ರಶ್ಮಿಕಾ ಮಂದಣ್ಣಗೆ ಅಪಘಾತ; ಕ್ಷಣಿಕ ಜೀವನದ ಬಗ್ಗೆ ಮಾತನಾಡಿದ ‘ಪುಷ್ಪ 2’ ನಟಿ

ನಟಿ ರಶ್ಮಿಕಾ ಮಂದಣ್ಣ ಅವರು ಒಂದು ಶಾಕಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆ ಅವರಿಗೆ ಅಪಘಾತ ಆಗಿತ್ತು. ಇಷ್ಟು ದಿನ ಗೌಪ್ಯವಾಗಿದ್ದ ವಿಷಯವನ್ನು ಅವರು ಈಗ ಬಹಿರಂಗಪಡಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿರುವ ಅವರಿಗೆ ಈ ಜೀವನ ಕ್ಷಣಿಕ ಎಂಬುದು ಅರಿವಾಗಿದೆ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಮದನ್​ ಕುಮಾರ್​
|

Updated on: Sep 09, 2024 | 9:37 PM

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚಿಗೆ ಹೆಚ್ಚು ಆ್ಯಕ್ಟೀವ್​ ಆಗಿರಲಿಲ್ಲ. ಈ ನಡುವೆ ಸೋಶಿಯಲ್​ ಮೀಡಿಯಾದಲ್ಲಿ ಮತ್ತು ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಅವರು ಈಗ ತಿಳಿಸಿದ್ದಾರೆ.

1 / 5
‘ಕಳೆದ ತಿಂಗಳು ನನಗೆ ಚಿಕ್ಕ ಅಪಘಾತ ಆಯಿತು. ವೈದ್ಯರ ಸಲಹೆಯಂತೆ ನಾನು ಮನೆಯಲ್ಲೇ ಇದ್ದು ಚೇತರಿಸಿಕೊಂಡೆ. ಈಗ ನಾನು ಚೆನ್ನಾಗಿದ್ದೇನೆ’ ಎಂದು ರಶ್ಮಿಕಾ ಮಂದಣ್ಣ ಅವರು ಅಭಿಮಾನಿಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

2 / 5
‘ನಿಮ್ಮ ಬಗ್ಗೆ ಕಾಳಜಿ ವಹಿಸುವುದೇ ನಿಮ್ಮ ಮೊದಲ ಆದ್ಯತೆ ಆಗಿರಲಿ. ಯಾಕೆಂದರೆ ಜೀವನ ತುಂಬ ಕ್ಷಣಿಕ. ನಾಳೆ ಎಂಬುದು ನಮ್ಮ ಪಾಲಿಗೆ ಇದೆಯೋ ಇಲ್ಲವೋ ನಮಗೆ ತಿಳಿದಿಲ್ಲ’ ಎಂದು ಸೋಶಿಯಲ್​ ಮೀಡಿಯಾದಲ್ಲಿ ರಶ್ಮಿಕಾ ಬರೆದುಕೊಂಡಿದ್ದಾರೆ.

3 / 5
ಜೀವನ ಇಷ್ಟು ಕ್ಷಣಿಕ ಆದ್ದರಿಂದ ‘ಪ್ರತಿ ದಿನವೂ ಖುಷಿಯಾಗಿರಿ’ ಎಂದು ರಶ್ಮಿಕಾ ಮಂದಣ್ಣ ಅವರು ತಮ್ಮ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ. ಅಪಘಾತ ಆಗಿದ್ದರೂ ಸದ್ಯಕ್ಕೆ ರಶ್ಮಿಕಾ ಚೇತರಿಸಿಕೊಂಡಿದ್ದು ನೋಡಿ ಫ್ಯಾನ್ಸ್​ ನಿಟ್ಟುಸಿರು ಬಿಟ್ಟಿದ್ದಾರೆ.

4 / 5
ಹಲವು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಅವರು ಬ್ಯುಸಿ ಆಗಿದ್ದಾರೆ. ‘ಪುಷ್ಪ 2’, ‘ಸಿಕಂದರ್​’, ‘ಛಾವ’ ಮುಂತಾದ ಬಹುನಿರೀಕ್ಷಿತ ಸಿನಿಮಾಗಳು ಅವರ ಕೈಯಲ್ಲಿ ಇವೆ. ಹೊಸ ಹೊಸ ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

5 / 5
Follow us