ಮದುವೆ ಉಂಗುರ ತೆಗೆದಿಟ್ಟ ಐಶ್ವರ್ಯಾ ರೈ; ಡಿವೋರ್ಸ್ ಮಾತಿಗೆ ಇನ್ನೊಂದು ಸಾಕ್ಷಿ?
ಐಶ್ವರ್ಯಾ ರೈ ಬಚ್ಚನ್ ಅವರು ಇಷ್ಟು ದಿನ ತಮ್ಮ ಕೈಯಲ್ಲಿ ಇದ್ದ ಮದುವೆಯ ಉಂಗುರವನ್ನು ಈಗ ತೆಗೆದಿಟ್ಟಿದ್ದಾರೆ. ಅವರ ಈ ನಿರ್ಧಾರಕ್ಕೆ ಕಾರಣ ಏನು ಎಂದು ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ. ಅಭಿಷೇಕ್ ಬಚ್ಚನ್ ಜೊತೆಗಿನ ಸಂಸಾರಕ್ಕೆ ಅವರು ಅಂತ್ಯ ಹಾಡುತ್ತಾರಾ ಎಂಬ ಪ್ರಶ್ನೆ ಬಲವಾಗಿದೆ. ವಿಚ್ಛೇದನದ ಬಗ್ಗೆ ಕೇಳಿಬರುತ್ತಿದ್ದ ಮಾತಿಗೆ ಈಗ ಇನ್ನಷ್ಟು ಬಲ ಸಿಕ್ಕಂತಾಗಿದೆ.
ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ನಟ ಅಭಿಷೇಕ್ ಬಚ್ಚನ್ ಅವರ ಸಂಸಾರದದಲ್ಲಿ ಬಿರುಕು ಮೂಡಿದೆ ಎಂಬ ಮಾತು ಹಲವು ತಿಂಗಳಿಂದ ಕೇಳಿ ಬರುತ್ತಲೇ ಇದೆ. ಅನಂತ್ ಅಂಬಾನಿ ಮದುವೆಗೆ ಐಶ್ವರ್ಯಾ ರೈ ಬಚ್ಚನ್ ಅವರು ಒಂಟಿಯಾಗಿ ಬಂದಿದ್ದರು. ಗಂಡನನ್ನು ಬಿಟ್ಟು ಬಂದಿದ್ದರಿಂದ ಎಲ್ಲರಿಗೂ ಅನುಮಾನ ಮೂಡಿತು. ಅಂದಿನಿಂದ ಇಂದಿನ ತನಕ ನೆಟ್ಟಿಗರು ಅವರ ಸಂಸಾರದ ಮೇಲೆ ಒಂದು ಕಣ್ಣು ಇಟ್ಟಿದ್ದಾರೆ. ಈ ಜೋಡಿಯು ವಿಚ್ಛೇದನ ಪಡೆಯಲು ಮುಂದಾಗಿದ್ದು ಹೌದಾ ಎಂಬುದಕ್ಕೆ ಉತ್ತರ ಹುಡುಕಲು ಫ್ಯಾನ್ಸ್ ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಹೊಸದೊಂದು ಸಾಕ್ಷಿ ಸಿಕ್ಕಿದೆ.
ಐಶ್ವರ್ಯಾ ರೈ ಬಚ್ಚನ್ ಅವರು ಮಗಳು ಆರಾಧ್ಯ ಜೊತೆ ದುಬೈಗೆ ತೆರಳಿದ್ದಾರೆ, ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗುವ ಸಲುವಾಗಿ ಅವರು ಅಲ್ಲಿಗೆ ಹೋಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಡೆದುಬರುತ್ತಿರುವ ಅವರ ವಿಡಿಯೋ ಮತ್ತು ಫೋಟೋಗಳನ್ನು ಪಾಪರಾಜಿಗಳು ಸೆರೆ ಹಿಡಿದಿದ್ದಾರೆ. ಆ ಫೋಟೋಗಳನ್ನು ನೋಡಿದ ನೆಟ್ಟಿಗರಿಗೆ ಅಚ್ಚರಿ ಆಗಿದೆ. ಯಾಕೆಂದರೆ, ಆ ಫೋಟೋಗಳಲ್ಲಿ ಐಶ್ವರ್ಯಾ ರೈ ಅವರ ವೆಡ್ಡಿಂಗ್ ರಿಂಗ್ ಮಿಸ್ಸಿಂಗ್.
ಯಾವಾಗಲೂ ಐಶ್ವರ್ಯಾ ರೈ ಅವರು ಕೈಯಲ್ಲಿ ಮದುವೆಯ ಉಂಗುರ ಇರುತ್ತಿತ್ತು. ಈಗ ಅವರು ಅದನ್ನು ತೆಗೆದಿಟ್ಟಿದ್ದಾರೆ. ಬೆಂಕಿ ಇಲ್ಲದೇ ಹೊಗೆ ಆಡಲ್ಲ ಎಂಬುದು ಇದೇ ಕಾರಣಕ್ಕೆ. ಗಂಡನ ಜೊತೆ ಕಿರಿಕ್ ಆಗಿರುವ ಕಾರಣದಿಂದಲೇ ಅವರು ವೆಡ್ಡಿಂಗ್ ರಿಂಗ್ ತೆಗೆದಿಟ್ಟಿದ್ದಾರೆ ಎಂಬುದು ಗಾಸಿಪ್ ಮಂದಿಯ ವಾದ. ಅಲ್ಲದೇ, ತಮ್ಮ ವಿಚ್ಛೇದನದ ಬಗ್ಗೆ ಕೇಳಿಬಂದ ಗಾಸಿಪ್ಗಳಿಗೆ ಅವರು ಈವರೆಗೂ ಸ್ಪಷ್ಟನೆ ನೀಡಿಲ್ಲ.
View this post on Instagram
2007ರಲ್ಲಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಲ್ಲಿಯವರೆಗೆ ಅವರು ಅನ್ಯೋನ್ಯವಾಗಿಯೇ ಸಂಸಾರ ಮಾಡಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರಿಬ್ಬರ ನಡುವೆ ಮುನಿಸು ಬಂದಿರುವ ಸಾಧ್ಯತೆ ಇದೆ. ಅಭಿಷೇಕ್ ಬಚ್ಚನ್ ಕೂಡ ಪತ್ನಿಯನ್ನು ಬಿಟ್ಟು ಒಂಟಿಯಾಗಿ ಸುತ್ತಾಡುತ್ತಿದ್ದಾರೆ.
ಇದನ್ನೂ ಓದಿ: ‘ನನಗೆ ಮಗಳಿಗಿಂತ ಇನ್ಯಾರೂ ಮುಖ್ಯ ಅಲ್ಲ’; ಐಶ್ವರ್ಯಾ ರೈ
ಐಶ್ವರ್ಯಾ ರೈ ಅವರಿಗೆ ಈಗ 50 ವರ್ಷ ವಯಸ್ಸು. ಮದುವೆ ಬಳಿಕ ಅವರು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದೆ. ರೂಪದರ್ಶಿಯಾಗಿ ಅವರಿಗೆ ಈಗಲೂ ಸಖತ್ ಬೇಡಿಕೆ ಇದೆ. ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ನಡುವೆ ಕ್ಲ್ಯಾಶ್ ಆಗಿದ್ದರಿಂದ ಅವರ ಸಂಸಾರದಲ್ಲಿ ಬಿರುಕು ಮೂಡಿರುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.