AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವೂದ್​ ಲಿಂಕ್ ಬಳಸಿ ಇಬ್ಬರ ಹತ್ಯೆ ಮಾಡಲು ಪ್ಲ್ಯಾನ್ ಮಾಡಿದ್ರಾ ಸಲ್ಲು?

ಸಲ್ಮಾನ್ ಖಾನ್ ಅವರ ವಿರುದ್ಧ ಎಎನ್​ಐ ವರದಿ ಪ್ರಕಟ ಮಾಡಿತ್ತು. ಸಲ್ಮಾನ್ ಖಾನ್ ಅವರು ಡಿ- ಕಂಪನಿ (ದಾವೂದ್ ಕಂಪನಿ) ಜೊತೆ ಸಂಬಂಧ ಹೊಂದಿದ್ದು, ಮನೆಯ ಮೇಲೆ ಗುಂಡಿನ ದಾಳಿ ಮಾಡಿದ ಇಬ್ಬರಿಗೆ ದಾವೂದ್ ಗ್ಯಾಂಗ್​ನಿಂದ ಬೆದರಿಕೆ ಇದೆ ಎನ್ನುವ ಆರೋಪ ಮಾಡಿತ್ತು.  

ದಾವೂದ್​ ಲಿಂಕ್ ಬಳಸಿ ಇಬ್ಬರ ಹತ್ಯೆ ಮಾಡಲು ಪ್ಲ್ಯಾನ್ ಮಾಡಿದ್ರಾ ಸಲ್ಲು?
ಸಲ್ಮಾನ್ ಖಾನ್
ರಾಜೇಶ್ ದುಗ್ಗುಮನೆ
|

Updated on: Sep 20, 2024 | 3:10 PM

Share

ನಟ ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಅವರಿಗೆ ಬ್ಯಾಕ್ ಟು ಬ್ಯಾಕ್ ಪ್ರಾಣ ಬೆದರಿಕೆಗಳು ಬರುತ್ತಿವೆ. ಅವರ ತಂದೆ ಸಲೀಮ್ ಖಾನ್​ಗೂ ಜೀವ ಬೆದರಿಕೆ ಇದೆ. ಹೀಗಿರುವಾಗಲೇ ಸಲ್ಮಾನ್ ಖಾನ್ ಅವರು ಕೋರ್ಟ್​ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ಸುಳ್ಳು ಸುದ್ದಿ ಬರೆದ ಎಎನ್​ಐ ವಿರುದ್ಧ ಸಲ್ಲು ಕೇಸ್ ಹಾಕಿದ್ದಾರೆ. ಜೊತೆಗೆ ಕ್ಷಮಾಪಣೆ ಕೂಡ ಕೇಳಿ ಎಂದು ಆಗ್ರಹಿಸಿದ್ದಾರೆ. ಈ ಪ್ರಕರಣದ ಹಿನ್ನೆಲೆ ಬಗ್ಗೆ ಇಲ್ಲಿದೆ ವಿವರ.

ಎಎನ್​ಐ ವರದಿ ಏನು?

ಸಲ್ಮಾನ್ ಖಾನ್ ಅವರ ವಿರುದ್ಧ ಎಎನ್​ಐ ವರದಿ ಪ್ರಕಟ ಮಾಡಿತ್ತು. ಸಲ್ಮಾನ್ ಖಾನ್ ಅವರು ಡಿ- ಕಂಪನಿ (ದಾವೂದ್ ಕಂಪನಿ) ಜೊತೆ ಸಂಬಂಧ ಹೊಂದಿದ್ದು, ಮನೆಯ ಮೇಲೆ ಗುಂಡಿನ ದಾಳಿ ಮಾಡಿದ ಇಬ್ಬರಿಗೆ ದಾವೂದ್ ಗ್ಯಾಂಗ್​ನಿಂದ ಬೆದರಿಕೆ ಇದೆ ಎನ್ನುವ ಆರೋಪ ಮಾಡಿತ್ತು.

ಇದನ್ನೂ ಓದಿ: ವಿದೇಶದಲ್ಲೂ ಸಲ್ಮಾನ್ ಖಾನ್ ಹೆಸರಲ್ಲಿ ಮೋಸ; ಖಡಕ್ ಎಚ್ಚರಿಕೆ ನೀಡಿದ ನಟ

ಸಲ್ಮಾನ್ ಖಾನ್ ಮನೆ ಮೇಲೆ ದಾಳಿ ಮಾಡಿರುವ ಪ್ರಕರಣದ ಆರೋಪಿಗಳಾದ ವಿಕ್ಕಿ ಗುಪ್ತಾ, ಸಾಗರ್ ಪಾಲ್ ಪರ ವಕೀಲ ಅಮಿತ್ ಮಿಶ್ರಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದರು. ‘ಸಂತ್ರಸ್ತ (ಸಲ್ಮಾನ್ ಖಾನ್) ಗ್ಯಾಂಗ್​ಸ್ಟರ್ ಜೊತೆ ಸಂಬಂಧ ಹೊಂದಿದ್ದಾರೆ. ಆರೋಪಿಗಳು ಹತ್ಯೆ ಆಗಲಿ ಎಂದು ಸಲ್ಲು ಬಯಸುತ್ತಿದ್ದಾರೆ. ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರ ಹಾಗೂ ಬಿಹಾರ ಸರ್ಕಾರದ ಬಳಿ ನಾವು ರಕ್ಷಣೆಗೆ ಮನವಿ ಮಾಡುತ್ತೇವೆ’ ಎಂದಿದ್ದರು. ಈ ವಿಡಿಯೋನ ಎಎನ್​ಐ ಹಂಚಿಕೊಂಡಿತ್ತು.

ಸಲ್ಮಾನ್ ಖಾನ್ ಹೇಳಿರೋದೇನು?

‘ಅಮಿತ್ ಮಿಶ್ರಾ ಮಾಡಿದ ಆರೋಪವನ್ನು ಸಲ್ಮಾನ್ ಖಾನ್ ಅವರು ಅಲ್ಲಗಳೆಯುತ್ತಿದ್ದಾರೆ. ಅದು ಸುಳ್ಳು. ಇದು ನಿಜಕ್ಕೂ ಡ್ಯಾಮೇಜಿಂಗ್ ಆಗಿದೆ’ ಎಂದು ಸಲ್ಮಾನ್ ಖಾನ್ ಪರ ವಕೀಲರು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಎಎನ್​ಐ ಹಾಗೂ ಅಮಿತ್ ಮಿಶ್ರಾ 48 ಗಂಟೆಯಲ್ಲಿ ಕ್ಷಮೆ ಕೇಳಬೇಕು ಎಂದು ಅವರು ಹೇಳಿದ್ದಾರೆ. ಅಮಿತ್ ಮಿಶ್ರಾ ಅವರಿಗೆ ಸಂಬಂಧಿಸಿದ ವಿಡಿಯೋ ಡಿಲೀಟ್ ಮಾಡುವಂತೆ ಅವರು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು