ಐಶ್ವರ್ಯಾಗೆ ಅಪಘಾತ ಆದಾಗ ಎರಡು ದಿನ ನಿದ್ರಿಸಿರಲಿಲ್ಲ ಅಮಿತಾಭ್
ಅಭಿಷೇಕ್ ಬಚ್ಚನ್ ಜೊತೆಗೆ ಐಶ್ವರ್ಯಾ ರೈ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೆ ಅಮಿತಾಬ್ ಬಚ್ಚನ್ರ ವಿಡಿಯೋ ಒಂದು ವೈರಲ್ ಆಗಿದ್ದು, ಐಶ್ವರ್ಯಾ ರೈ ಗೆ ಅಪಘಾತವಾಗಿದ್ದಾಗ ತಾವು ಎರಡು ದಿನ ನಿದ್ರಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಐಶ್ವರ್ಯಾ ರೈ ಹಾಗೂ ಅಮಿತಾಭ್ ಬಚ್ಚನ್ ದೂರ ಆಗುತ್ತಿದ್ದಾರೆ ಎನ್ನುವ ಮಾತಿದೆ. ಆದರೆ, ಈ ವಿಚಾರ ಇನ್ನೂ ಅಧಿಕೃತ ಆಗಿಲ್ಲ. ಇವರು ನಡೆದುಕೊಳ್ಳುತ್ತಿರುವ ರೀತಿ ಹಾಗೊಂದು ಅನುಮಾನ ಹುಟ್ಟುಹಾಕಿದೆ. ಈ ಮೊದಲು ಐಶ್ವರ್ಯಾ ರೈ ಅವರು ಅಪಘಾತಕ್ಕೆ ಒಳಗಾಗಿದ್ದರು. ಆಗ ಅಮಿತಾಭ್ ಬಚ್ಚನ್ ನಿದ್ದೆಯನ್ನೇ ಮಾಡಿರಲಿಲ್ಲ ಅನ್ನೋ ವಿಚಾರ ನಿಮಗೆ ಗೊತ್ತೇ? ಐಶ್ವರ್ಯಾ ಅವರು ಈ ವಿಚಾರವನ್ನು ಈ ಮೊದಲು ಹೇಳಿಕೊಂಡಿದ್ದರು. ಈ ಬಾಂಧವ್ಯ ಈಗ ಎಲ್ಲಿ ಹೋಯಿತು ಎಂದು ಅನೇಕರು ಕೇಳುತ್ತಿದ್ದಾರೆ.
ಐಶ್ವರ್ಯಾ ರೈ, ಅಮಿತಾಭ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ಅವರು 2003ರಲ್ಲಿ ನಾಸಿಕ್ನಲ್ಲಿ ‘ಖಾಕಿ’ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ ಇದ್ದರು. ಈ ವೇಳೆ ಐಶ್ವರ್ಯಾ ಅವರಿಗೆ ಅಪಘಾತ ಸಂಭವಿಸಿತ್ತು. ಇದರಿಂದ ಇಡೀ ಸಿನಿಮಾ ತಂಡ ಶಾಕ್ಗೆ ಒಳಗಾಯಿತು. ಸ್ಟಂಟ್ಮ್ಯಾನ್ ಐಶ್ವರ್ಯಾ ಕೂತಿದ್ದ ಚೇರ್ಗೆ ಕಾರ್ ನುಗ್ಗಿಸಿದ್ದ. ನಂತರ ಐಶ್ವರ್ಯಾ ಆಸ್ಪತ್ರೆ ಸೇರಿದ್ದರು. ಐಶ್ವರ್ಯಾ ರೈ ಅವರು ಆಸ್ಪತ್ರೆ ಸೇರಿದ್ದಾಗ ಅಮಿತಾಭ್ ಬಚ್ಚನ್ ಸಾಕಷ್ಟು ಅಪ್ಸೆಟ್ ಆಗಿದ್ದರು. ಅವರಿಗೆ ಎರಡು ದಿನ ನಿದ್ದೆ ಮಾಡಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ:ಮದುವೆ ಉಂಗುರ ತೆಗೆದಿಟ್ಟ ಐಶ್ವರ್ಯಾ ರೈ; ಡಿವೋರ್ಸ್ ಮಾತಿಗೆ ಇನ್ನೊಂದು ಸಾಕ್ಷಿ?
‘ನಿಮ್ಮ ಮಗಳನ್ನು ಮುಂಬೈಗೆ ಕರೆತರಬೇಕೆ ಎಂದು ನಾನು ಐಶ್ವರ್ಯಾ ಅವರ ತಾಯಿಯನ್ನು ಕೇಳಿದೆ. ನಾವು ಅನಿಲ್ ಅಂಬಾನಿ ಅವರ ಖಾಸಗಿ ವಿಮಾನವನ್ನು ಪಡೆದಿದ್ದೆವು. ನಾಸಿಕ್‌ನಲ್ಲಿ ರಾತ್ರಿ ಲ್ಯಾಂಡಿಂಗ್ ಸೌಲಭ್ಯವಿಲ್ಲದ ಕಾರಣ, ಆಸ್ಪತ್ರೆಯಿಂದ 45 ನಿಮಿಷಗಳ ದೂರದಲ್ಲಿರುವ ಮಿಲಿಟರಿ ನೆಲೆಯಲ್ಲಿ ವಿಮಾನವನ್ನು ಇಳಿಸಲು ನಾವು ದೆಹಲಿಯಿಂದ ಅನುಮತಿ ಪಡೆಯಬೇಕಾಗಿತ್ತು. ವಿಮಾನದ ಸೀಟ್ಗಳನ್ನು ತೆಗೆದುಹಾಕಬೇಕಾಯಿತು. ಸಣ್ಣ ಘಟನೆಯನ್ನು ದೊಡ್ಡದಾಗಿ ಮಾಡಲಾಗುತ್ತಿದೆ ಎಂದು ಎಲ್ಲರೂ ಹೇಳಿದ್ದರು’ ಎಂದಿದ್ದಾರೆ ಅಮಿತಾಭ್
‘ನಾನು ಎರಡು ರಾತ್ರಿ ಮಲಗಿಲ್ಲ. ಆ ಘಟನೆ ನನ್ನ ಕಣ್ಣೆದುರೇ ನಡೆಯಿತು. ಕೆಲವು ಕಡೆ ಮೂಳೆ ಮುರಿದಿತ್ತು. ಕೆಲವು ಕಡೆ ಗಾಯಗಳು ಆಗಿತ್ತು’ ಎಂದಿದ್ದಾರೆ ಅಮಿತಾಭ್. ಈಗ ಅಮಿತಾಭ್ ಬಚ್ಚನ್ ಅವರಿಂದಲೇ ವಿಚ್ಛೇದನ ಆಗಿದೆ ಎನ್ನಲಾಗಿದೆ. ಐಶ್ವರ್ಯಾ ಹಾಗೂ ಅಭಿಷೇಕ್ ದೂರ ಆಗಲು ಅಮಿತಾಭ್ ಕಾರಣ ಎನ್ನುವ ಮಾತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ