AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚ್ಛೇದನ ವದಂತಿ ಮಧ್ಯೆಯೇ ಲಕ್ಷುರಿ ಅಪಾರ್ಟ್​ಮೆಂಟ್ ಖರೀದಿಸಿದ ಅಭಿಷೇಕ್

ಅಭಿಷೇಕ್ ಬಚ್ಚನ್ ಖರೀದಿ ಮಾಡಿರೋ ಅಪಾರ್ಟ್​ಮೆಂಟ್​ನಲ್ಲಿ ಅಕ್ಷಯ್ ಕುಮಾರ್ ಕೂಡ ಒಂದು ಫ್ಲ್ಯಾಟ್ ಹೊಂದಿದ್ದಾರೆ ಎನ್ನಲಾಗಿದೆ. ಸದ್ಯ ಅಕ್ಷಯ್ ಹಾಗೂ ಅಭಿಷೇಕ್ ತಮ್ಮ ಫ್ಲ್ಯಾಟ್​ಗಳಿಗೆ ಎಷ್ಟು ಹಣ ನೀಡಿದ್ದಾರೆ ಎಂಬಿತ್ಯಾದಿ ಮಾಹಿತಿಗಳು ರಿವೀಲ್ ಆಗಿಲ್ಲ.  

ವಿಚ್ಛೇದನ ವದಂತಿ ಮಧ್ಯೆಯೇ ಲಕ್ಷುರಿ ಅಪಾರ್ಟ್​ಮೆಂಟ್ ಖರೀದಿಸಿದ ಅಭಿಷೇಕ್
ಅಭಿಷೇಕ್ ಬಚ್ಚನ್
ರಾಜೇಶ್ ದುಗ್ಗುಮನೆ
|

Updated on:Sep 20, 2024 | 7:28 AM

Share

ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದೂರ ಆಗಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಜೋರಾಗಿ ಚರ್ಚೆಯಲ್ಲಿ ಇದೆ. ಹೀಗಿರುವಾಗಲೇ ಅಭಿಷೇಕ್​ಗೆ ಪ್ರಾಪರ್ಟಿಗಳ ಮೇಲೆ ಹೆಚ್ಚು ಆಸಕ್ತಿ ಬಂದಂತೆ ಇದೆ. ಇತ್ತೀಚೆಗೆ ಅವರು ಆರು ಫ್ಲ್ಯಾಟ್ ಖರೀದಿ ಮಾಡಿದ್ದರು. ಈಗ ಅವರು ಮುಂಬೈನಲ್ಲಿ ಮತ್ತೊಂದು ಲಕ್ಷುರಿ ಅಪಾರ್ಟ್​ಮೆಂಟ್ ಖರೀದಿ ಮಾಡಿದ್ದಾರೆ. ಈಗ ಖರೀದಿ ಮಾಡಿರುವ ಫ್ಲ್ಯಾಟ್ ಅಮಿತಾಭ್ ಬಚ್ಚನ್ ಇರುವ ಜುಹುವಿನ ಮನೆಯ ಸಮೀಪವೇ ಇದೆ. ಜುಹು ಬೀಚ್​ಗೆ ಮುಖ ಮಾಡಿ ಈ ಅಪಾರ್ಟ್​ಮೆಂಟ್ ಇದೆ.

ಅಭಿಷೇಕ್ ಬಚ್ಚನ್ ಅವರು ಇತ್ತೀಚೆಗೆ ಮುಂಬೈನ ಬೊರಿವಲಿ ಏರಿಯಾದಲ್ಲಿ ಅಪಾರ್ಟ್​ಮೆಂಟ್​ನಲ್ಲಿ ಆರು ಫ್ಲ್ಯಾಟ್​ ಖರೀದಿ ಮಾಡಿದ್ದರು. ಈ ಮೂಲಕ ಅವರಿಗೆ ರಿಯಲ್​ ಎಸ್ಟೇಟ್​ ಮೇಲೆ ಹೆಚ್ಚು ಆಸಕ್ತಿ ಬಂದಿರೋದು ಸ್ಪಷ್ಟವಾಗುತ್ತಿದೆ. ಮುಂಬೈನ ದುಬಾರಿ ಏರಿಯಾಗಳಲ್ಲಿ ಒಂದಾದ ಜುಹುನಲ್ಲಿ ಈಗಾಗಲೇ ಬಚ್ಚನ್ ಕುಟುಂಬ ಐದು ಬಂಗಲೆ/ಅಪಾರ್ಟ್​ಮೆಂಟ್​​ಗಳನ್ನು ಹೊಂದಿದೆ. ಈ ಭಾಗದ ಬಿಲ್ಡರ್​ಗಳ ಜೊತೆ ಬಚ್ಚನ್ ಕುಟುಂಬ ಒಳ್ಳೆಯ ರಿಲೇಶನ್​ಶಿಪ್ ಹೊಂದಿದೆ.

ಅಭಿಷೇಕ್ ಬಚ್ಚನ್ ಖರೀದಿ ಮಾಡಿರೋ ಅಪಾರ್ಟ್​ಮೆಂಟ್​ನಲ್ಲಿ ಅಕ್ಷಯ್ ಕುಮಾರ್ ಕೂಡ ಒಂದು ಫ್ಲ್ಯಾಟ್ ಹೊಂದಿದ್ದಾರೆ ಎನ್ನಲಾಗಿದೆ. ಸದ್ಯ ಅಕ್ಷಯ್ ಹಾಗೂ ಅಭಿಷೇಕ್ ತಮ್ಮ ಫ್ಲ್ಯಾಟ್​ಗಳಿಗೆ ಎಷ್ಟು ಹಣ ನೀಡಿದ್ದಾರೆ ಎಂಬಿತ್ಯಾದಿ ಮಾಹಿತಿಗಳು ರಿವೀಲ್ ಆಗಿಲ್ಲ.

ಅಭಿಷೇಕ್ ಬಚ್ಚನ್ ಈ ಮೊದಲು ಖರೀದಿ  ಮಾಡಿದ್ದ ಆರು ಫ್ಲ್ಯಾಟ್​ಗಳಿಗೆ ಅವರು 15.42 ಕೋಟಿ ರೂಪಾಯಿ ನೀಡಿದ್ದರು. ಇದು ಒಬೆರಾಯ್ ರಿಯಾಲಿಟಿ ಪ್ರಾಜೆಕ್ಟ್​ ಅಡಿಯಲ್ಲಿ ಬರುತ್ತದೆ. ಇವುಗಳನ್ನು ಅವರು ಬಾಡಿಗೆಗೆ ನೀಡಲಿದ್ದಾರೆ ಎನ್ನಲಾಗಿದೆ.

ಅಭಿಷೇಕ್ ಬಚ್ಚನ್ ನಟನೆಯ ‘ಗೂಮರ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಸೈಯಾಮಿ ಖೇರ್ ಅವರು ನಟಿಸಿದ್ದಾರೆ. ಅವರು ‘ಹೌಸ್​ಫುಲ್ 5’ ರ ಭಾಗವಾಗಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಫರ್ದೀನ್ ಖಾನ್, ಪೂಜಾ ಹೆಗ್ಡೆ, ಚಿತ್ರಂಗದಾ ಸಿಂಗ್ ಕೂಡ ನಟಿಸುತ್ತಿದ್ದಾರೆ. ಅವರು ಕಿಂಗ್ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ.

ಇದನ್ನೂ ಓದಿ: ಐಶ್ವರ್ಯಾಗೆ ಕಾರು ಉಡುಗೊರೆ ಕೊಟ್ಟ ಅಭಿಷೇಕ್ ಬಚ್ಚನ್? ವಿಚ್ಛೇದನ ವದಂತಿಗೆ ಬ್ರೇಕ್

 ಕುಟುಂಬದ ವಿಚಾರದಿಂದ ಅಭಿಷೇಕ್ ಬಚ್ಚನ್ ಸುದ್ದಿ ಆಗುತ್ತಿದ್ದಾರೆ. ಅವರು ಐಶ್ವರ್ಯಾ ರೈ ಜೊತೆ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿದೆ. ಅವರು ಇತ್ತೀಚೆಗೆ ಮದುವೆ ಉಂಗುರವನ್ನು ಹಾಕಿಕೊಳ್ಳುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:27 am, Fri, 20 September 24

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್