ಸೈಫ್ ಅಲಿ ಖಾನ್ ಒಡೆತನದ ಪಟೌಡಿ ಪ್ಯಾಲೇಸ್​ಗೆ ಬಣ್ಣ ಬಳಿಯೋದೆ ಇಲ್ಲ: ಕಾರಣ ಏನು?

Saif Ali Khan: ಸೈಫ್ ಅಲಿ ಖಾನ್ ಒಡೆತನದ ಪಟೌಡಿ ಪ್ಯಾಲೆಸ್, ಭಾರತದ ಸುಂದರ ಮತ್ತು ಐಶಾರಾಮಿ ಅರಮನೆಗಳಲ್ಲಿ ಒಂದು. ಈ ಪಟೌಡಿ ಪ್ಯಾಲೆಸ್ ಗೆ ಬಣ್ಣ ಬಳಿಯುವುದೇ ಇಲ್ಲವಂತೆ ಇದಕ್ಕೆ ಕಾರಣ ಇದೆ.

ಸೈಫ್ ಅಲಿ ಖಾನ್ ಒಡೆತನದ ಪಟೌಡಿ ಪ್ಯಾಲೇಸ್​ಗೆ ಬಣ್ಣ ಬಳಿಯೋದೆ ಇಲ್ಲ: ಕಾರಣ ಏನು?
ಪಟೌಡಿ ಪ್ಯಾಲೆಸ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Sep 19, 2024 | 3:44 PM

ಸೈಫ್ ಅಲಿ ಖಾನ್ ಅವರದ್ದು ಪಟೌಡಿ ಕುಟುಂಬ. ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಭಾರತದ ಮಾಜಿ ಕ್ರಿಕೆಟಿಗ ಆಗಿದ್ದರು. ಅವರು ಸಾಕಷ್ಟು ಐಷಾರಾಮಿ ಜೀವನ ನಡೆಸಿದ್ದರು. ಈಗ ಇವರ ಹೆಸರಲ್ಲಿ ಇದ್ದ ಪಟೌಡಿ ಪ್ಯಾಲೇಸ್ ಸೈಫ್ ಅಲಿ ಖಾನ್ ಪಾಲಾಗಿದೆ. ಇದು ದೆಹಲಿ ಸಮೀಪದ ಗುರುಗ್ರಾಮದಲ್ಲಿ ಇದೆ. ಹಾಗಾದರೆ, ಈ ಪಟೌಡಿ ಪ್ಯಾಲೇಸ್​ನ ವಿಶೇಷತೆಗಳು ಏನು? ಆ ಬಗ್ಗೆ ಇಲ್ಲಿದೆ ವಿವರ.

ಪಟೌಡಿ ಪ್ಯಾಲೇಸ್ ನಿರ್ಮಾಣ ಆಗಿದ್ದು 90 ವರ್ಷಗಳ ಹಿಂದೆ. ಅಂದರೆ 1935ರಲ್ಲಿ ಇದರ ನಿರ್ಮಾಣ ಆಯಿತು. ಈ ಮನೆ ತಲತಲಾಂತರಗಳಿಂದ ಆ ಕುಟುಂಬದ ಬೇರೆ ಬೇರೆ ಸದಸ್ಯರ ಕೈ ಸೇರುತ್ತಿದೆ. ಈಗ ಸೈಫ್ ಅವರ ಕೈಯಲ್ಲಿ ಈ ನಿವಾಸ ಇದೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸೇರಿ ಅನೇಕ ಚಿತ್ರಗಳು ಇಲ್ಲಿ ಶೂಟ್ ಆಗಿವೆ.

ಪಟೌಡಿ ಬಿಳಿ ಬಣ್ಣದಲ್ಲೇ ಇದೆ. ಇದಕ್ಕೆ ಕಾರಣ ಏನು? ಈ ಬಗ್ಗೆ ನಟಿ ಹಾಗೂ ಸೈಫ್ ಸಹೋದರಿ ಸೋಹಾ ಖಾನ್ ಅವರು ಮಾತನಾಡಿದ್ದಾರೆ. ಯಾರೂ ಈ ಕಟ್ಟಡಕ್ಕೆ ಪೇಂಟ್ ಮಾಡುವ ಸಾಹಸಕ್ಕೆ ಮುಂದಾಗಿಲ್ಲ. ಬದಲಿಗೆ ಇಡೀ ಕಟ್ಟಡಕ್ಕೆ ಸುಣ್ಣವನ್ನೇ ಬಳಿಯಲಾಗಿದೆ. ಕಡಿಮೆ ಖರ್ಚಲ್ಲಿ ಆಗುತ್ತದೆ ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗಿದೆ. ಸದ್ಯ ಶರ್ಮಿಳಾ ಟಾಗೋರ್ ಅವರು ಇಡೀ ಕಟ್ಟಡವನ್ನು ನೋಡಿಕೊಳ್ಳುತ್ತಿದ್ದಾರೆ. ‘ನನ್ನ ತಾಯಿಗೆ ಪಟೌಡಿಯ ಪ್ರತಿ ತಿಂಗಳ ಖರ್ಚು-ವೆಚ್ಛಗಳು ಗೊತ್ತು. ಇದಕ್ಕೆ ಪೇಂಟಿಂಗ್ ಮಾಡಲೇ ಇಲ್ಲ. ಏಕೆಂದರೆ ಅದು ತುಂಬಾನೇ ದುಬಾರಿ ಆಗಲಿದೆ. ಇಲ್ಲಿ ಹೊಸ ವಸ್ತುಗಳನ್ನು ತರದೇ ಸಾಕಷ್ಟು ಸಮಯ ಹಿಡಿದಿದೆ’ ಎಂದಿದ್ದಾರೆ ಸೋಹಾ.

ಇದನ್ನೂ ಓದಿ:ಸೈಫ್ ಅಲಿ ಖಾನ್ ಟೀಸರ್: ‘ದೇವರ’ನಿಗೂ ಭೀಕರ ಈ ಭೈರ

‘ನಾನು ಜನಿಸೋವಾಗ ರಾಯಲ್ ಟೈಟಲ್ ಇರಲಿಲ್ಲ. ನನ್ನ ಸಹೋದರ (ಸೈಫ್ ಅಲಿ ಖಾನ್) ಹುಟ್ಟುವಾಗ ಅವರು ಯುವ ರಾಜಕುಮಾರ ಆಗಿದ್ದರು. ಏಕೆಂದರೆ ಅವರು ಜನಿಸಿದ್ದು 70ರ ದಶಕದಲ್ಲಿ. ಆಗಿನ್ನೂ ರಾಯಲ್ ಟೈಟಲ್ ತೆಗೆದಿರಲಿಲ್ಲ. ನನ್ನ ಅಜ್ಜಿ ಭೋಪಾಲ್​ನ ಬೇಗಂ ಆಗಿದ್ದರು. ನನ್ನ ತಾತ ಪಟೌಡಿಯ ನವಾಬ್ ಆಗಿದ್ದರು. ನಮ್ಮ ಅಜ್ಜ ಹಾಗೂ ಅಜ್ಜಿ ಹಲವು ವರ್ಷ ಪ್ರಿತಿಸಿದ್ದರು. ಆದರೆ, ಈ ಪ್ರೀತಿಗೆ ಒಪ್ಪಿಗೆ ಸಿಗಲಿಲ್ಲ. ಮಾವನನ್ನು ಇಂಪ್ರೆಸ್ ಮಾಡಲು ನಮ್ಮ ತಾತ ಇದನ್ನು ಕಟ್ಟಿದ್ದರು’ ಎಂದಿದ್ದಾರೆ ಅವರು. 10 ಎಕರೆಯಲ್ಲಿ ಪಟೌಡಿ ಪ್ಯಾಲೆಸ್ ಇದೆ. ಇದರಲ್ಲಿ 150ಕ್ಕೂ ಅಧಿಕ ರೂಂಗಳು ಇವೆ. ಇದನ್ನು ನೋಡಬೇಕು ಎನ್ನುವ ಆಸೆ ಅನೇಕರಿಗೆ ಇದೆ. ಕೆಲವು ಸಿನಿಮಾಗಳಲ್ಲಿ ಇದರ ಬಳಕೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು