ಕಾಲಿಗೆ ನಮಸ್ಕರಿಸಿದ ಅಮಿತಾಭ್ ಬಚ್ಚನ್; ಇಂಥ ಗೌರವ ಪಡೆದ ಈ ವ್ಯಕ್ತಿ ಯಾರು ಗೊತ್ತಾ?
ಚಿತ್ರರಂಗದಲ್ಲಿ ಅಮಿತಾಭ್ ಬಚ್ಚನ್ ಹಿರಿಯ ವ್ಯಕ್ತಿ. ಸಾಮಾನ್ಯವಾಗಿ ಎಲ್ಲರೂ ಅವರ ಕಾಲು ಮುಟ್ಟಿ ನಮಸ್ಕರಿಸುತ್ತಾರೆ. ಆದರೆ ‘ಕಲ್ಕಿ 2898 ಎಡಿ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದ ವೇದಿಕೆಯಲ್ಲಿ ಅಮಿತಾಭ್ ಬಚ್ಚನ್ ಅವರೇ ಈ ವ್ಯಕ್ತಿಯ ಕಾಲಿಗೆ ನಮಸ್ಕರಿಸಿದ್ದಾರೆ. ಇದನ್ನು ನೋಡಿ ಎಲ್ಲರಿಗೂ ಅಚ್ಚರಿಯಾಯಿತು. ಆ ಕ್ಷಣದ ಫೊಟೋ ಹಾಗೂ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಅಮಿತಾಭ್ ಬಚ್ಚನ್ ನಮಸ್ಕರಿಸಿದ್ದು ಯಾರಿಗೆ? ಇಲ್ಲಿದೆ ಮಾಹಿತಿ..
ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು 81ನೇ ವಯಸ್ಸಿನಲ್ಲೂ ತುಂಬ ಆ್ಯಕ್ಟೀವ್ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಅಮಿತಾಭ್ ಬಚ್ಚನ್ ನಟಿಸಿರುವ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜೂನ್ 27ರಂದು ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಇತ್ತೀಚೆಗೆ ಮುಂಬೈನಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಮಾಡಲಾಯಿತು. ಇದರಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ರಾಣಾ ದಗ್ಗುಬಾಟಿ, ಕಮಲ್ ಹಾಸನ್ ಮುಂತಾದವರು ಭಾಗಿ ಆಗಿದ್ದರು. ಈ ವೇಳೆ ಅಶ್ವಿನಿ ದತ್ (Ashwini Dutt) ಅವರ ಕಾಲಿಗೆ ಅಮಿತಾಭ್ ಬಚ್ಚನ್ ನಮಸ್ಕರಿಸಿದ್ದಾರೆ.
ಎಲ್ಲರೂ ಅಮಿತಾಭ್ ಬಚ್ಚನ್ ಅವರ ಕಾಲನ್ನು ಮುಟ್ಟಿ ನಮಸ್ಕಾರ ಮಾಡುವುದು ಸಹಜ. ಆದರೆ ‘ಕಲ್ಕಿ 2898 ಎಡಿ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ವೇದಿಕೆಯಲ್ಲಿ ಅಮಿತಾಭ್ ಬಚ್ಚನ್ ಅವರೇ ಅಶ್ವಿನಿ ದತ್ ಅವರ ಕಾಲಿಗೆ ನಮಸ್ಕರಿಸಿದ್ದು ನೋಡಿ ಎಲ್ಲರಿಗೂ ಅಚ್ಚರಿ ಆಯಿತು. ಆ ಸಂದರ್ಭದ ಫೊಟೋ ಮತ್ತು ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಯಾರು ಈ ಅಶ್ವಿನಿ ದತ್? ಇವರ ಬಗ್ಗೆ ತಿಳಿದುಕೊಳ್ಳಲು ಗೂಗಲ್ನಲ್ಲಿ ನೆಟ್ಟಿಗರು ಸರ್ಚ್ ಮಾಡುತ್ತಿದ್ದಾರೆ.
T 5047 – KALKI 2898 AD on 27th June .. an experience of a lifetime .. !! pic.twitter.com/rK1Neke1Qp
— Amitabh Bachchan (@SrBachchan) June 19, 2024
ಅಶ್ವಿನಿ ದತ್ ಯಾರು?
‘ವೈಜಯಂತಿ ಮೂವೀಸ್’ ಬ್ಯಾನರ್ ಮೂಲಕ ‘ಕಲ್ಕಿ 2898 ಎಡಿ’ ಸಿನಿಮಾ ನಿರ್ಮಾಣವಾಗಿದೆ. ಟಾಲಿವುಡ್ನ ಬಹುದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಇದು ಕೂಡ ಒಂದು. ಈ ಸಂಸ್ಥೆಯ ಮಾಲಿಕರೇ ಅಶ್ವಿನಿ ದತ್. 1974ರಲ್ಲಿ ‘ವೈಜಯಂತಿ ಮೂವೀಸ್’ ಆರಂಭವಾಯಿತು. ಹಲವಾರು ಸೂಪರ್ ಹಿಟ್ ಸಿನಿಮಾಗಳಿಗೆ ಈ ಸಂಸ್ಥೆ ಬಂಡವಾಳ ಹೂಡಿದೆ. ಎನ್ಟಿಆರ್, ಎಎನ್ಆರ್, ಕೃಷ್ಣ, ಚಿರಂಜೀವಿ, ವೆಂಕಟೇಶ್, ನಾಗಾರ್ಜುನ, ಮಹೇಶ್ ಬಾಬು ಮುಂತಾದ ಸ್ಟಾರ್ ನಟರ ಸಿನಿಮಾಗಳಿಗೆ ಅಶ್ವಿನಿ ದತ್ ಬಂಡವಾಳ ಹೂಡಿದ್ದಾರೆ. ಅವರ ಬಗ್ಗೆ ಅಮಿತಾಭ್ ಬಚ್ಚನ್ ಮಾತನಾಡಿದ್ದಾರೆ.
ಇದನ್ನೂ ಓದಿ: ಕಲ್ಕಿ 2898 ಎಡಿ ಇವೆಂಟ್ನಲ್ಲಿ ಮಿಂಚಿದ ತಾರೆಯರು: ಇಲ್ಲಿವೆ ಚಿತ್ರಗಳು
‘ಇವರು ವೈಜಯಂತಿ ಮೂವೀಸ್ನ ಮಾಲಿಕರು. ಇವರ ಇಬ್ಬರ ಮಕ್ಕಳು ಸ್ವಪ್ನ ಮತ್ತು ಪ್ರಿಯಾಂಕಾ ಕೂಡ ನಿರ್ಮಾಪಕರು. ಅಶ್ವಿನಿ ಅವರಿಗಿಂತ ಸರಳ ಮತ್ತು ವಿನಮ್ರ ವ್ಯಕ್ತಿಯನ್ನು ನಾನು ನೋಡಿಲ್ಲ. ಪ್ರತಿ ಬಾರಿಯೂ ಶೂಟಿಂಗ್ ಸೆಟ್ಗೆ ಅವರೇ ಮೊದಲು ಬರುತ್ತಾರೆ. ವಿಮಾನ ನಿಲ್ದಾಣಕ್ಕೆ ಬಂದು ನಿಮ್ಮನ್ನು ಸ್ವಾಗತಿಸುತ್ತಾರೆ. ನಿಮ್ಮ ಸುರಕ್ಷತೆಯನ್ನು ನೋಡಿಕೊಳ್ಳುತ್ತಾರೆ. ಯಾರೂ ಕೂಡ ಅವರ ರೀತಿ ಆಲೋಚನೆ ಮಾಡುವುದಿಲ್ಲ’ ಎಂದು ಹೇಳಿದ ಬಳಿಕ ಅಮಿತಾಭ್ ಬಚ್ಚನ್ ಅವರು ಅಶ್ವಿನಿ ದತ್ ಕಾಲಿಗೆ ನಮಸ್ಕರಿಸಿದರು.
Here is UPPER LIMIT of achievement for ASHWINI DUTT by AMITABH BACHCHAN doing this .I doubt from N T Rama Rao onwards till the latest young heroes anybody would have done this and neither did I ever saw BIG B do this to any other PRODUCER in his entire career. KUDOS DUTT GAARU 🙏 pic.twitter.com/3pLmtQJVAi
— Ram Gopal Varma (@RGVzoomin) June 20, 2024
ಅಮಿತಾಭ್ ಬಚ್ಚನ್ ತೋರಿಸಿದ ಈ ಗೌರವದ ಬಗ್ಗೆ ನಿರ್ದೇಶಕ, ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಅಮಿತಾಭ್ ಬಚ್ಚನ್ ಅವರಿಂದ ಈ ಗೌರವ ಪಡೆದಿದ್ದು ಅಶ್ವಿನಿ ದತ್ ಅವರ ಸಾಧನೆ. ಎನ್ಟಿಆರ್ ಅವರಿಂದ ಆರಂಭಗೊಂಡು, ಇಂದಿನ ಯುವ ಹೀರೋಗಳ ತನಕ ಯಾರೂ ಕೂಡ ಈ ರೀತಿ ಮಾಡಿಲ್ಲ ಎನಿಸುತ್ತದೆ. ಬಿಗ್ ಬಿ ಕೂಡ ತಮ್ಮ ವೃತ್ತಿಜೀವನದಲ್ಲಿ ಬೇರೆ ನಿರ್ಮಾಪಕರ ಕಾಲಿಗೆ ನಮಸ್ಕರಿಸಿದ್ದನ್ನು ನಾನು ನೋಡಿಲ್ಲ’ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.