ಸದ್ದಿಲ್ಲದೇ ಮದುವೆ ಆದ ಅದಿತಿ ರಾವ್ ಹೈದರಿ, ಸಿದ್ದಾರ್ಥ್; ಫೋಟೋ ವೈರಲ್
ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿ ಅದಿತಿ ರಾವ್ ಹೈದರಿ ಅವರು ಫೇಮಸ್ ಆಗಿದ್ದಾರೆ. ಸಿದ್ದಾರ್ಥ್ ಮತ್ತು ಅದಿತಿ ಅವರು ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈಗ ಅವರು ಮದುವೆ ಆಗುವ ಮೂಲಕ ತಮ್ಮ ಪ್ರೀತಿಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅದಿತಿ ಮತ್ತು ಸಿದ್ದಾರ್ಥ್ ಅವರ ಮದುವೆಯ ಫೋಟೋಗಳು ವೈರಲ್ ಆಗುತ್ತಿವೆ.
ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಖ್ಯಾತ ನಟ ಸಿದ್ದಾರ್ಥ್ ಜೊತೆ ಅವರ ಮದುವೆ ನೆರವೇರಿದೆ. ಮದುವೆ ದಿನಾಂಕದ ಬಗ್ಗೆ ಈ ಜೋಡಿ ಬಾಯಿ ಬಿಟ್ಟಿರಲಿಲ್ಲ. ಆದರೆ ಈಗ ಸಡನ್ ಆಗಿ ಮದುವೆಯ ಫೋಟೋಗಳನ್ನು ಹಂಚಿಕೊಂಡು ಎಲ್ಲರಿಗೂ ಸಿಹಿ ಸುದ್ದಿ ನೀಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಿದ್ದಾರ್ಥ್ ಮತ್ತು ಅದಿತಿ ರಾವ್ ಹೈದರಿ ಅವರು ರಿಲೇಷನ್ಶಿಪ್ನಲ್ಲಿ ಇದ್ದರು. ಈಗ ದಾಂಪತ್ಯ ಜೀವನಕ್ಕೆ ಪ್ರವೇಶ ಪಡೆದಿದ್ದಾರೆ. ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಅದಿತಿ ರಾವ್ ಹೈದರಿ ಮತ್ತು ಸಿದ್ದಾರ್ಥ್ ಅವರ ಮದುವೆ ವಿಷಯ ತಿಳಿದು ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.
ದಕ್ಷಿಣ ಭಾರತದ ಶೈಲಿಯಲ್ಲಿ ಅದಿತಿ ರಾವ್ ಹೈದರಿ ಹಾಗೂ ಸಿದ್ದಾರ್ಥ್ ಮದುವೆ ನಡೆದಿದೆ. ‘ನೀನೇ ನನ್ನ ಚಂದ್ರ, ನೀನೇ ನನ್ನ ಸೂರ್ಯ, ನೀನೇ ನನ್ನ ನಕ್ಷತ್ರ’ ಎಂದು ಕ್ಯಾಪ್ಷನ್ ನೀಡುವ ಮೂಲಕ ಅದಿತಿ ರಾವ್ ಹೈದರಿ ಅವರು ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮದುವೆಯಲ್ಲಿ ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗಿ ಆಗಿದ್ದರು.
View this post on Instagram
ಹಲವು ವರ್ಷಗಳಿಂದ ಸಿದ್ದಾರ್ಥ್ ಮತ್ತು ಅದಿತಿ ರಾವ್ ಹೈದರಿ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ತಮ್ಮ ಪ್ರೀತಿಯ ವಿಷಯವನ್ನು ಅವರಿಬ್ಬರು ಮುಚ್ಚಿಟ್ಟಿರಲಿಲ್ಲ. ಇನ್ಸ್ಟಾಗ್ರಾಮ್ನಲ್ಲಿ ತಮ್ಮಿಬ್ಬರ ಫೋಟೋಗಳನ್ನು ಅವರು ಆಗಾಗ ಶೇರ್ ಮಾಡಿಕೊಳ್ಳುತ್ತಿದ್ದರು. 2024ರ ಆರಂಭದಲ್ಲಿ ಅವರಿಬ್ಬರು ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಈಗ ಸದ್ದಿಲ್ಲದೇ ಮದುವೆ ಆಗಿದ್ದಾರೆ.
ಇದನ್ನೂ ಓದಿ: ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ಗೆ ಮೆರುಗು ತಂದ ಅದಿತಿ ರಾವ್ ಹೈದರಿ
ಅದಿತಿ ರಾವ್ ಹೈದರಿ ಮತ್ತು ಸಿದ್ದಾರ್ಥ್ ಇಬ್ಬರಿಗೂ ಇದು ಎರಡನೇ ಮದುವೆ. ಮೊದಲ ಪತ್ನಿ ಮೇಘನಾಗೆ ಸಿದ್ದಾರ್ಥ್ ಅವರು 2007ರಲ್ಲಿ ವಿಚ್ಛೇದನ ನೀಡಿದ್ದರು. ಹಾಗೆಯೇ ಅದಿತಿ ರಾವ್ ಅವರು ಮೊದಲ ಪತಿ ಸತ್ಯದೀಪ್ ಮಿಶ್ರಾಗೆ 2013ರಲ್ಲಿ ಡಿವೋರ್ಸ್ ನೀಡಿದ್ದರು. ಆ ಬಳಿಕ ಅದಿತಿ ರಾವ್ ಅವರಿಗೆ ಸಿದ್ದಾರ್ಥ್ ಜೊತೆ ಪ್ರೀತಿ ಚಿಗುರಿತ್ತು. ಈಗ ಅವರಿಬ್ಬರು ಸತಿ-ಪತಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.