ಮುಖ್ಯಮಂತ್ರಿ ಮನೆಯ ಗಣೇಶ ಚತುರ್ಥಿ ಸಂಭ್ರಮದಲ್ಲಿ ಭಾಗಿಯಾದ ಸಲ್ಮಾನ್​ ಖಾನ್​

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಮನೆಯಲ್ಲಿ ಗಣೇಶನ ಹಬ್ಬವನ್ನು ಆಚರಿಸಲಾಗಿದೆ. ಇದರಲ್ಲಿ ಸಲ್ಮಾನ್​ ಖಾನ್​ ಅವರು ಭಾಗಿ ಆಗಿದ್ದಾರೆ. ಅವರಿಗೆ ಸಹೋದರಿ ಅರ್ಪಿತಾ ಖಾನ್​ ಕೂಡ ಸಾಥ್​ ನೀಡಿದ್ದಾರೆ. ಸಲ್ಮಾನ್​ ಖಾನ್​ ಅವರು ಗಣೇಶನ ಮೂರ್ತಿಗೆ ಕೈಮುಗಿದ ಫೋಟೋಗಳನ್ನು ಏಕನಾಥ್​ ಶಿಂಧೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮುಖ್ಯಮಂತ್ರಿ ಮನೆಯ ಗಣೇಶ ಚತುರ್ಥಿ ಸಂಭ್ರಮದಲ್ಲಿ ಭಾಗಿಯಾದ ಸಲ್ಮಾನ್​ ಖಾನ್​
ಸಲ್ಮಾನ್​ ಖಾನ್​, ಏಕನಾಥ್​ ಶಿಂಧೆ
Follow us
|

Updated on: Sep 15, 2024 | 8:40 PM

ನಟ ಸಲ್ಮಾನ್​ ಖಾನ್​ ಅವರ ಮನೆಯಲ್ಲಿ ಹಿಂದೂ-ಮುಸ್ಲಿಂ ಎರಡೂ ಧರ್ಮಗಳ ಹಬ್ಬಗಳನ್ನು ಆಚರಿಸಲಾಗುತ್ತದೆ. ಈದ್​, ರಂಜಾನ್​ ರೀತಿಯೇ ದೀಪಾವಳಿ, ಗಣೇಶ ಚತುರ್ಥಿ ಹಬ್ಬಗಳನ್ನು ಸಂಭ್ರಮದಿಂದ ಸೆಲೆಬ್ರೇಟ್​ ಮಾಡಲಾಗುತ್ತದೆ. ಅಲ್ಲದೇ, ಅವರು ಸ್ನೇಹಿತರ ಮನೆಗೂ ತೆರಳಿ ಹಬ್ಬದ ಸಡಗರದಲ್ಲಿ ಭಾಗಿ ಆಗುತ್ತಾರೆ. ಈಗ ಸಲ್ಮಾನ್​ ಖಾನ್​ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಅವರ ಮನೆಗೆ ಬಂದು ಗಣೇಶ ಚತುರ್ಥಿ ಆಚರಣೆಗೆ ಸಾಕ್ಷಿ ಆಗಿದ್ದಾರೆ. ಗಣೇಶನ ಮೂರ್ತಿಗೆ ನಮಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಏಕತಾಥ್ ಶಿಂಧೆ ಅವರ ಮನೆಯಲ್ಲಿ ಅದ್ದೂರಿಯಾಗಿ ಗಣಪತಿ ಹಬ್ಬವನ್ನು ಆಚರಿಸಲಾಗಿದೆ. ಭಾನುವಾರ (ಸೆ.15) ಸಲ್ಮಾನ್​ ಖಾನ್​ ಹಾಗೂ ಅವರ ಸಹೋದರಿ ಅರ್ಪಿತಾ ಖಾನ್​ ಅವರು ಬಂದು ಗಣೇಶನ ದರ್ಶನ ಪಡೆದಿದ್ದಾರೆ. ಗಣೇಶನ ವಿಗ್ರಹಕ್ಕೆ ಸಲ್ಮಾನ್​ ಖಾನ್​ ಅವರು ಕೈ ಜೋಡಿಸಿ ನಮಿಸಿದ್ದಾರೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಪ್ರತಿ ವರ್ಷವೂ ಸಲ್ಮಾನ್​ ಖಾನ್​ ಅವರ ಮನೆಯಲ್ಲಿ ಭಾರಿ ಸಡಗರದಿಂದ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಕೂಡ ಅವರ ಮನೆಯಲ್ಲಿ ಗಣೇಶನ ಮೂರ್ತಿ ಕೂರಿಸಿ, ಪೂಜೆ ಮಾಡಲಾಗಿತ್ತು. ಗಣೇಶ ವಿಸರ್ಜನೆಯ ಸಮಯದಲ್ಲಿ ಸಲ್ಮಾನ್​ ಖಾನ್​ ಕುಟುಂಬದವರು ಹಾಡಿ, ಕುಣಿದು ಸಂಭ್ರಮಿಸಿದರು. ಆ ಸಂದರ್ಭದ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು.

ಇದನ್ನೂ ಓದಿ: ಸಡಗರದಿಂದ ಗಣಪತಿ ಹಬ್ಬ ಆಚರಿಸಿದ ಸಲ್ಮಾನ್​ ಖಾನ್​ ಕುಟುಂಬ

ಹಬ್ಬದ ಸಲುವಾಗಿ ಸಲ್ಮಾನ್​ ಖಾನ್​ ಅವರು ಸಿನಿಮಾದ ಕೆಲಸಗಳಿಗೆ ಬ್ರೇಕ್​ ನೀಡಿದ್ದಾರೆ. ಪ್ರಸ್ತುತ ಅವರು ನಿರ್ದೇಶಕ ಎ.ಆರ್. ಮುರುಗದಾಸ್​ ಜೊತೆ ‘ಸಿಕಂದರ್​’ ಸಿನಿಮಾದ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾ ಮೇಲೆ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಲ್ಮಾನ್​ ಖಾನ್​ ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬ್ಯಾಕ್​ ಟು ಬ್ಯಾಕ್​ ಸೋಲು ಕಂಡಿರುವ ಸಲ್ಮಾನ್​ ಖಾನ್​ ಅವರಿಗೆ ಒಂದು ಗೆಲುವಿನ ಅಗತ್ಯವಿದೆ. ‘ಸಿಕಂದರ್’ ಸಿನಿಮಾ ಮೂಲಕ ಭರ್ಜರಿ ಸಕ್ಸಸ್​ ಸಿಗುತ್ತಾ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹಣೆಗೆ ಕುಂಕುಮ ಇಟ್ಟುಕೊಳ್ಳುವುದರ ಹಿಂದಿನ ಕಾರಣವೇನು? ವಿಡಿಯೋ ನೋಡಿ
ಹಣೆಗೆ ಕುಂಕುಮ ಇಟ್ಟುಕೊಳ್ಳುವುದರ ಹಿಂದಿನ ಕಾರಣವೇನು? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ಸೈಟ್​ ಖರೀದಿಸುವ ಯೋಗ ಇದೆ
Nithya Bhavishya: ಈ ರಾಶಿಯವರಿಗೆ ಇಂದು ಸೈಟ್​ ಖರೀದಿಸುವ ಯೋಗ ಇದೆ
ನದಿಗೆ ತ್ಯಾಜ್ಯ ಸುರಿದವರನ್ನು ಹಿಡಿದು ತರಾಟೆಗೆ ತೆಗೆದುಕೊಂಡ ವಿನೋದ್ ರಾಜ್
ನದಿಗೆ ತ್ಯಾಜ್ಯ ಸುರಿದವರನ್ನು ಹಿಡಿದು ತರಾಟೆಗೆ ತೆಗೆದುಕೊಂಡ ವಿನೋದ್ ರಾಜ್
ಸೊಂಟಪಟ್ಟಿಯಿಂದ ಬಿಗ್ ಬಾಸ್ ಸ್ಪರ್ಧಿಗಳಿಗೆ ಶುರುವಾಯ್ತು ಹೊಸ ತಲೆಬಿಸಿ
ಸೊಂಟಪಟ್ಟಿಯಿಂದ ಬಿಗ್ ಬಾಸ್ ಸ್ಪರ್ಧಿಗಳಿಗೆ ಶುರುವಾಯ್ತು ಹೊಸ ತಲೆಬಿಸಿ
ಮುಸ್ಲಿಂ ವೋಟುಗಳು ಮಾರಾಟಕ್ಕಿಲ್ಲ ಎಂದಷ್ಟೇ ನಾನು ಹೇಳಿದ್ದು: ಜಮೀರ್ ಅಹ್ಮದ್
ಮುಸ್ಲಿಂ ವೋಟುಗಳು ಮಾರಾಟಕ್ಕಿಲ್ಲ ಎಂದಷ್ಟೇ ನಾನು ಹೇಳಿದ್ದು: ಜಮೀರ್ ಅಹ್ಮದ್
ಪಾಟ್ನಾದಲ್ಲಿ ತನಿಷ್ಕ್ ಶೋರೂಮ್‌ನಲ್ಲಿ 5 ಲಕ್ಷ ಮೌಲ್ಯದ ಆಭರಣ ದರೋಡೆ
ಪಾಟ್ನಾದಲ್ಲಿ ತನಿಷ್ಕ್ ಶೋರೂಮ್‌ನಲ್ಲಿ 5 ಲಕ್ಷ ಮೌಲ್ಯದ ಆಭರಣ ದರೋಡೆ
ಭಾಷಣಕ್ಕೆ ಮೊದಲು ಹಿರಿಯರ ಪಾದಮುಟ್ಟಿ ಆಶೀರ್ವಾದ ಪಡೆದ ರೇವತಿ ನಿಖಿಲ್
ಭಾಷಣಕ್ಕೆ ಮೊದಲು ಹಿರಿಯರ ಪಾದಮುಟ್ಟಿ ಆಶೀರ್ವಾದ ಪಡೆದ ರೇವತಿ ನಿಖಿಲ್
ಚುನಾವಣಾ ಆಯೋಗದ ಅಧಿಕಾರಿಗಳ ಜೊತೆ ಉದ್ಧವ್ ಠಾಕ್ರೆ ವಾಗ್ವಾದ
ಚುನಾವಣಾ ಆಯೋಗದ ಅಧಿಕಾರಿಗಳ ಜೊತೆ ಉದ್ಧವ್ ಠಾಕ್ರೆ ವಾಗ್ವಾದ
ಮಾಜಿ ಪ್ರಧಾನಿಯ ಘನತೆಗೆ ತಕ್ಕುದಲ್ಲದ ಮಾತು ದೇವೇಗೌಡ ಆಡುತ್ತಾರೆ: ಸಿಎಂ
ಮಾಜಿ ಪ್ರಧಾನಿಯ ಘನತೆಗೆ ತಕ್ಕುದಲ್ಲದ ಮಾತು ದೇವೇಗೌಡ ಆಡುತ್ತಾರೆ: ಸಿಎಂ
ಬಿಜೆಪಿ ಶಾಸಕ ಯತ್ನಾಳ್​ಗೆ ಸಾರ್ವಜನಿಕರಿಂದ ತೀವ್ರ ತರಾಟೆ
ಬಿಜೆಪಿ ಶಾಸಕ ಯತ್ನಾಳ್​ಗೆ ಸಾರ್ವಜನಿಕರಿಂದ ತೀವ್ರ ತರಾಟೆ