- Kannada News Photo gallery Cricket photos IND vs AUS Travis Head On Team India Ahead Of Border-Gavaskar Trophy kannada news
Travis Head: ‘ಟೀಂ ಇಂಡಿಯಾ ನನ್ನ ನೆಚ್ಚಿನ ಎದುರಾಳಿ ತಂಡವಲ್ಲ’; ಟ್ರಾವಿಡ್ ಹೆಡ್
Travis Head: ಟೀಂ ಇಂಡಿಯಾ ತನ್ನ ನೆಚ್ಚಿನ ಎದುರಾಳಿ ತಂಡವಲ್ಲ ಎಂದು ಟ್ರಾವಿಸ್ ಹೆಡ್ ಹೇಳಿದ್ದಾರೆ. 2023 ರಲ್ಲೇ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾದ ಚಾಂಪಿಯನ್ ಕನಸಿಗೆ ತಣ್ಣೀರೆರಚ್ಚಿದ್ದೇ ಈ ಟ್ರಾವಿಸ್ ಹೆಡ್. ಈ ಎರಡೂ ಟೂರ್ನಿಗಳ ಫೈನಲ್‌ನಲ್ಲಿ ಹೆಡ್ ಭಾರತದ ವಿರುದ್ಧ ಶತಕ ಬಾರಿಸಿದ್ದರು.
Updated on: Sep 15, 2024 | 6:00 PM

ಅದ್ಯಾವುದೇ ಪಂದ್ಯವಾಗಿರಲಿ ಟೀಂ ಇಂಡಿಯಾ ಎಂದರೆ ಮುರಿದು ಬೀಳುವ ಏಕೈಕ ಬ್ಯಾಟ್ಸ್‌ಮನ್ ಎಂದರೆ ಅದು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್. ಇದಕ್ಕೆ ನಿದರ್ಶನವಾಗಿ ಎರಡು ಐಸಿಸಿ ಟೂರ್ನಿಗಳ ಫೈನಲ್ ಪಂದ್ಯಗಳೇ ಸಾಕ್ಷಿಯಾಗಿವೆ. ಹೀಗಾಗಿಯೇ ಟ್ರಾವಿಸ್ ಹೆಡ್‌ಗೆ ಟೀಂ ಇಂಡಿಯಾ ಫೇವರೇಟ್ ಎದುರಾಳಿ ತಂಡ ಎಂದು ಎಲ್ಲರೂ ಹೇಳುತ್ತಾರೆ.

ಆದರೆ ಆ ಬಗ್ಗೆ ಇದೀಗ ಮಾತನಾಡಿರುವ ಟ್ರಾವಿಸ್ ಹೆಡ್, ಟೀಂ ಇಂಡಿಯಾ ತನ್ನ ನೆಚ್ಚಿನ ಎದುರಾಳಿ ತಂಡವಲ್ಲ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ. 2023 ರಲ್ಲೇ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾದ ಚಾಂಪಿಯನ್ ಕನಸಿಗೆ ತಣ್ಣೀರೆರಚ್ಚಿದ್ದೇ ಈ ಟ್ರಾವಿಸ್ ಹೆಡ್. ಈ ಎರಡೂ ಟೂರ್ನಿಗಳ ಫೈನಲ್‌ನಲ್ಲಿ ಹೆಡ್ ಭಾರತದ ವಿರುದ್ಧ ಶತಕ ಬಾರಿಸಿದ್ದರು.

ಇದಲ್ಲದೆ 2024 ರ ಟಿ20 ವಿಶ್ವಕಪ್‌ನಲ್ಲಿಯೂ ಭಾರತದ ವಿರುದ್ಧ ಟ್ರಾವಿಸ್ ಹೆಡ್ 43 ಎಸೆತಗಳಲ್ಲಿ 76 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಹೆಡ್ ಕ್ರೀಸ್ನಲ್ಲಿ ಇರುವವರೆಗೂ ಟೀಂ ಇಂಡಿಯಾಗೆ ಸೋಲು ಖಚಿತ ಎಂದು ಹೇಳಲಾಗುತ್ತಿತ್ತು. ಆದರೆ 76 ರನ್ಗಳಿಗೆ ಹೆಡ್ ಅವರ ಇನ್ನಿಂಗ್ಸ್ ಮುಗಿಯುವುದರೊಂದಿಗೆ ಆಸ್ಟ್ರೇಲಿಯಾದ ಸೋಲು ಕೂಡ ಖಚಿತವಾಗಿತ್ತು.

ಇನ್ನು 2023 ರಲ್ಲಿ ನಡೆದಿದ್ದ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಹೆಡ್ ಭಾರತದ ವಿರುದ್ಧ 163 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಇದರ ಹೊರತಾಗಿ ಅವರು ಏಕದಿನ ವಿಶ್ವಕಪ್ ಫೈನಲ್‌ನಲ್ಲಿ 137 ರನ್ ಬಾರಿಸಿದ್ದರು. ಈ ಎರಡೂ ಫೈನಲ್‌ಗಳಲ್ಲಿ ಹೆಡ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗಿತ್ತು.

ಮುಂಬರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಮಾತನಾಡಿದ್ದ ಹೆಡ್, ಟೀಂ ಇಂಡಿಯಾ ನನ್ನ ನೆಚ್ಚಿನ ತಂಡ ಎಂದು ನಾನು ಭಾವಿಸುವುದಿಲ್ಲ. ಆಸ್ಟ್ರೇಲಿಯಾ ತಂಡ ಟೀಂ ಇಂಡಿಯಾ ವಿರುದ್ಧ ಹೆಚ್ಚು ಪಂದ್ಯಗಳನ್ನು ಆಡುತ್ತದೆ. ಇದಲ್ಲದೆ ಕಳೆದ ಕೆಲವು ವರ್ಷಗಳಿಂದ ನಾನು ಉತ್ತಮ ಫಾರ್ಮ್‌ನಲ್ಲಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಟ್ರಾವಿಸ್ ಹೆಡ್ ಸದ್ಯ ಇಂಗ್ಲೆಂಡ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಸ್ಕಾಟ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಜಯಭೇರಿ ಬಾರಿಸಿರುವ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದೆ. ಅದ್ಭುತ ಫಾರ್ಮ್‌ನಲ್ಲಿದ್ದ ಹೆಡ್ ಮೊದಲ ಟಿ20ಯಲ್ಲಿ ಬಿರುಸಿನ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಆದರೆ ಎರಡನೇ ಟಿ20ಯಲ್ಲಿ ಹೆಡ್ ಬ್ಯಾಟ್ ಅಬ್ಬರಿಸಲಿಲ್ಲ. ಇದರ ಜೊತೆಗೆ ತಂಡ ಕೂಡ ಸೋಲೊಪ್ಪಿಕೊಂಡಿತು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿ 1-1ರಲ್ಲಿ ಸಮಬಲಗೊಂಡಿದೆ.




