ಪಟೌಡಿ ಪ್ಯಾಲೇಸ್ ಬಾಡಿಗೆ ಸೈಫ್​ಗೆ ಹೋಗಲ್ಲ; ಇನ್ಯಾರಿಗೆ ಸೇರುತ್ತೆ ಅಷ್ಟೆಲ್ಲ ಹಣ?

ಸೈಫ್ ಅಲಿ ಖಾನ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಅವರದ್ದು ಪಟೌಡಿ ಕುಟುಂಬ. ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ದೊಡ್ಡ ಹೆಸರು ಹೊಂದಿದ್ದಾರೆ. ಅವರು ಮೃತಪಟ್ಟ ನಂತರ ಈ ಮನೆಯ ಜವಾಬ್ದಾರಿ ಸೈಫ್ ಅಲಿ ಖಾನ್​ಗೆ ಸಿಕ್ಕಿದೆ.

ಪಟೌಡಿ ಪ್ಯಾಲೇಸ್ ಬಾಡಿಗೆ ಸೈಫ್​ಗೆ ಹೋಗಲ್ಲ; ಇನ್ಯಾರಿಗೆ ಸೇರುತ್ತೆ ಅಷ್ಟೆಲ್ಲ ಹಣ?
ಪಟೌಡಿ ಪ್ಯಾಲೇಸ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Nov 08, 2024 | 7:57 AM

ಪಟೌಡಿ ಪ್ಯಾಲೇಸ್ ಬಗ್ಗೆ ಅನೇಕರು ಕೇಳಿರುತ್ತೀರಿ. ಸೈಫ್ ಅಲಿ ಖಾನ್ ಒಡೆತನದಲ್ಲಿ ಈ ಪ್ಯಾಲೆಸ್ ಇದೆ. ಇದು ನಿಜಕ್ಕೂ ಅರಮನೆಯ ರೀತಿಯಲ್ಲೇ ಇದೆ ಅನ್ನೋದು ವಿಶೇಷ. ಇದನ್ನು ಸಿನಿಮಾ ಶೂಟಿಂಗ್​ಗೆ ಹಾಗೂ ವಿವಿಧ ಕಾರ್ಯಕ್ರಮಕ್ಕೆ ಬಾಡಿಗೆ ಪಡೆಯಲಾಗುತ್ತದೆ. ಆದರೆ, ಈ ಬಾಡಿಗೆ ಸೈಫ್ ಅಲಿ ಖಾನ್​ಗೆ ಸೇರುವುದಿಲ್ಲವಂತೆ. ಹಾಗಾದರೆ, ಇದು ಸೇರೋದು ಯಾರ ಕೈಗೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸೈಫ್ ಅಲಿ ಖಾನ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಅವರದ್ದು ಪಟೌಡಿ ಕುಟುಂಬ. ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ದೊಡ್ಡ ಹೆಸರು ಹೊಂದಿದ್ದಾರೆ. ಅವರು ಮೃತಪಟ್ಟ ನಂತರ ಈ ಮನೆಯ ಜವಾಬ್ದಾರಿ ಸೈಫ್ ಅಲಿ ಖಾನ್​ಗೆ ಸಿಕ್ಕಿದೆ. ಆದರೆ, ಇದರ ಬಾಡಿಗೆ ಸೇರುತ್ತಿರುವುದು ಸೈಫ್ ಅಲಿ ಖಾನ್ ಅವರ ತಾಯಿ ಶರ್ಮಿಳಾ ಟಾಗೋರ್ ಅವರಿಗೆ.

ಶರ್ಮಿಳಾ ಹಾಗೂ ಮನ್ಸೂರ್ 1968ರಲ್ಲಿ ವಿವಾಹ ಆದರು. 1970ರಲ್ಲಿ ಸೈಫ್ ಜನಿಸಿದರು. 2011ರಲ್ಲಿ ಮನ್ಸೂರ್ ನಿಧನ ಹೊಂದಿದರು. ಈಗ ಒಡೆತನ ಸೈಫ್ ಅವರದ್ದೇ ಆದರೂ, ಅದನ್ನು ನೋಡಿಕೊಳ್ಳುವ ಜವಾಬ್ದಾರಿ ಶರ್ಮಿಳಾ ತೆಗೆದುಕೊಂಡಿದ್ದಾರೆ. ಶರ್ಮಿಳಾಗೆ ಈಗ 79 ವರ್ಷ. ಈಗಲೂ ಅವರು ಫಿಟ್ ಆಗಿದ್ದಾರೆ.

ಕಪಿಲ್ ಶರ್ಮಾ ಶೋನಲ್ಲಿ ಸೈಫ್ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಈ ಬಗ್ಗೆ ಕೇಳಲಾಗಿದೆ. ‘ಸಿನಿಮಾ ಶೂಟಿಂಗ್​ನಿಂದ ಬಾಡಿಗೆ ಸಾಕಷ್ಟು ಬರುತ್ತದೆ ಅಲ್ಲವೇ’ ಎಂದು ಕೇಳಲಾಯಿತು. ‘ಅದನ್ನು ಅಮ್ಮ ತೆಗೆದುಕೊಳ್ಳುತ್ತಾರೆ’ ಎಂದು ಸೈಫ್ ಹೇಳಿದ್ದಾರೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸೇರಿ ಅನೇಕ ಸಿನಿಮಾದ ಶೂಟಿಂಗ್ ಇಲ್ಲಿ ನಡೆದಿದೆ. ಇದು ಹರಿಯಾಣದಲ್ಲಿ ಇದೆ. ಬಣ್ಣ ಹೊಡಿಸಿದರೆ ಹೆಚ್ಚು ಖರ್ಚಾಗುತ್ತದೆ ಎಂಬ ಕಾರಣಕ್ಕೆ ಇದಕ್ಕೆ ಕೇವಲ ಸುಣ್ಣ ಬಳಿಯಲಾಗುತ್ತದೆ.

ಇದನ್ನೂ ಓದಿ: ಸೈಫ್ ಅಲಿ ಖಾನ್ ಒಡೆತನದ ಪಟೌಡಿ ಪ್ಯಾಲೇಸ್​ಗೆ ಬಣ್ಣ ಬಳಿಯೋದೆ ಇಲ್ಲ: ಕಾರಣ ಏನು?

ಸೈಫ್ ಅಲಿ ಖಾನ್ ಅವರು ಅನೇಕ ಕಡೆಗಳಲ್ಲಿ ಆಸ್ತಿ ಹೊಂದಿದ್ದಾರೆ. ಮುಂಬೈ ಮೊದಲಾದ ಕಡೆಗಳಲ್ಲಿ ಅವರು ಮನೆ ಹೊಂದಿದ್ದಾರೆ. ಕರೀನಾ ಅವರನ್ನು ಮದುವೆ ಆಗಿ ಇಬ್ಬರು ಮಕ್ಕಳನ್ನು ಅವರು ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:56 am, Fri, 8 November 24