ಬಾಲಿವುಡ್ ಬ್ಯಾಚುಲರ್ ಹೀರೋ ಜೊತೆ ಯುರೋಪ್ ಹಾರಲಿದ್ದಾರೆ ರಶ್ಮಿಕಾ

Rashmika Mandanna: ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್ ಖಾನ್ ಯೂರೋಪ್​ಗೆ ಹಾರಲಿದ್ದಾರೆ. ಇಬ್ಬರು ಒಟ್ಟಿಗೆ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರೀಕರಣಕ್ಕಾಗಿ ಅವರು ವಿದೇಶ ಪ್ರವಾಸ ಮಾಡಲಿದ್ದಾರೆ. ಅಂದಹಾಗೆ ಸಿನಿಮಾ ಯಾವುದು?

ಬಾಲಿವುಡ್ ಬ್ಯಾಚುಲರ್ ಹೀರೋ ಜೊತೆ ಯುರೋಪ್ ಹಾರಲಿದ್ದಾರೆ ರಶ್ಮಿಕಾ
Follow us
| Updated By: ಮಂಜುನಾಥ ಸಿ.

Updated on: Sep 10, 2024 | 6:30 PM

ನಟಿ ರಶ್ಮಿಕಾ ಮಂದಣ್ಣ ಅವರು ಕಳೆದ ಕೆಲ ವರ್ಷಗಳಿಂದ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಅವರು ಕನ್ನಡ ಚಿತ್ರರಂಗದಿಂದ ಬಣ್ಣದ ಬದುಕು ಆರಂಭಿಸಿ, ಈಗ ಬಾಲಿವುಡ್ವರೆಗೆ ತೆರಳಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ಸಿಖಂದರ್’ ಸಿನಿಮಾಗೆ ಅವರೇ ನಾಯಕಿ ಅನ್ನೋದು ಗೊತ್ತಿರುವ ವಿಚಾರ. ಈಗ ನಾವು ಹೇಳುತ್ತಿರುವ ಹೊಸ ವಿಚಾರ ಏನೆಂದರೆ ಅವರು ಶೀಘ್ರವೇ ಅವರು ಸಲ್ಮಾನ್ ಖಾನ್ ಜೊತೆ ಯುರೋಪ್ಗೆ ಹಾರಲಿದ್ದಾರೆ. ಅಲ್ಲಿ ಅವರು ಹಾಡುಗಳ ಶೂಟಿಂಗ್ ಮಾಡಲಿದ್ದಾರೆ.

ಬಾಲಿವುಡ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಹೀರೋಯಿನ್ಗಳು ನಾಮಕಾವಸ್ತೆಗೆ ಇರುತ್ತಾರೆ. ಸಾಂಗ್ ಹಾಗೂ ಕೆಲವು ರೊಮ್ಯಾಂಟಿಕ್ ದೃಶ್ಯಗಳಿಗೆ ಅವರು ಸೀಮಿತ ಆಗುತ್ತಾರೆ. ‘ಸಿಖಂದರ್’ ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಕೂಡ ಅಷ್ಟಕ್ಕೇ ಸೀಮಿತಿ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಚಿತ್ರತಂಡದ ಕಡೆಯಿಂದ ಈ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕದೆ.

ಎರಡು ಸಾಂಗ್ಗಳನ್ನು ಕಂಪೋಸ್ ಮಾಡಲಾಗಿದ್ದು, ದೊಡ್ಡ ಬಜೆಟ್​ನಲ್ಲಿ ಈ ಹಾಡುಗಳನ್ನು ಯುರೋಪ್ನಲ್ಲಿ ಶೂಟ್ ಮಾಡೋ ಪ್ಲ್ಯಾನ್ ಇದೆ. ಸದ್ಯ ಯುರೋಪ್ನಲ್ಲಿ ಲೊಕೇಶ್ ಹುಡುಕಾಟ ನಡೆಯುತ್ತಿದೆ. ಈ ಹಾಡಿಗಾಗಿ ಸುಂದರ ತಾಣಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಈ ಸಾಂಗ್ಗಾಗಿ ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಅಪಘಾತ; ಕ್ಷಣಿಕ ಜೀವನದ ಬಗ್ಗೆ ಮಾತನಾಡಿದ ‘ಪುಷ್ಪ 2’ ನಟಿ

ಹಾಡಿನ ಜೊತೆಗೆ ಕೆಲವು ಪ್ರಮುಖ ದೃಶ್ಯಗಳ ಶೂಟ್ ಕೂಡ ಯುರೋಪ್ನಲ್ಲಿ ನಡೆಯಲಿದೆಯಂತೆ. ಮೊದಲೇ ಹೇಳಿದಂತೆ ನಿರ್ಮಾಪಕ ಸಾಜಿದ್ ನಾಡಿಯಾದ್ವಾಲಾ ಅವರು ಈ ಚಿತ್ರಕ್ಕಾಗಿ ದೊಡ್ಡ ಮಟ್ಟದ ಹಣ ಹೂಡಿಕೆ ಮಾಡುತ್ತಿದ್ದಾರೆ. ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಎಆರ್ ಮುರುಗದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

‘ಸಿಖಂದರ್’ ಸಿನಿಮಾ 2025ರ ಈದ್ಗೆ ರಿಲೀಸ್ ಆಗಲಿದೆ. ಎರಡು ಹಾಡುಗಳ ಪೈಕಿ ಒಂದು ರೊಮ್ಯಾಂಟಿಕ್ ಸಾಂಗ್ ಆಗಿದ್ದು ಮತ್ತೊಂದು ಡ್ಯಾನ್ಸ್ ನಂಬರ್ ಆಗಿರಲಿದೆ. ಈ ಚಿತ್ರದಲ್ಲಿ ಬಾಹುಬಲಿಯಲ್ಲಿ ಕಟ್ಟಪ್ಪ ಪಾತ್ರ ಮಾಡಿದ್ದ ಸತ್ಯರಾಜ್ ವಿಲನ್ ಪಾತ್ರ ಮಾಡುತ್ತಿದ್ದಾರೆ.

ರಶ್ಮಿಕಾಗೆ ಇತ್ತೀಚೆಗೆ ಅಪಘಾತ ಆಗಿತ್ತು. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದರು. ‘ಕಳೆದ ತಿಂಗಳು ನನಗೆ ಚಿಕ್ಕ ಅಪಘಾತ ಆಯಿತು. ವೈದ್ಯರ ಸಲಹೆಯಂತೆ ನಾನು ಮನೆಯಲ್ಲೇ ಇದ್ದು ಚೇತರಿಸಿಕೊಂಡೆ. ಈಗ ನಾನು ಚೆನ್ನಾಗಿದ್ದೇನೆ’ ಎಂದು ರಶ್ಮಿಕಾ ಮಂದಣ್ಣ ಎದುರು ಹೇಳಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು