68ನೇ ವಯಸ್ಸಿಗೆ ಈಜು ಕಲಿತ ಅನುಪಮ್ ಖೇರ್; ಈ ವಯಸ್ಸಲ್ಲಿ ಚಾಲೆಂಜ್ ಸ್ವೀಕರಿಸೋದೇಕೆ?

ಅನುಪಮ್ ಖೇರ್ ಅವರು 68ನೇ ವಯಸ್ಸಿನಲ್ಲಿ ಈಜು ಕಲಿತು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. 'ವಿಜಯ್ 69' ಸಿನಿಮಾದ ಸಂದರ್ಭದಲ್ಲಿ ಈ ಸಾಹಸಕ್ಕೆ ಕೈಹಾಕಿದ ಅವರು, ತಮ್ಮ ಭಯವನ್ನು ಜಯಿಸಿ ಹೊಸ ಕೌಶಲ್ಯವನ್ನು ಕಲಿತಿದ್ದಾರೆ.

68ನೇ ವಯಸ್ಸಿಗೆ ಈಜು ಕಲಿತ ಅನುಪಮ್ ಖೇರ್; ಈ ವಯಸ್ಸಲ್ಲಿ ಚಾಲೆಂಜ್ ಸ್ವೀಕರಿಸೋದೇಕೆ?
ಅನುಪಮ್ ಖೇರ್
Follow us
ರಾಜೇಶ್ ದುಗ್ಗುಮನೆ
|

Updated on:Nov 09, 2024 | 1:56 PM

ಅನುಪಮ್ ಖೇರ್ ಅವರಿಗೆ ಈಗ 69 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಯಾರೂ ಹೊಸದನ್ನು ಕಲಿಯುವ ಸಾಹಸ ಮಾಡಲ್ಲ. ಈಗಿರುವ ವಿದ್ಯೆಗಳೇ ಸಾಕು ಎಂದು ಸುಮ್ಮನಾಗುತ್ತಾರೆ. ಆದರೆ, ಅನುಪಮ್ ಖೇರ್ ಅವರು ಇದಕ್ಕೆ ಭಿನ್ನ. ಅವರು ತಮ್ಮ 68ನೇ ವಯಸ್ಸಿಗೆ ಈಜು ಕಲಿತಿದ್ದಾರೆ! ಹೌದು, ಇದು ಅಚ್ಚರಿ ಎನಿಸಿದರೂ ನಿಜ. ಹಿಂದೆಂದೂ ಕಲಿಯದ ಈ ವಿದ್ಯೆಯನ್ನು ಅವರು ಇಳಿ ವಯಸ್ಸಿನಲ್ಲಿ ಕರಗತ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ‘ವಿಜಯ್ 69’ ಹೆಸರಿನ ಸಿನಿಮಾ.

ಈ ಬಗ್ಗೆ ಅನುಪಮ್ ಖೇರ್ ಅವರು ತಮ್ಮ ಅನುಭವ ಹಂಚಿಕೊಂಡಿದ್ದರು. ‘ಮುಂದಿನ ವರ್ಷಗಳಲ್ಲಿ ನಾನು ಹೊಸದಾಗಿ ಏನನ್ನಾದರೂ ಕಲಿಯಲು ಪ್ರಯತ್ನಿಸುತ್ತೇನೆ. ಯಾವಾಗ ಏನು ಬೇಕಾದರೂ ಆಗಬಹುದು. ನನಗೆ ಸ್ವಮ್ಮಿಂಗ್ ಬರುತ್ತಿರಲಿಲ್ಲ. ಆದರೆ, ಆ ನಿಟ್ಟಲ್ಲಿ ನಾನು ಶ್ರಮ ಹಾಕಿದೆ. ನೀವು ಕೂಡ ಹೊಸದನ್ನು ಕಲಿಯಲು ಇದು ಸ್ಫೂರ್ತಿ ನೀಡಬಹುದು. ಇಷ್ಟು ವರ್ಷ ನೀವು ನೀಡಿದ ಪ್ರೀತಿ ಮತ್ತು ಆಶೀರ್ವಾದಗಳಿಗೆ ಧನ್ಯವಾದಗಳು’ ಎಂದಿದ್ದರು ಅನುಪಮ್ ಖೇರ್.

‘ಏನನ್ನಾದರೂ ಹೊಸದು ಮಾಡಬೇಕು ಎಂಬ ಚಾಲೆಂಜ್​ನ ಎಂಟು ವರ್ಷಗಳ ಹಿಂದೆ ನಾನು ತೆಗೆದುಕೊಂಡೆ. ವರ್ಷಗಳ ಹಿಂದೆ ನಾನು ವರ್ಕೌಟ್ ಮಾಡಿ ಫೋಟೋ ಪೋಸ್ಟ್ ಮಾಡಿದ್ದೆ. ಈ ರೀತಿಯ ಫೋಟೋ ಪೋಸ್ಟ್ ಮಾಡಲು ಧೈರ್ಯ ಬೇಕು. ಈಗ ಸ್ವಿಮ್ಮಿಂಗ್ ಚಾಲೆಂಜ್ ತೆಗೆದುಕೊಂಡಿದ್ದೆ’ ಎಂದಿದ್ದರು ಅವರು.

‘ನನಗೆ ನೀರಿನ ಬಗ್ಗೆ ಭಯ ಇತ್ತು. ಆದರೆ, ಈಗ ಅದರಿಂದ ದೂರ ಆಗಿದ್ದೇನೆ. ನಾನು ಈಗ ನೀರಿನಲ್ಲಿ ತೇಲುತ್ತೇನೆ. ನಾನು ಸೈಕ್ಲಿಂಗ್ ಮಾಡುತ್ತೇನೆ. ನಾನು ಓಡಬೇಕು ಎಂದುಕೊಂಡಿದ್ದೇನೆ. ಈ ರೀತಿಯ ಯೋಚನೆಗಳು 60+ ವಯಸ್ಸಿನವರಿಗೆ ಮಾತ್ರವಲ್ಲ, ಯುವಕರಿಗೂ ಸ್ಫೂರ್ತಿ ಕೊಡುತ್ತದೆ’ ಎಂದಿದ್ದಾರೆ ಅನುಪಮ್ ಖೇರ್.

ಇದನ್ನೂ ಓದಿ: ಅನುಪಮ್ ಖೇರ್ ಕಚೇರಿಯನ್ನು ಲೂಟಿ ಮಾಡಿದ ಕಳ್ಳರು; ಸಿಕ್ಕಿದ್ದೇನು?

ಅನುಪಮ್ ಖೇರ್ ಅವರ ನಟನೆಯ ‘ವಿಜಯ್ 69’ ನೆಟ್​ಫ್ಲಿಕ್ಸ್ ಮೂಲಕ ಪ್ರಸಾರ ಕಂಡಿದೆ. ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾದಲ್ಲಿ ಜಯ ಪ್ರಕಾಶ್ ನಾರಾಯಣ್ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:50 pm, Sat, 9 November 24

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್