- Kannada News Photo gallery Cricket photos From Virat Kohli To Yuvraj Singh Here Are 7 Famous CricketerActress Pairings see photos
ಸಿನಿಮಾ ನಟಿಯರನ್ನು ವರಿಸಿರುವ ಟೀಂ ಇಂಡಿಯಾದ 7 ಖ್ಯಾತ ಕ್ರಿಕೆಟಿಗರಿವರು; ಫೋಟೋ ನೋಡಿ
ಈ ಇಬ್ಬರ ಮದುವೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಟೀಂ ಇಂಡಿಯಾ ಕ್ರಿಕೆಟಿಗ ಮತ್ತು ಸಿನಿಮಾ ನಟಿಯ 7ನೇ ಜೋಡಿ ಇದಾಗಲಿದೆ. ಈ ಇಬ್ಬರಿಗೂ ಮುನ್ನ ಟೀಂ ಇಂಡಿಯಾ ಪ್ರಮುಖ ಆಟಗಾರರು ಮತ್ತು ನಟಿಯರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
Updated on:Jan 23, 2023 | 12:18 PM

ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮುದ್ದು ಮಗಳು, ನಟಿ ಅಥಿಯಾ ಶೆಟ್ಟಿ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಇಂದು ಸಪ್ತಪದಿ ತುಳಿಯುತ್ತಿದ್ದಾರೆ. ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದ ಈ ಜೋಡಿಯ ವೈವಾಹಿಕ ಬದುಕಿಗೆ ಅಧಿಕೃತ ಮುದ್ರೆ ಬೀಳಲಿದೆ. ಈ ಇಬ್ಬರ ಮದುವೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಟೀಂ ಇಂಡಿಯಾ ಕ್ರಿಕೆಟಿಗ ಮತ್ತು ಸಿನಿಮಾ ನಟಿಯ 7ನೇ ಜೋಡಿ ಇದಾಗಲಿದೆ. ಈ ಇಬ್ಬರಿಗೂ ಮುನ್ನ ಟೀಂ ಇಂಡಿಯಾ ಪ್ರಮುಖ ಆಟಗಾರರು ಮತ್ತು ನಟಿಯರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಅವರ ಪಟ್ಟಿ ಇಲ್ಲಿದೆ.

ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ನಟಿ ಗೀತಾ ಬಸ್ರಾ ಪ್ರೀತಿಸಿ 2015 ರ ನವೆಂಬರ್ನಲ್ಲಿ ಜಲಂಧರ್ ಬಳಿಯ ಗುರುದ್ವಾರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.

ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ರನ್ ಮಷಿನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ 4 ವರ್ಷಗಳ ಡೇಟಿಂಗ್ ನಂತರ 2017 ರ ಡಿಸೆಂಬರ್‌ನಲ್ಲಿ ಸಪ್ತಪದಿ ತುಳಿದರು.

ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ ಯುವರಾಜ್ ಸಿಂಗ್ ಹಾಗೂ ನಟಿ ಹೇಝಲ್ ಬಹಳ ದಿನಗಳ ಡೇಟಿಂಗ್ ನಂತರ 2016ರ ನವೆಂಬರ್ 30 ರಂದು ಮದುವೆಯಾದರು.

ಯುವರಾಜ್ ಸಿಂಗ್ ಮದುವೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ 'ಚಕ್ ದೇ ಇಂಡಿಯಾ' ಚಿತ್ರದ ನಟಿ ಸಾಗರಿಕಾ ಘಾಟ್ಗೆ ಹಾಗೂ ಮಾಜಿ ಕ್ರಿಕೆಟಿಗ ಜಹೀರ್ ಖಾನ್ 2017ರ ಏಪ್ರಿಲ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರೆ, ಅದೇ ವರ್ಷ ನವೆಂಬರ್ ತಿಂಗಳಲ್ಲಿ ವಿವಾಹವಾದರು.

ಮುಂಬೈನ ನೈಟ್ ಕ್ಲಬ್‌ನಲ್ಲಿ ಪರಸ್ಪರ ಭೇಟಿಯಾಗಿದ್ದ ನತಾಶಾ ಮತ್ತು ಹಾರ್ದಿಕ್ಗೆ ಮೊದಲ ಭೇಟಿಯಲ್ಲೇ ಪ್ರೇಮಾಂಕರುವಾಗಿತ್ತು. ಬಳಿಕ ಇನ್ಸ್ಟಾಗ್ರಾಮ್ನಲ್ಲಿ ಇಬ್ಬರು ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದ ಈ ಜೋಡಿ ತಮ್ಮ ಪ್ರೀತಿ ವಿಚಾರವನ್ನು ಬಹಿರಂಗಪಡಿಸಿದ್ದರು. ಅಲ್ಲದೆ ಈ ಜೋಡಿಗೆ 2020ರಲ್ಲಿ ಗಂಡು ಮಗು ಕೂಡ ಜನಿಸಿತು.

ದಿವಂಗತ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿ ಡಿಸೆಂಬರ್ 1968 ರಲ್ಲಿ ನಟಿ ಶರ್ಮಿಳಾ ಟ್ಯಾಗೋರ್ ಅವರನ್ನು ವಿವಾಹವಾಗುವುದರೊಂದಿಗೆ ಕ್ರಿಕೆಟ್ ಹಾಗೂ ಚಿತ್ರರಂಗದ ನಂಟಿಗೆ ಭದ್ರಬುನಾದಿ ಹಾಕಿದ್ದರು.
Published On - 12:18 pm, Mon, 23 January 23
























