- Kannada News Photo gallery Salman Khan bodyguard Shera buys car worth Rs 1 4 Cr Entertainment news in Kannada
1.4 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ
ಬರೋಬ್ಬರಿ 1.4 ಕೋಟಿ ರೂಪಾಯಿ ಬೆಲೆ ರೇಂಜ್ ರೋವರ್ ಕಾರನ್ನು ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ ಅವರು ಖರೀದಿ ಮಾಡಿದ್ದಾರೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಹಲವು ವರ್ಷಗಳಿಂದ ಸಲ್ಮಾನ್ ಖಾನ್ ಜೊತೆಯಲ್ಲಿ ಶೇರಾ ಕೆಲಸ ಮಾಡುತ್ತಿದ್ದಾರೆ. ಅವರಿಗೆ ದೊಡ್ಡ ಮೊತ್ತದ ಸಂಬಳ ಸಿಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಶೇರಾ ಫೇಮಸ್ ಆಗಿದ್ದಾರೆ.
Updated on: Aug 29, 2024 | 10:03 PM

ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ ಅವರ ಮನೆಗೆ ಹೊಸ ಕಾರು ಬಂದಿದೆ. ಈ ಖುಷಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಐಷಾರಾಮಿಯಾದ ಈ ಹೊಸ ಕಾರಿನ ಎದುರು ಪೋಸ್ ನೀಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಕಳೆದ 20 ವರ್ಷಗಳಿಂದ ಸಲ್ಮಾನ್ ಖಾನ್ಗೆ ಬಾಡಿಗಾರ್ಡ್ ಆಗಿ ಶೇರಾ ಕೆಲಸ ಮಾಡುತ್ತಿದ್ದಾರೆ. ಈ ಕೆಲಸ ಮಾಡುವುದಕ್ಕೂ ಮುನ್ನ ಅವರು ಬಾಡಿ ಬಿಲ್ಡಿಂಗ್ನಲ್ಲಿ ಆಸಕ್ತಿ ಹೊಂದಿದ್ದರು. ಬಳಿಕ ಬಾಡಿಗಾರ್ಡ್ ಆಗಿ ಕೋಟಿಗಟ್ಟಲೆ ದುಡಿಯಲು ಆರಂಭಿಸಿದರು.

ಪ್ರತಿ ತಿಂಗಳು ಶೇರಾಗೆ ಸಲ್ಮಾನ್ ಖಾನ್ ಬರೋಬ್ಬರಿ 15 ಲಕ್ಷ ರೂಪಾಯಿ ಸಂಭಾವನೆ ನೀಡುತ್ತಾರೆ. ಈ ವಿಷಯ ಕೇಳಿ ಎಲ್ಲರಿಗೂ ಅಚ್ಚರಿ ಆಗುತ್ತದೆ. ಸಲ್ಮಾನ್ ಖಾನ್ ಯಾವುದೇ ಜನಜಂಗುಳಿಯಲ್ಲಿ ಇದ್ದರೂ ಅವರನ್ನು ರಕ್ಷಿಸುವ ಹೊಣೆ ಶೇರಾ ಅವರದ್ದು.

ಈಗಂತೂ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಇದೆ. ಅವರನ್ನು ಹತ್ಯೆ ಮಾಡುವುದಾಗಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವರು ನೇರವಾಗಿ ಬೆದರಿಕೆ ಹಾಕಿದ್ದಾರೆ. ಮನೆ ಮೇಲೆ ಗುಂಡಿನ ದಾಳಿ ನಡೆದ ಬಳಿಕ ಸಲ್ಮಾನ್ ಖಾನ್ ಅವರು ಭದ್ರತೆ ಹೆಚ್ಚಿಸಿಕೊಂಡಿದ್ದಾರೆ.

ಬೇರೆಲ್ಲರೂ ಸಲ್ಮಾನ್ ಖಾನ್ ಅವರನ್ನು ಭಾಯ್ ಎಂದು ಕರೆಯುತ್ತಾರೆ. ಆದರೆ ಶೇರಾ ಅವರು ‘ಮಾಲಿಕ್’ ಎಂದು ಕರೆಯುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಶೇರಾ ಅವರನ್ನು ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.




