AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಫ್ ಅಲಿ ಖಾನ್ ಟೀಸರ್: ‘ದೇವರ’ನಿಗೂ ಭೀಕರ ಈ ಭೈರ

ಜೂ ಎನ್​ಟಿಆರ್ ನಟಿಸಲಿರುವ ‘ದೇವರ’ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಟೀಸರ್ ಇದೀಗ ಬಿಡುಗಡೆ ಆಗಿದ್ದು, ಖಡಕ್ ವಿಲನ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ.

ಸೈಫ್ ಅಲಿ ಖಾನ್ ಟೀಸರ್: ‘ದೇವರ’ನಿಗೂ ಭೀಕರ ಈ ಭೈರ
ಮಂಜುನಾಥ ಸಿ.
|

Updated on: Aug 17, 2024 | 12:53 PM

Share

ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ದೊಡ್ಡ ನಿರೀಕ್ಷೆಗಳನ್ನು ಮೂಡಿಸಿರುವ ದಕ್ಷಿಣದ ಸಿನಿಮಾಗಳಲ್ಲಿ ಒಂದು. ‘ಆರ್​ಆರ್​ಆರ್’ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಜೂ ಎನ್​ಟಿಆರ್, ‘RRR’ ಬಳಿಕ ನಟಿಸುತ್ತಿರುವ ಮೊದಲ ಸಿನಿಮಾ ಇದು. ಸಿನಿಮಾದಲ್ಲಿ ಬಹುದೊಡ್ಡ ತಾರಾಗಣವಿದ್ದು, ಸಿನಿಮಾಕ್ಕಾಗಿ ಭಾರಿ ಮೊತ್ತವನ್ನು ಖರ್ಚು ಮಾಡಲಾಗಿದೆ. ವಿದೇಶಿ ತಂತ್ರಜ್ಞರನ್ನು ಕರೆಸಿ ದುಡಿಸಿಕೊಳ್ಳಲಾಗಿದೆ. ಸಿನಿಮಾದ ಕೆಲವು ಪೋಸ್ಟರ್, ಮೇಕಿಂಗ್ ದೃಶ್ಯಗಳು ಬಿಡುಗಡೆ ಆಗಿವೆ. ಕೆಲವು ದಿನಗಳ ಹಿಂದಷ್ಟೆ ಜೂ ಎನ್​ಟಿಆರ್-ಜಾನ್ಹವಿಯ ಹಾಡಿನ ಬಿಟ್ ಒಂದು ಬಿಡುಗಡೆ ಆಗಿತ್ತು. ಇದೀಗ ಸಿನಿಮಾದ ವಿಲನ್ ಪಾತ್ರದ ಟೀಸರ್ ಬಿಡುಗಡೆ ಆಗಿದ್ದು, ಈವರೆಗೆ ಬಿಡುಗಡೆ ಆಗಿರುವ ಅಪ್​ಡೇಟ್​ಗಳಲ್ಲಿಯೇ ಅದ್ಭುತವಾಗಿದೆ.

ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್, ‘ದೇವರ’ ಸಿನಿಮಾದ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಸೈಫ್ ಪಾತ್ರದ ಹೆಸರು ಭೈರ. ಈಗ ಬಿಡುಗಡೆ ಆಗಿರುವ ಟೀಸರ್​ನಲ್ಲಿ, ಕುಸ್ತಿ ಪಂದ್ಯಾವಳಿಯ ಅಖಾಡದಲ್ಲಿ ಭಾರಿ ದೇಹಾಕಾರದ, ಭಾರಿ ಜನಬೆಂಬಲ ಹೊಂದಿರುವ ವ್ಯಕ್ತಿಯೊಬ್ಬನನ್ನು ಸೈಫ್ ಅಲಿ ಖಾನ್ ಸುಲಭವಾಗಿ ಹೊಡೆದು ಉರುಳಿಸುವ ದೃಶ್ಯವಿದೆ. ಮಾತ್ರವಲ್ಲ ಭೈರನ ಸ್ಟೈಲ್, ಆತನ ಬಾಡಿ ಲಾಂಗ್ವೇಜ್, ಕ್ರೂರತನವನ್ನು ಪ್ರದರ್ಶಿಸುವ ಕೆಲವು ದೃಶ್ಯಗಳನ್ನು ಸಹ ಟೀಸರ್​ನಲ್ಲಿ ಸೇರಿಸಲಾಗಿದೆ. ‘ದೇವರ’ ಪಾತ್ರಕ್ಕೆ ತಕ್ಕದಾದ ಎದುರಾಳಿ ಎನಿಸುವಂತೆ ಸೈಫ್ ಅಲಿ ಖಾನ್​ರ ಪಾತ್ರದ ಪರಿಚಯ ಮಾಡಿಸಲಾಗಿದೆ.

ಇದನ್ನೂ ಓದಿ:ಅವಾರ್ಡ್​ ಫಂಕ್ಷನ್​ಗಳ ಬಗ್ಗೆ ಸೈಫ್ ಅಲಿ ಖಾನ್ ಟೀಕೆ: ಹೇಳಿದ್ದೇನು?

‘ದೇವರ’ ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಎರಡೂ ಭಾಗಗಳಲ್ಲಿ ಸೈಫ್ ಅಲಿ ಖಾನ್ ವಿಲನ್ ಆಗಿರಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಬಿಡುಗಡೆ ಆಗಿರುವುದು ಸಿನಿಮಾದ ಮೊದಲ ಭಾಗದ ಸಣ್ಣ ಟೀಸರ್ ಮಾತ್ರ. ಟೀಸರ್​ನಲ್ಲಿ ಸೈಫ್ ಅಲಿ ಖಾನ್ ಪಾತ್ರವನ್ನು ಒಳ್ಳೆಯ ಫೈಟರ್ ಆಗಿ, ಚಾಲಾಕಿಯಾಗಿ ಜೊತೆಗೆ ಕ್ರೂರಿಯಾಗಿಯೂ ತೋರಿಸಲಾಗಿದೆ. ‘ದೇವರ’ ಮುಖ್ಯ ಪಾತ್ರಕ್ಕೆ ಒಳ್ಳೆಯ ವಿಲನ್ ಆಗುವ ಎಲ್ಲ ಲಕ್ಷಣವೂ ಸೈಫ್ ಪಾತ್ರದಲ್ಲಿ ಎದ್ದು ತೋರುತ್ತಿದೆ.

‘ದೇವರ’ ಸಿನಿಮಾ ಸೆಪ್ಟೆಂಬರ್ 9 ರಂದು ದೇಶದಾದ್ಯಂತ ಒಟ್ಟಿಗೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ಜಾನ್ಹವಿ ಕಪೂರ್ ನಾಯಕಿ. ಬೇರೆ ಕೆಲವು ನಟಿಯರು ಸಹ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಎನ್​ಟಿಆರ್ ಸಹೋದರ ಬಂಡವಾಳ ಹೂಡಿದ್ದು, ಜೂ ಎನ್​ಟಿಆರ್ ಸಹ ನಿರ್ಮಾಣ ಮಾಡಿದ್ದಾರೆ. ಜೂ ಎನ್​ಟಿಆರ್ ಅಭಿಮಾನಿಗಳು ಈ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆ ಇರಿಸಿಕೊಂಡಿದ್ದಾರೆ. ‘ದೇವರ’ ಜೊತೆಗೆ ಹಿಂದಿಯ ‘ವಾರ್ 2’ ಸಿನಿಮಾದಲ್ಲಿ ಜೂ ಎನ್​ಟಿಆರ್ ನಟಿಸುತ್ತಿದ್ದಾರೆ. ಜೊತೆಗೆ ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾದಲ್ಲಿಯೂ ಸಹ ಜೂ ಎನ್​ಟಿಆರ್ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು
ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ಇರಾನ್​ ಪರಿಸ್ಥಿತಿ ಹೇಗಿದೆ?ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್
ಇರಾನ್​ ಪರಿಸ್ಥಿತಿ ಹೇಗಿದೆ?ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
RV ರಸ್ತೆ-ಸಿಲ್ಕ್ ಬೋರ್ಡ್ ಡಬಲ್‌ ಡೆಕ್ಕರ್‌ ಫ್ಲೈಓವರ್​​​ಗೆ ಚಾಲನೆ
RV ರಸ್ತೆ-ಸಿಲ್ಕ್ ಬೋರ್ಡ್ ಡಬಲ್‌ ಡೆಕ್ಕರ್‌ ಫ್ಲೈಓವರ್​​​ಗೆ ಚಾಲನೆ
ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನ ನೈಜ ಚಿತ್ರಣ ಇಲ್ಲಿದೆ
ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನ ನೈಜ ಚಿತ್ರಣ ಇಲ್ಲಿದೆ
ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ
ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ
ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ
ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು
ಶಾಲಾ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿ
ಶಾಲಾ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿ