ಭರ್ಜರಿ ಟಿಆರ್​ಪಿ ಪಡೆದ ‘ಅಮೃತಧಾರೆ’ಗೆ ಎರಡನೇ ಸ್ಥಾನ; ಯಾವ ಧಾರಾವಾಹಿಗೆ ಎಷ್ಟನೇ ರ‍್ಯಾಂಕ್?

ಧಾರಾವಾಹಿಗಳ ಟಿಆರ್​ಪಿ ರೇಸ್​ನಲ್ಲಿ ‘ಪುಟ್ಟಕ್ಕನ ಮಕ್ಕಳು’ ಕಳೆದ ಒಂದು ವರ್ಷದಿಂದ ಬಹುತೇಕ ಸಂದರ್ಭಗಳಲ್ಲಿ ಮೊದಲ ಸ್ಥಾನ ಕಾಪಾಡಿಕೊಂಡು ಬರುತ್ತಾ ಇತ್ತು. ಪ್ರೈಮ್​ ಟೈಮ್​ನಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಾ ಇತ್ತು. ಕುಗ್ಗಿದ್ದ ಈ ಧಾರಾವಾಹಿಯ ಟಿಆರ್​ಪಿಯಲ್ಲಿ ಮತ್ತೆ ಏರಿಕೆ ಕಂಡಿದೆ.

ಭರ್ಜರಿ ಟಿಆರ್​ಪಿ ಪಡೆದ ‘ಅಮೃತಧಾರೆ’ಗೆ ಎರಡನೇ ಸ್ಥಾನ; ಯಾವ ಧಾರಾವಾಹಿಗೆ ಎಷ್ಟನೇ ರ‍್ಯಾಂಕ್?
ಭರ್ಜರಿ ಟಿಆರ್​ಪಿ ಪಡೆದ ‘ಅಮೃತಧಾರೆ’ಗೆ ಎರಡನೇ ಸ್ಥಾನ; ಯಾವ ಧಾರಾವಾಹಿಗೆ ಎಷ್ಟನೇ ರ‍್ಯಾಂಕ್?
Follow us
ರಾಜೇಶ್ ದುಗ್ಗುಮನೆ
|

Updated on: Sep 19, 2024 | 3:00 PM

ಕನ್ನಡ ಧಾರಾವಾಹಿಗಳ 37ನೇ ವಾರದ ಟಿಆರ್​ಪಿ ಹೊರ ಬಿದ್ದಿದೆ. ಪ್ರತಿವರವೂ ಧಾರಾವಾಹಿಗಳು ಬಹುತೇಕ ಒಂದೇ ರೀತಿಯ ಸ್ಥಾನದಲ್ಲಿ ಇರುತ್ತಿದ್ದವು. ಆದರೆ, ಈ ಬಾರಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಬೇರೆ ಬೇರೆ ಧಾರಾವಾಹಿಗಳು ಟಾಪ್ ಐದರಲ್ಲಿ ಸ್ಥಾನ ಪಡೆದಿವೆ. ಈ ಪೈಕಿ ‘ಅಮೃತಧಾರೆ’ ಧಾರಾವಾಹಿ ಎರಡನೇ ಸ್ಥಾನ ಪಡೆದು ಅಚ್ಚರಿ ಮೂಡಿಸಿದೆ. ಹೊಸ ಧಾರಾವಾಹಿಗಳು ಪಾತಾಳ ಕಾಣುತ್ತಿವೆ. ಧಾರಾವಾಹಿಗಳ ಟಿಆರ್​ಪಿ ಬಗ್ಗೆ ಇಲ್ಲಿದೆ ಮಾಹಿತಿ.

‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಒಳ್ಳೆಯ ಟಿಆರ್​ಪಿ ಪಡೆದು ಸಾಗುತ್ತಿದೆ. ಕಳೆದ ಕೆಲ ವಾರಗಳಿಂದ ಧಾರಾವಾಹಿ ಮೆಚ್ಚುಗೆ ಪಡೆದು ಮೊದಲ ಸ್ಥಾನ ಕಾಪಾಡಿಕೊಂಡು ಬರುತ್ತಿದೆ. ಎರಡನೇ ಸ್ಥಾನದಲ್ಲಿ ಈ ಬಾರಿ ‘ಅಮೃತಧಾರೆ’ ಧಾರಾವಾಹಿ ಇದೆ. ಕಳೆದ ವಾರಗಳಿಗಿಂತ ಈ ವಾರ ಧಾರಾವಾಹಿ ಉಚ್ಛ ಸ್ಥಾನವನ್ನು ಪಡೆದುಕೊಂಡಿದೆ. ಈ ಎರಡೂ ಧಾರಾವಾಹಿಗಳು ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿವೆ.

ಮೂರನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಈ ಧಾರಾವಾಹಿ ಹಾಗೂ ‘ಅಮೃತಧಾರೆ’ ಧಾರಾವಾಹಿ ಮಧ್ಯೆ ಭರ್ಜರಿ ಸ್ಪರ್ಧೆ ಏರ್ಪಟ್ಟಿದೆ. ಕೂದಲೆಳೆ ಅಂತರದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಗೆ ಎರಡನೇ ಸ್ಥಾನ ಮಿಸ್ ಆಗಿದೆ. ಅಚ್ಚರಿ ಎಂಬಂತೆ ನಾಲ್ಕನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ಸ್ಥಾನ ದೊರೆತಿದೆ. ಈ ಧಾರಾವಾಹಿಯ ಸಮಯವನ್ನು ಬದಲಾವಣೆ ಮಾಡಲಾಗಿದ್ದು, 6.30ಕ್ಕೆ ಪ್ರಸಾರ ಕಾಣುತ್ತಿದೆ. ಇದರಿಂದ ಟಿಆರ್​ಪಿಯಲ್ಲಿ ಇಳಿಕೆ ಕಂಡಿತ್ತು. ಈಗ ಧಾರಾವಾಗಿ ಮತ್ತೆ ಕಂಬ್ಯಾಕ್ ಮಾಡಿದೆ. ಕಳೆದ ವಾರ ಈ ಧಾರಾವಾಹಿ ಟಾಪ್ ಐದರಲ್ಲೂ ಇರಲಿಲ್ಲ.

ಇದನ್ನೂ ಓದಿ: ಒಂದೇ ಧಾರಾವಾಹಿಯಲ್ಲಿ ನಟಿಸಿದ ಈ ನಟಿಯರು ಈಗ ಒಟ್ಟಿಗೆ ಪ್ರೆಗ್ನೆಂಟ್; ಸುಂದರ ಫೋಟೋಶೂಟ್ ವೈರಲ್

ಐದನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ’ ಹಾಗೂ ‘ರಾಮಾಚಾರಿ’ ಧಾರಾವಾಹಿಗಳು ಸ್ಥಾನ ಪಡೆದಿವೆ. ಎರಡೂ ಧಾರಾವಾಹಿಗೆ ಸಮಾನ ಟಿಆರ್​ಪಿ ಸಿಕ್ಕಿದೆ. ‘ಅಣ್ಣಯ್ಯ’ ಧಾರಾವಾಹಿ ಇತ್ತೀಚೆಗಷ್ಟೇ ಪ್ರಸಾರ ಆರಂಭಿಸಿದೆ. ಈ ಸೀರಿಯಲ್​ಗೆ ಊದಮ ಆರನೇ ಸ್ಥಾನದಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಇದೆ. ಕಲರ್ಸ್ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ. ‘ಸೀತಾ ರಾಮ’ ಧಾರಾವಾಹಿಯಲ್ಲಿ ಹಲವು ಟ್ವಿಸ್ಟ್​ಗಳನ್ನು ನೀಡುತ್ತಿರುವ ಹೊರತಾಗಿಯೂ ಈ ಧಾರಾವಾಹಿ ಏಳನೇ ಸ್ಥಾನ ಪಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.