‘ನನಗೆ ಮಗಳಿಗಿಂತ ಇನ್ಯಾರೂ ಮುಖ್ಯ ಅಲ್ಲ’; ಐಶ್ವರ್ಯಾ ರೈ
ಐಶ್ವರ್ಯಾ ರೈ ಹಾಗೂ ಆರಾಧ್ಯಾ ಬಚ್ಚನ್ ಆಗಾಗ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಐಶ್ವರ್ಯಾ ಅವರು ಸದ್ಯ ಕುಟುಂಬದಿಂದ ದೂರ ಇದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಐಶ್ವರ್ಯಾ ರೈ ಅವರು ನೀಡಿದ ಹಳೆಯ ಹೇಳಿಕೆ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಐಶ್ವರ್ಯಾ ರೈ ಬಚ್ಚನ್ ಅವರು ಈಗ ತಾಯಿ ಆಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರಾಧ್ಯಾ ಬಚ್ಚನ್ ಅವರ ಆರೈಕೆಯಲ್ಲಿ ಅವರು ಬ್ಯುಸಿ ಇದ್ದಾರೆ. ಆರಾಧ್ಯಾ ಜನಿಸಿದ್ದು 2011ರಲ್ಲಿ. ಆಗಿನಿಂದಲೂ ಆರಾಧ್ಯಾ ಸುದ್ದಿಯಲ್ಲಿ ಇದ್ದಾರೆ. ಐಶ್ವರ್ಯಾ ಎಲ್ಲೇ ಹೋದರೂ ಅವರ ಹಿಂದೆ ಆರಾಧ್ಯಾ ಇರುತ್ತಾಳೆ. ಆರಾಧ್ಯಾ ಹುಟ್ಟಿದ ಬಳಿಕ ಬದುಕು ಬದಲಾಗಿದೆ ಎಂದು ಐಶ್ವರ್ಯಾ ರೈ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಅವಳನ್ನು ಬಿಟ್ಟು ಬೇರಾರೂ ಮುಖ್ಯ ಅಲ್ಲ ಎಂದು ಹೇಳಿದ್ದರು.
ಐಶ್ವರ್ಯಾ ಹಾಗೂ ಅಭಿಷೇಕ್ ವಿಚ್ಛೇದನ ಪಡೆಯೋ ಸುದ್ದಿ ಚರ್ಚೆಯಲ್ಲಿ ಇದೆ. ಐಶ್ವರ್ಯಾ ರೈ ಅವರು ಅಭಿಷೇಕ್ನಿಂದ ದೂರವೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಆ ರೀತಿ ಇಲ್ಲ ಎಂದು ಕೆಲವು ವರದಿಗಳು ಹೇಳುತ್ತಿವೆ. ಹೀಗಿರುವಾಗ ಐಶ್ವರ್ಯಾ ಅವರ ಹಳೆಯ ಸಂದರ್ಶನ ವೈರಲ್ ಆಗಿದೆ. ‘ನಾನು 18ನೇ ವಯಸ್ಸಿಗೆ ಸಾಕಷ್ಟು ಜವಾಬ್ದಾರಿಗಳ ಜೊತೆ ತೂರಾಡುತ್ತಿದ್ದೆ. ಬೆಳಿಗ್ಗೆ 5:30ಕ್ಕೆ ಎದ್ದೇಳುತ್ತಿದ್ದೆ. ನನಗೆ ಅವುಗಳು ಇನ್ನೂ ನೆನಪಿದೆ. ಆದರೆ, ಆರಾಧ್ಯಾ ಜನಿಸಿದ ನಂತರ ನನ್ನ ಆದ್ಯತೆಗಳು ಸಂಪೂರ್ಣವಾಗಿ ಬದಲಾಗಿವೆ. ಅವಳು ಮೊದಲು ಬರುತ್ತಾಳೆ. ನಂತರ ಎಲ್ಲರೂ ಬರುತ್ತಾರೆ’ ಎಂದಿದ್ದರು ಅವರು.
‘ಆರಾಧ್ಯಾ ಯಾವಾಗಲೂ ಹಾಡುತ್ತಾ, ಡ್ಯಾನ್ಸ್ ಮಾಡುತ್ತಾ ಇರುತ್ತಾಳೆ. ಕೆಲವೊಮ್ಮೆ ನನ್ನ ಸಿನಿಮಾ ಹಾಡು, ಕೆಲವೊಮ್ಮೆ ಅವಳ ತಂದೆಯ ಹಾಡು ಹಾಗೂ ಇನ್ನೂ ಕೆಲವೊಮ್ಮೆ ಅವಳ ತಾತನ ಸಿನಿಮಾ ಹಾಡನ್ನು ಹಾಡುತ್ತಾಳೆ. ಸಾಮಾನ್ಯ ಜೀವನ ನಡೆಸಲು ಸಹಕಾರಿ ಆಗುವಂತೆ ನಾವು ನೋಡಿಕೊಳ್ಳುತ್ತೇವೆ’ ಎಂದಿದ್ದರು ಐಶ್ವರ್ಯಾ.
‘ಆರಾಧ್ಯಾಗೆ ಅಜ್ಜಿ ಇದ್ದಾಳೆ. ಹಾಗಿದ್ದಾಗ ನಾನು ಲಾಂಗ್ ಹಾಲಿಡೇ ತೆಗೆದುಕೊಳ್ಳಬಹುದು. ಆದರೆ, ಆರಾಧ್ಯಾಗೆ ಏನೇ ಅಗತ್ಯಬಿದ್ದರೂ ನಾನೇ ಮಾಡಬೇಕು ಎನಿಸುತ್ತದೆ. ಆದರೆ, ನನಗೆ ಇರೋ ಶೆಡ್ಯೂಲ್ನಿಂದ ಅದನ್ನು ಮಾಡೋಕೆ ಸಾಧ್ಯವಾಗಲ್ಲ. ಆದರೆ, ಬೆಂಬಲ ನೀಡೋ ಪತಿ ಇದ್ದಾರೆ. ಅದಕ್ಕೆ ನಾನು ಲಕ್ಕಿ. ನನಗೆ ಅವಳು ಮುಖ್ಯ, ಅವಳಿಗಿಂತ ಇನ್ಯಾರೂ ಮುಖ್ಯರಲ್ಲ’ ಎಂದಿದ್ದರು ಐಶ್ವರ್ಯಾ.
ಇದನ್ನೂ ಓದಿ: ‘ನಾನು ಪ್ರೀತಿಸೋ ಐಶ್ವರ್ಯಾ ಬೇರೆ ಯಾರನ್ನೋ ಮದುವೆ ಆಗುತ್ತಾರೆ’; ವಿಕ್ರಮ್ ಹೀಗೆ ಹೇಳಿದ್ದೇಕೆ?
ಐಶ್ವರ್ಯಾ ಹಾಗೂ ಆರಾಧ್ಯಾ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಅನಂತ್ ಅಂಬಾನಿ ಮದುವೆಗೆ ಇವರು ಒಟ್ಟಾಗಿ ಆಗಮಿಸಿದ್ದರು. ಈ ಮೊದಲು ನೋಡಿದ ಆರಾಧ್ಯಾಗೂ ಈಗಿನ ಆರಾಧ್ಯಾಗೂ ಸಾಕಷ್ಟು ವ್ಯತ್ಯಾಸ ಇದೆ. ಸಣ್ಣ ವಯಸ್ಸಿನಲ್ಲೇ ಅವರು ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.