆ.

5 / 5

Published On - 11:04 am, Mon, 23 January 23

Follow us