‘ತೃಪ್ತಿ ದಿಮ್ರಿಗೆ ಮದುವೆ ಆಗಲ್ಲ’; ಹೀಗೆ ಭವಿಷ್ಯ ನುಡಿದಿದ್ದು ಯಾರು?

‘ಅನಿಮಲ್​’ ಸಿನಿಮಾದಲ್ಲಿ ತೃಪ್ತಿ ದಿಮ್ರಿ ಮಾಡಿದ್ದು ಒಂದು ಚಿಕ್ಕ ಪಾತ್ರ ಅಷ್ಟೇ. ಆದರೆ ಆ ಪಾತ್ರದಿಂದ ಅವರಿಗೆ ಸಿಕ್ಕ ಯಶಸ್ಸು ತುಂಬ ದೊಡ್ಡದು. ಬೋಲ್ಡ್​ ಆಗಿ ಕಾಣಿಸಿಕೊಂಡ ಅವರು ಸಖತ್​ ಜನಪ್ರಿಯತೆ ಗಳಿಸಿದರು. ಈಗ ಅವರ ಡಿಮ್ಯಾಂಡ್​ ಹೆಚ್ಚಿದೆ.

‘ತೃಪ್ತಿ ದಿಮ್ರಿಗೆ ಮದುವೆ ಆಗಲ್ಲ’; ಹೀಗೆ ಭವಿಷ್ಯ ನುಡಿದಿದ್ದು ಯಾರು?
ತೃಪ್ತಿ ದಿಮ್ರಿ
Follow us
ರಾಜೇಶ್ ದುಗ್ಗುಮನೆ
|

Updated on: Sep 20, 2024 | 8:30 AM

ನಟಿ ತೃಪ್ತಿ ದಿಮ್ರಿ ಅವರು ಚಿತ್ರರಂಗಕ್ಕೆ ಬಂದು ಹಲವು ಸಮಯ ಕಳೆದಿದೆ. ಆದರೆ, ಅವರಿಗೆ ಫೇಮ್ ಸಿಕ್ಕಿದ್ದು ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಮೂಲಕ. ಅವರು ಮಾಡಿದ್ದು ಸಣ್ಣ ಪಾತ್ರವಾದರೂ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿತ್ತು. ಈಗ ಅವರಿಗೆ ಮದುವೆ ಆಗಲ್ಲ ಎನ್ನುವ ಭಯ ಹುಟ್ಟಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

‘ನಾನು ಉತ್ತರಾಖಂಡದವಳು. ಆದರೆ ಹುಟ್ಟಿದ್ದು ಬೆಳೆದಿದ್ದು ದೆಹಲಿಯಲ್ಲಿ. ನನ್ನ ಪಾಲಕರು ದೆಹಲಿಯಲ್ಲಿ ಇದ್ದರು. ನಾನು ಬಾಂಬೆಗೆ ಶಿಫ್ಟ್ ಆದಾಗ ನನಗೆ ಭಿನ್ನ ಎನಿಸಿತು. ನಿತ್ಯ 50-60 ಜನ ಇರೋ ರೂಂನಲ್ಲಿ ಇರಬೇಕಿತ್ತು. ಈ ಪ್ರೊಫೇಷನ್​ಗೆ ನಿಮ್ಮ ಮಗಳನ್ನು ಏಕೆ ಕಳುಹಿಸಿದಿರಿ ಎಂದು ಕೇಳಿದವರು ಅನೇಕರು ಇದ್ದಾರೆ. ಅವಳು ಕೆಟ್ಟವರ ಸಹವಾಸ ಮಾಡುತ್ತಾಳೆ, ಅವಳಿಗೆ ಮದುವೆ ಆಗಲ್ಲ ಎಂದು ಹೇಳಿದವರೂ ಇದ್ದಾರೆ’ ಎಂದಿದ್ದಾರೆ ತೃಪ್ತಿ.

‘ಆ ಒಂದು ಹಂತಕ್ಕೆ ಹೋದರೂ ನಿಮಗೆ ಕೆಲಸ ಸಿಗುತ್ತಿಲ್ಲ ಎಂದರೆ ಗೊಂದಲ ಸೃಷ್ಟಿ ಆಗುತ್ತದೆ. ಆದರೆ, ತಂದೆ-ತಾಯಿ ಬಳಿ ಮರಳಿ ಹೋಗಿ ನನ್ನ ಕೈಯಲ್ಲಿ ಅದು ಸಾಧ್ಯವಾಗಿಲ್ಲ ಎಂದು ಹೇಳಬಾರದು ಎಂದು. ನನ್ನ ಮೊದಲ ಸಿನಿಮಾ ಲೈಲಾ ಮಜ್ನು ರಿಲೀಸ್ ಆದ ಬಳಿಕ ಎಲ್ಲರೂ ಖುಷಿ ಪಟ್ಟಿದ್ದರು’ ಎಂದಿದ್ದಾರೆ ತೃಪ್ತಿ. ಈ ಸಿನಿಮಾ ಇತ್ತೀಚೆಗೆ ರೀ-ರಿಲೀಸ್ ಆಗಿದೆ.

ತೃಪ್ತಿ ಜೀವನ ಸಂಪೂರ್ಣವಾಗಿ ಬದಲಾಗಿದ್ದು ‘ಅನಿಮಲ್’ ಸಿನಿಮಾ ಮೂಲಕ. ಇದಾದ ಬಳಿಕ ಅವರನ್ನು ಹುಡುಕಿ ಅನೇಕ ಆಫರ್​ಗಳು ಬರುತ್ತಿವೆ. ಅವರು ನ್ಯಾಷನಲ್ ಕೃಶ್ ಎಂದು ಕೂಡ ಎನಿಸಿಕೊಂಡಿದ್ದಾರೆ. ‘ನಾನು ದೇವರಿಗೆ ಧನ್ಯವಾದ ಹೇಳಬೇಕು. ಜನರು ನನ್ನನ್ನು ಇಷ್ಟಪಡುತ್ತಿದ್ದಾರೆ. ನನ್ನ ಸಿನಿಮಾ ಬಗ್ಗೆ ಜನರು ಮಾತನಾಡುತ್ತಿದ್ದಾರೆ’ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:  ಸ್ಟಾರ್​ ನಟರ ಸಿನಿಮಾಗಳಿಗೆ ಬಹುಬೇಡಿಕೆಯ ಹೀರೋಯಿನ್​ ಆದ ತೃಪ್ತಿ ದಿಮ್ರಿ

ತೃಪ್ತಿ ದಿಮ್ರಿ ಕೈಯಲ್ಲಿ ಹಲವು ಸಿನಿಮಾಗಳು ಇವೆ. ರಾಜ್​ಕುಮಾರ್ ರಾವ್ ಅವರ ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಸಿನಿಮಾದಲ್ಲಿ ನಟಿಸುತ್ತಿದ್ದು, ಅಕ್ಟೋಬರ್ 11ರಂದು ಚಿತ್ರ ರಿಲೀಸ್ ಆಗಲಿದೆ. ವಿಶಾಲ್ ಭಾರದ್ವಾಜ್ ಅವರ ನಿರ್ದೇಶನದ ಇನ್ನೂ ಟೈಟಲ್ ಇಡದ ಸಿನಿಮಾದಲ್ಲಿ ಶಾಹಿದ್ ಕಪೂರ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ