ರಜನಿಕಾಂತ್​ಗೆ ಐಶ್ವರ್ಯಾ ರೈ ಜೋಡಿ ಎಂದಾಗ ಕಕ್ಕಾಬಿಕ್ಕಿ ಆಗಿದ್ದ ರಾಜಸ್ಥಾನಿ ವ್ಯಕ್ತಿ

ತಲೆ ಕೂದಲು ಉದುರಿ ಹೋಗಿರುವ ರಜನಿಕಾಂತ್​ಗೆ ಐಶ್ವರ್ಯಾ ರೈ ಬಚ್ಚನ್​ ಹೀರೋಯಿನ್​ ಆಗಿದ್ದಾರೆ ಎಂದಾಗ ರಾಜಸ್ಥಾನಿ ವ್ಯಕ್ತಿಗೆ ನಂಬೋಕೆ ಸಾಧ್ಯವಾಗಲಿಲ್ಲ. ಆ ಘಟನೆಯನ್ನು ರಜನಿಕಾಂತ್​ ಅವರು ತುಂಬ ತಮಾಷೆಯಾಗಿ ವಿವರಿಸಿದ್ದರು. ತಮ್ಮ ಮಾತಿನಲ್ಲಿ ಯಾವುದೇ ವೈಭವಿಕರಣ ಇಲ್ಲ ಎಂದು ಅವರು ಹೇಳಿದ್ದರು.

ರಜನಿಕಾಂತ್​ಗೆ ಐಶ್ವರ್ಯಾ ರೈ ಜೋಡಿ ಎಂದಾಗ ಕಕ್ಕಾಬಿಕ್ಕಿ ಆಗಿದ್ದ ರಾಜಸ್ಥಾನಿ ವ್ಯಕ್ತಿ
ಐಶ್ವರ್ಯಾ ರೈ, ರಜನಿಕಾಂತ್​
Follow us
ಮದನ್​ ಕುಮಾರ್​
|

Updated on: May 05, 2024 | 12:06 PM

ತಮಿಳು ಚಿತ್ರರಂಗದ ಸೂಪರ್​ ಸ್ಟಾರ್ ನಟ​ ರಜನಿಕಾಂತ್ (Rajinikanth) ಅವರಿಗೆ ಈಗ 73 ವರ್ಷ ವಯಸ್ಸು. ಈಗಲೂ ಅವರು ಚಾರ್ಮ್​ ಉಳಿಸಿಕೊಂಡಿದ್ದಾರೆ. ಅವರ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಮೋಡಿ ಮಾಡುತ್ತವೆ. 2023ರಲ್ಲಿ ಬ್ಲಾಕ್​ ಬಸ್ಟರ್​ ಆದ ‘ಜೈಲರ್​’ ಚಿತ್ರವೇ ಅದಕ್ಕೆ ಸಾಕ್ಷಿ. ಆದರೆ 14 ವರ್ಷಗಳ ಹಿಂದೆಯೇ ರಜನಿಕಾಂತ್​ ಅವರನ್ನು ಹೀರೋ ಅಲ್ಲ ಎಂಬಂತೆ ಕೆಲವರು ನೋಡಿದ್ದರು. ಆ ಘಟನೆಯನ್ನು ವೇದಿಕೆಯಲ್ಲಿ ರಜನಿಕಾಂತ್​ ಅವರು ಹಂಚಿಕೊಂಡಿದ್ದರು. ರಜನಿಕಾಂತ್​ಗೆ ಐಶ್ವರ್ಯಾ ರೈ (Aishwarya Rai) ಜೋಡಿ ಎಂದು ಹೇಳಿದಾಗ ರಾಜಸ್ಥಾನಿ ವ್ಯಕ್ತಿಯೊಬ್ಬರು ನಂಬಲೇ ಇಲ್ಲ. ಅಲ್ಲದೇ ಆ ವಿಷಯ ಕೇಳಿ ಅವರು ಕಕ್ಕಾಬಿಕ್ಕಿ ಆಗಿದ್ದರು. ಈ ವಿಷಯವನ್ನು ವೇದಿಕೆಯಲ್ಲಿ ಸ್ವತಃ ರಜನಿಕಾಂತ್ ವಿವರಿಸಿದ್ದರು.

‘ನನ್ನ ಜೊತೆ ಹೀರೋಯಿನ್​ ಆಗಿ ನಟಿಸಲು ಒಪ್ಪಿಕೊಂಡಿದ್ದಕ್ಕೆ ಐಶ್ವರ್ಯಾ ರೈ ಅವರಿಗೆ ಧನ್ಯವಾದಗಳು. ನಾನು ಯಾವುದನ್ನೂ ವೈಭವೀಕರಿಸುತ್ತಿಲ್ಲ. ಬೆಂಗಳೂರಿನಲ್ಲಿ ನನ್ನ ಸಹೋದರನ ಮನೆ ಇದೆ. ನಾನು ಅಲ್ಲಿಗೆ ಹೋಗಿದ್ದೆ. ಹತ್ತಿರದಲ್ಲೇ ಇದ್ದ ರಾಜಸ್ಥಾನಿ ಕುಟುಂಬದವರು ನನ್ನನ್ನು ನೋಡಲು ಬಂದರು. ನಂದುಲಾಲ್​ ಎಂಬ ವ್ಯಕ್ತಿ ಬಂದು ನನ್ನನ್ನು ಮಾತಾಡಿಸಿದರು’ ಎಂದು ಆ ಘಟನೆಯನ್ನು ರಜನಿಕಾಂತ್​ ನೆನಪಿಸಿಕೊಂಡಿದ್ದರು.

‘ನಂದುಲಾಲ್​ಗೆ 60 ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು. ರಜನಿ ಸರ್​, ನಿಮ್ಮ ಕೂದಲಿಗೆ ಏನಾಯಿತು ಅಂತ ಕೇಳಿದರು. ಜಾಸ್ತಿ ಉದುರಿಹೋಗಿದೆ ಬಿಡಿ ಅಂದೆ. ನಿವೃತ್ತಿ ಜೀವನದಲ್ಲಿ ಮಜಾ ಮಾಡುತ್ತಿದ್ದೀರಾ ಅಂತ ಕೇಳಿದರು. ಇಲ್ಲ, ಈಗ ಒಂದು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದೇನೆ. ಅದರಲ್ಲಿ ಐಶ್ವರ್ಯಾ ರೈ ಹೀರೋಯಿನ್​ ಅಂತ ನಾನು ಹೇಳಿದೆ. ವಾವ್​ ವಾವ್​.. ಐಶ್ವರ್ಯಾ ತುಂಬ ಒಳ್ಳೆಯ ನಟಿ, ಹಾಗಾದರೆ ಹೀರೋ ಯಾರು ಅಂತ ಆ ವ್ಯಕ್ತಿ ಪ್ರಶ್ನೆ ಮಾಡಿದರು. ನಾನೇ ಹೀರೋ ಎಂದೆ. ಅವರಿಗೆ ನಂಬೋಕೆ ಆಗಲ್ಲಿಲ್ಲ’ ಎಂದರು ರಜನಿಕಾಂತ್​.

ಇದನ್ನೂ ಓದಿ: ರಜನಿಕಾಂತ್​ ನಟನೆಯ 171ನೇ ಚಿತ್ರದ ಹೆಸರು ‘ಕೂಲಿ’; ಬಂತು ಭರ್ಜರಿ ಟೀಸರ್​

‘ಹೌದು ಡ್ಯಾಡಿ, ಇವರೇ ಹೀರೋ ಎಂದು ನಂದುಲಾಲ್​ ಮಕ್ಕಳು ಅವರಿಗೆ ತಿಳಿಸಿ ಹೇಳಿದರು. ನಂತರ ಅವರು 10 ನಿಮಿಷ ಅಲ್ಲೇ ಇದ್ದರು. ಅವರು ಒಂದು ಮಾತು ಕೂಡ ಆಡಲಿಲ್ಲ. ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದರು. ನಂತರ ಬೈ ಬೈ ಎಂದು ಹೇಳಿ ಹೊರಟರು. ಬಳಿಕ ಪಕ್ಕದ ರೂಮಿನಿಂದ ಧ್ವನಿ ಕೇಳಿಸುತ್ತಿತ್ತು. ಐಶ್ವರ್ಯಾ ರೈಗೆ ಏನಾಯಿತೋ ಮಾರಾಯಾ? ಅಭಿಷೇಕ್​ ಬಚ್ಚನ್​ಗೆ ಏನಾಯಿತು? ಅಮಿತಾಭ್​ ಬಚ್ಚನ್​ಗಾದರೂ ಏನಾಗಿದೆ. ಇವನ ಜೊತೆ ಹೀರೋಯಿನ್ ಆಗೋಕೆ ಬಿಟ್ಟಿದ್ದಾರಲ್ಲ ಅಂತ ಅವರು ಮಾತನಾಡಿಕೊಳ್ಳುತ್ತಿದ್ದರು’ ಎಂದು ಆ ಘಟನೆಯನ್ನು ‘ಎಂಧಿರನ್​’ ಸಿನಿಮಾದ ವೇದಿಕೆಯಲ್ಲಿ ರಜನಿಕಾಂತ್​ ಮೆಲುಕು ಹಾಕಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ