AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಶ್ವರ್ಯಾಗೆ ಕಾರು ಉಡುಗೊರೆ ಕೊಟ್ಟ ಅಭಿಷೇಕ್ ಬಚ್ಚನ್? ವಿಚ್ಛೇದನ ವದಂತಿಗೆ ಬ್ರೇಕ್

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎನ್ನುವ ಸುದ್ದಿ ಇತ್ತೀಚೆಗೆ ಜೋರಾಗಿದೆ. ಇದಕ್ಕೆ ಅನೇಕ ಸಾಕ್ಷಿಗಳು ಲಭ್ಯ ಆಗುತ್ತಿವೆ. ಹೀಗಿರುವಾಗಲೇ ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾಗೆ ಕಾರನ್ನು ಉಡುಗೊರೆ ನೀಡಿದರೇ ಎನ್ನುವ ಪ್ರಶ್ನೆ ಮೂಡಿದೆ.

ಐಶ್ವರ್ಯಾಗೆ ಕಾರು ಉಡುಗೊರೆ ಕೊಟ್ಟ ಅಭಿಷೇಕ್ ಬಚ್ಚನ್? ವಿಚ್ಛೇದನ ವದಂತಿಗೆ ಬ್ರೇಕ್
ಅಭಿಷೇಕ್-ಐಶ್ವರ್ಯಾ
ರಾಜೇಶ್ ದುಗ್ಗುಮನೆ
|

Updated on: Jul 25, 2024 | 2:09 PM

Share

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಾಂಪತ್ಯ ವಿಚಾರ ಸದ್ಯ ಎಲ್ಲೆಡೆ ಚರ್ಚೆ ಆಗುತ್ತಿದೆ. ಇವರು ವಿಚ್ಛೇದನ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಂಡರು ಎಂದು ಇತ್ತೀಚೆಗೆ ವರದಿ ಆಗಿತ್ತು. ಈ ಗುಮಾನಿ ಹುಟ್ಟಲು ಕಾರಣ ಆಗಿದ್ದು ಅನಂತ್ ಅಂಬಾನಿ ಮದುವೆ ದಿನ ನಡೆದ ಘಟನೆ. ಈ ವಿವಾಹ ಸಮಾರಂಬಕ್ಕೆ ಐಶ್ವರ್ಯಾ ಹಾಗೂ ಮಗಳು ಆರಾಧ್ಯಾ ಒಟ್ಟಾಗಿ ಬಂದರೆ, ಅಮಿತಾಭ್, ಅಭಿಷೇಕ್, ಜಯಾ ಪ್ರತ್ಯೇಕವಾಗಿ ಬಂದಿದ್ದರು. ಈ ಕಾರಣದಿಂದ ಇವರ ವಿಚ್ಛೇದನ ಸುದ್ದಿ ಹರಿದಾಡಿತ್ತು. ಈಗ ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ರೈಗೆ ಕಾರು ಗಿಫ್ಟ್ ನೀಡಿದರೇ ಎನ್ನುವ ಪ್ರಶ್ನೆ ಮೂಡಿದೆ.

ವರದಿಗಳ ಪ್ರಕಾರ ಅಭಿಷೇಕ್ ಬಚ್ಚನ್ ಅವರು ಹೊಸ ಕಾರು ಖರೀದಿ ಮಾಡಿದ್ದಾರೆ. ಸೋದರಳಿಯ ಅಗಸ್ತ್ಯ ನಂದಾ, ಸೊಸೆ ನವ್ಯಾ ನವೇಲಿ ನಂದಾ ಮತ್ತು ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಅವರನ್ನು ಅಭಿಷೇಕ್ ಹೊಸ ಕಾರಿನಲ್ಲಿ ಡಿನ್ನರ್​ಗೆ ಕರೆದುಕೊಂಡು ಹೋಗಿದ್ದಾರೆ. ಆಗ ಹಲವರ ಗಮನ ಅಭಿಷೇಕ್ ಬಚ್ಚನ್ ಅವರ ಹೊಸ ಕಾರಿನ ನಂಬರ್ ಪ್ಲೇಟ್ ಕಡೆಗೆ ಹೋಗಿದೆ. ಐಶ್ವರ್ಯಾ ಅವರ ಫೇವರಿಟ್ ಸಂಖ್ಯೆಯನ್ನೇ ಅಭಿಷೇಕ್ ತಮ್ಮ ಕಾರಿನ ನಂಬರ್ ಪ್ಲೇಟ್ ಮಾಡಿಕೊಂಡಿದ್ದಾರೆ.

ಐಶ್ವರ್ಯಾ ರೈ ಬಳಿ ‘Mercedes-Benz S-Class’ ಕಾರು ಇತ್ತು. ಅದನ್ನು ಈಗ ಮಾರಾಟ ಮಾಡಲಾಗಿದೆ. ಈ ಕಾರಿನ ಸಂಖ್ಯೆ 5050 ಆಗಿತ್ತು. ಈಗ ಅಭಿಷೇಕ್ ಬಚ್ಚನ್ ಅವರ ಹೊಸ ಕಾರಿನ ಸಂಖ್ಯೆ ಕೂಡ 5050 ಆಗಿದೆ. ಹೀಗಾಗಿ, ಕೆಲವರು ಅಭಿಷೇಕ್ ಅವರು ಐಶ್ವರ್ಯಾಗೆ ಕಾರು ಗಿಫ್ಟ್ ಮಾಡಿದ್ದಾರೆ ಎಂದಿದ್ದಾರೆ. ಇನ್ನೂ ಕೆಲವರು ಅಭಿಷೇಕ್ ಅವರು ಐಶ್ವರ್ಯಾ ಅವರ ಫೇವರಿಟ್ ಸಂಖ್ಯೆಯನ್ನು ತಮ್ಮ ಕಾರಿನ ಸಂಖ್ಯೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಮಾತನಾಡಿದ್ದಾರೆ.

ಇದನ್ನೂ ಓದಿ: ರಜನಿಕಾಂತ್​ಗೆ ಐಶ್ವರ್ಯಾ ರೈ ಜೋಡಿ ಎಂದಾಗ ಕಕ್ಕಾಬಿಕ್ಕಿ ಆಗಿದ್ದ ರಾಜಸ್ಥಾನಿ ವ್ಯಕ್ತಿ

ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಐಶ್ವರ್ಯಾ ಹಾಗೂ ಅಭಿಷೇಕ್ ಮದುವೆಯಾಗಲು ನಿರ್ಧರಿಸಿದರು. 2007ರಲ್ಲಿ ಐಶ್ವರ್ಯಾ-ಅಭಿಷೇಕ್ ಮದುವೆಯಾದರು. ಮದುವೆಯ ನಂತರ ಐಶ್ವರ್ಯಾ 2011 ರಲ್ಲಿ ಮಗಳು ಆರಾಧ್ಯಾಗೆ ಜನ್ಮ ನೀಡಿದರು. ಈಗ ಕಾರಿನ ಉಡುಗೊರೆ ವಿಚಾರದಿಂದ ಇವರ ವಿಚ್ಛೇದನ ವಿಚಾರಕ್ಕೆ ಬ್ರೇಕ್ ಬಿದ್ದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.