ಅನುಪಮ್ ಖೇರ್ ಕಚೇರಿಯನ್ನು ಲೂಟಿ ಮಾಡಿದ ಕಳ್ಳರು; ಸಿಕ್ಕಿದ್ದೇನು?
ಮನೆಯ ಬಾಗಿಲನ್ನು ಒಡೆದು ಕಳ್ಳರು ಕಚೇರಿ ಒಳಗೆ ಎಂಟ್ರಿ ಪಡೆದಿದ್ದಾರೆ. ಕಚೇರಿ ಪೂರ್ತಿಯಾಗಿ ಅವರು ಹುಡುಕಾಡಿದ್ದಾರೆ. ಆ ಬಳಿಕ ಅವರು ಖೇರ್ ಪ್ರೊಡಕ್ಷನ್ ಕಂಪನಿಯ ಸಿನಿಮಾದ ನೆಗೆಟಿವ್ಗಳನ್ನು ಕದ್ದೊಯ್ದಿದ್ದಾರೆ. ಇನ್ನು, ಅವರು ಹಣ ಇಟ್ಟ ಬೀರುನ ಓಪನ್ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಬಾಲಿವುಡ್ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರೋ ನಟ ಅನುಪಮ್ ಖೇರ್ (Anupam Kher) ಅವರು ಆಗಾಗ ತಮ್ಮ ಹೇಳಿಕೆಗಳಿಂದ, ತಮ್ಮ ನಿಲುವುಗಳಿಂದ ಸುದ್ದಿ ಆಗುತ್ತಾರೆ. ಈಗ ಬುಧವಾರ (ಜೂನ್ 19) ರಾತ್ರಿ ಅವರ ಕಚೇರಿಯನ್ನು ಕಳ್ಳರು ಲೂಟಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಕಳ್ಳತನ ಆಗಿರೋ ವಸ್ತುಗಳು ಯಾವವು ಎನ್ನುವುದರ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.
ಮನೆಯ ಬಾಗಿಲನ್ನು ಒಡೆದು ಕಳ್ಳರು ಕಚೇರಿ ಒಳಗೆ ಎಂಟ್ರಿ ಪಡೆದಿದ್ದಾರೆ. ಕಚೇರಿ ಪೂರ್ತಿಯಾಗಿ ಅವರು ಹುಡುಕಾಡಿದ್ದಾರೆ. ಆ ಬಳಿಕ ಅವರು ಖೇರ್ ಪ್ರೊಡಕ್ಷನ್ ಕಂಪನಿಯ ಸಿನಿಮಾದ ನೆಗೆಟಿವ್ಗಳನ್ನು ಕದ್ದೊಯ್ದಿದ್ದಾರೆ. ಇನ್ನು, ಅವರು ಹಣ ಇಟ್ಟ ಬೀರುನ ಓಪನ್ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಅನುಪಮ್ ಖೇರ್ ಕಂಪನಿಯವರು ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪೊಲೀಸರಿಗೆ ಸಲ್ಲಿಕೆ ಮಾಡಿದ್ದಾರೆ. ಕಚೇರಿಯಲ್ಲಿ ಸಿಕ್ಕ ಎಲ್ಲಾ ವಸ್ತುಗಳನ್ನು ಆಟೋ ರಿಕ್ಷಾದಲ್ಲಿ ಕಳ್ಳರು ತೆಗೆದುಕೊಂಡು ಹೋಗಿದ್ದಾರೆ. ಹಣ ಕದಿಯಲು ಸಾಧ್ಯವಾಗದೇ ಇರುವುದರಿಂದ ದೊಡ್ಡ ಮಟ್ಟದ ನಷ್ಟ ಆಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಚರ್ಚೆ ಆಗುತ್ತಿದೆ. ಅನುಪಮ್ ಖೇರ್ ಅವರು ಕಳ್ಳರಿಗೆ ಬುದ್ಧಿ ಕೊಡಲಿ ಎಂದು ಕೇಳಿಕೊಂಡಿದ್ದಾರೆ.
ಅನುಪಮ್ ಖೇರ್ ಅವರು ಕನ್ನಡದಲ್ಲಿ ನಟಿಸಿದ್ದರು. ಕಳೆದ ವರ್ಷ ರಿಲೀಸ್ ಆದ ಶಿವರಾಜ್ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾದಲ್ಲಿ ಅನುಪಮ್ ಅವರು ಜೊತೆಯಾಗಿದ್ದರು. ಇವರ ಕಾಂಬಿನೇಷನ್ ಗಮನ ಸೆಳೆದಿತ್ತು. ಶ್ರೀನಿ ನಿರ್ದೇಶನದ ಈ ಸಿನಿಮಾ ಜನರಿಂದ ಮೆಚ್ಚುಗೆ ಪಡೆಯಿತು.
ಇದನ್ನೂ ಓದಿ: ‘ನೇರ ಮರವನ್ನೇ ಮೊದಲು ಕತ್ತರಿಸೋದು’; ಫಲಿತಾಂಶದ ಬಳಿಕ ನಿಗೂಢಾರ್ಥದಲ್ಲಿ ಅನುಪಮ್ ಖೇರ್ ಪೋಸ್ಟ್
ಅನುಪಮ್ ಖೇರ್ ಅವರು ನಾಲ್ಕು ದರ್ಶಕಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 1982ರಲ್ಲಿ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು, ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿ ಅನುಪಮ್ ಖೇರ್ ಸುದ್ದಿ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:00 pm, Fri, 21 June 24