- Kannada News Photo gallery Animal actress Triptii Dimri upcoming movies in with star heroes Entertainment News in Kannada
ಸ್ಟಾರ್ ನಟರ ಸಿನಿಮಾಗಳಿಗೆ ಬಹುಬೇಡಿಕೆಯ ಹೀರೋಯಿನ್ ಆದ ತೃಪ್ತಿ ದಿಮ್ರಿ
ನಟಿ ತೃಪ್ತಿ ದಿಮ್ರಿ ಅವರ ಅದೃಷ್ಟ ಖುಲಾಯಿಸಿದೆ. ‘ಅನಿಮಲ್’ ಸಿನಿಮಾದ ಯಶಸ್ಸಿನ ಬಳಿಕ ಅವರಿಗೆ ಸಿಕ್ಕಾಪಟ್ಟೆ ಆಫರ್ಗಳು ಬರಿದುಬರುತ್ತಿವೆ. ಸ್ಟಾರ್ ನಟರ ಸಿನಿಮಾಗಳಿಗೆ ಬಹುಬೇಡಿಕೆಯ ಹೀರೋಯಿನ್ ಆಗಿ ಅವರೀಗ ಗುರುತಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ತೃಪ್ತಿ ದಿಮ್ರಿ ಅವರು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರೊಂದು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ.
Updated on: Sep 16, 2024 | 8:06 AM

‘ಅನಿಮಲ್’ ಸಿನಿಮಾದಲ್ಲಿ ತೃಪ್ತಿ ದಿಮ್ರಿ ಮಾಡಿದ್ದು ಒಂದು ಚಿಕ್ಕ ಪಾತ್ರ ಅಷ್ಟೇ. ಆದರೆ ಆ ಪಾತ್ರದಿಂದ ಅವರಿಗೆ ಸಿಕ್ಕ ಯಶಸ್ಸು ತುಂಬ ದೊಡ್ಡದು. ಬೋಲ್ಡ್ ಆಗಿ ಕಾಣಿಸಿಕೊಂಡ ಅವರು ಸಖತ್ ಜನಪ್ರಿಯತೆ ಗಳಿಸಿದರು. ಈಗ ಅವರ ಡಿಮ್ಯಾಂಡ್ ಹೆಚ್ಚಿದೆ.

ಭಾರಿ ವೈರಲ್ ಆದ ‘ತೋಬಾ ತೋಬಾ..’ ಹಾಡಿನ ಮೂಲಕವೂ ತೃಪ್ತಿ ದಿಮ್ರಿ ಅವರು ಸೆನ್ಸೇಷನ್ ಸೃಷ್ಟಿ ಮಾಡಿದರು. ಸೋಶಿಯಲ್ ಮೀಡಿಯಾದಲ್ಲೂ ಅವರ ಚಾರ್ಮ್ ಹೆಚ್ಚಾಗಿದೆ. ಹತ್ತು ಹಲವು ಅವಕಾಶಗಳು ತೃಪ್ತಿ ದಿಮ್ರಿ ಅವರನ್ನು ಹುಡುಕಿಕೊಂಡು ಬರುತ್ತಿವೆ.

ನಟ ಕಾರ್ತಿಕ್ ಆರ್ಯನ್ ಅವರ ಹೊಸ ಸಿನಿಮಾಗೆ ತೃಪ್ತಿ ದಿಮ್ರಿ ಅವರೇ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈಗಾಗಲೇ ಅವರಿಬ್ಬರು ‘ಭೂಲ್ ಭುಲಯ್ಯ 3’ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈಗ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

‘ಸ್ತ್ರೀ 2’ ಮೂಲಕ ಸೂಪರ್ ಸಕ್ಸಸ್ ಕಂಡಿರುವ ರಾಜ್ಕುಮಾರ್ ರಾವ್ ಜೊತೆ ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಸಿನಿಮಾದಲ್ಲಿ ಕೂಡ ತೃಪ್ತಿ ದಿಮ್ರಿ ಅವರು ನಟಿಸಿದ್ದಾರೆ. ಟ್ರೇಲರ್ನಿಂದ ಗಮನ ಸೆಳೆದ ಈ ಸಿನಿಮಾ ಅಕ್ಟೋಬರ್ 11ರಂದು ಬಿಡುಗಡೆ ಆಗಲಿದೆ.

ಕರಣ್ ಜೋಹರ್ ಅವರ ‘ಧರ್ಮ ಪ್ರೊಡಕ್ಷನ್ಸ್’ ಮೂಲಕ ‘ಧಡಕ್ 2’ ಸಿನಿಮಾ ನಿರ್ಮಾಣ ಆಗುತ್ತಿದೆ. ಆ ಸಿನಿಮಾಗೂ ತೃಪ್ತಿ ದಿಮ್ರಿ ಅವರು ಹೀರೋಯಿನ್ ಆಗಿದ್ದಾರೆ. ಆ ಸಿನಿಮಾದಲ್ಲಿ ಸಿದ್ಧಾಂತ್ ಚತುರ್ವೇದಿ ಜೊತೆ ತೃಪ್ತಿ ದಿಮ್ರಿ ಅವರು ತೆರೆ ಹಂಚಿಕೊಳ್ಳಲಿದ್ದಾರೆ.




