- Kannada News Photo gallery Pranitha Subhash Shares Good news with Fans She became pregnant again Entertainment News In Kannada
‘ಎರಡನೇ ರೌಂಡ್’; ಅಭಿಮಾನಿಗಳಿಗೆ ಮತ್ತೆ ಸಿಹಿಸುದ್ದಿ ಕೊಟ್ಟ ಪ್ರಣಿತಾ ಸುಭಾಷ್
ಪ್ರಣಿತಾ ಜೂನ್ 2022ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದರು. ಹೆಣ್ಣು ಮಗುವಿಗೆ ಈ ದಂಪತಿ ಅರ್ನಾ ಎಂದು ಹೆಸರು ಇಟ್ಟಿದ್ದಾರೆ. ಈಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಪ್ರಣಿತಾ ಇದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
Updated on: Jul 25, 2024 | 12:44 PM

ನಟಿ ಪ್ರಣಿತಾ ಸುಭಾಷ್ ಅವರು ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅದೂ ಎರಡನೇ ಬಾರಿ. ಅಂದರೆ ತಾವು ಎರಡನೇ ಬಾರಿ ಪ್ರೆಗ್ನೆಂಟ್ ಆಗಿರೋ ವಿಚಾರವನ್ನು ಪ್ರಣಿತಾ ಸುಭಾಷ್ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ.

ಪ್ರಣಿತಾ ಸುಭಾಷ್ ಅವರು 2021ರ ಮೇ 30ರಂದು ಮದುವೆ ಆದರು. ಉದ್ಯಮಿ ನಿತಿನ್ ರಾಜು ಜೊತೆ ವಿವಾಹ ಆಗಿದ್ದಾರೆ. ಕೊವಿಡ್ ಇದ್ದ ಕಾರಣ ಸಿಂಪಲ್ ಆಗಿ ಈ ಮದುವೆ ನೆರವೇರಿತ್ತು.

ಪ್ರಣಿತಾ ಜೂನ್ 2022ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದರು. ಹೆಣ್ಣು ಮಗುವಿಗೆ ಈ ದಂಪತಿ ಅರ್ನಾ ಎಂದು ಹೆಸರು ಇಟ್ಟಿದ್ದಾರೆ. ಈಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಪ್ರಣಿತಾ ಇದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಣಿತಾ ಮಾಹಿತಿ ಹಂಚಿಕೊಂಡಿದ್ದಾರೆ. ‘ಎರಡನೇ ರೌಂಡ್. ಈಗ ಪ್ಯಾಂಟ್ಗಳು ಫಿಟ್ ಆಗಲ್ಲ’ ಎಂದು ಅವರು ಹೇಳಿದ್ದಾರೆ.

ಪ್ರಣಿತಾ ಸುಭಾಷ್ ನಟನೆಯ ‘ರಾಮನ ಅವತಾರ’ ಈ ವರ್ಷ ರಿಲೀಸ್ ಆಗಿದೆ. ಆ ಬಳಿಕ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಸದ್ಯ ಅವರು ಒಂದು ಸಣ್ಣ ಬ್ರೇಕ್ ಪಡೆಯಬಹುದು.




