ಶಂಕರ್ ನಾಗ್​ ಸಾವಿನ ಮುನ್ಸೂಚನೆ ನೀಡಿದ್ದ ಆ ವ್ಯಕ್ತಿ; ಹೇಳಿದ ದಿನವೇ ಸಂಭವಿಸಿತ್ತು ಸಾವು

ಶಂಕರ್ ನಾಗ್ ಅವರ ಅಕಾಲಿಕ ಮರಣವು ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿತ್ತು. ಅವರ ತಾಯಿಗೆ ಮುಂಚಿತವಾಗಿ ಈ ಬಗ್ಗೆ ತಿಳಿದಿತ್ತೆಂದು ಹೇಳಲಾಗುತ್ತದೆ. 1988ರಲ್ಲಿ ಮಾತಾಜಿ ಕೃಷ್ಣಾಭಾಯಿ ಅವರು ಒಂದು ಮುನ್ಸೂಚನೆಯನ್ನು ನೀಡಿದ್ದರು, ಅದು 1990ರಲ್ಲಿ ಶಂಕರ್ ನಾಗ್ ಅವರ ಕಾರು ಅಪಘಾತದಲ್ಲಿ ಮರಣವನ್ನು ಸೂಚಿಸಿತು.

ಶಂಕರ್ ನಾಗ್​ ಸಾವಿನ ಮುನ್ಸೂಚನೆ ನೀಡಿದ್ದ ಆ ವ್ಯಕ್ತಿ; ಹೇಳಿದ ದಿನವೇ ಸಂಭವಿಸಿತ್ತು ಸಾವು
ಶಂಕರ್ ನಾಗ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on:Nov 09, 2024 | 3:51 PM

ಶಂಕರ್ ನಾಗ್ ಅವರು ಖ್ಯಾತ ಹೀರೋ ಆಗಿದ್ದರು, ನಿರ್ದೇಶಕರೂ ಕೂಡ ಆಗಿದ್ದರು. ಅವರು ಇಲ್ಲ ಎಂಬ ನೋವು ಅಭಿಮಾನಿಗಳನ್ನು ಈಗಲೂ ಕಾಡುತ್ತಿದೆ. ಶಂಕರ್ ನಾಗ್ ಅವರು ಸಣ್ಣ ವಯಸ್ಸಿನಲ್ಲೇ ನಿಧನರಾದರು. ಅವರು ನಿಧನರಾಗುವುದಕ್ಕೂ ಕೆಲವೇ ವರ್ಷ ಹಿಂದಷ್ಟೇ ಅಂದರೆ 1987ರಲ್ಲಿ ಅವರ ತಂದೆ ಸದಾನಂದ ಅವರು ನಿಧನ ಹೊಂದಿದ್ದರು. ಒಂದೊಮ್ಮೆ ಸದಾನಂದ ಅವರು ಬದುಕಿದ್ದರೆ  ಶಂಕರ್ ಸಾವಿನಿಂದ ನಿಜಕ್ಕೂ ಶಾಕ್​ ಆಗುತ್ತಿದ್ದರು ಎಂಬುದು ಅನಂತ್ ನಾಗ್ ಅವರ ಅಭಿಪ್ರಾಯ. ಮತ್ತೊಂದು ಶಾಕಿಂಗ್ ಸಂಗತಿ ಎಂದರೆ ಶಂಕರ್ ನಾಗ್ ಅವರ ನಿಧನ ಹೊಂದುವ ವಿಚಾರ ತಾಯಿಗೆ ಮೊದಲೇ ಗೊತ್ತಿತ್ತಂತೆ. ಈ ಬಗ್ಗೆ ಓರ್ವ ವ್ಯಕ್ತಿ ತಾಯಿಗೆ ಸೂಚನೆ ನೀಡಿದ್ದರು.

ಶಂಕರ್ ನಾಗ್ ಅವರಿಗೆ ಇಂದು (ನವೆಂಬರ್ 9) ಜನ್ಮದಿನ. ಅವರು ಸದಾನಂದ ಹಾಗೂ ಆನಂದಿ ಅವರ ಮಗ. ಆನಂದಿ ಅವರು ಮಾತಾಜಿ ಕೃಷ್ಣಾಭಾಯಿ ಅವರ ಆಶ್ರಯದಲ್ಲಿ ಬೆಳೆದಿದ್ದರು. ಸದಾನಂದ ಅವರಿಗೂ ಆಶ್ರಮದ ಜೊತೆ ಒಡನಾಟ ಇತ್ತು. ಒಂದು ದಿನ ಮಾತಾಜಿ ಅವರು ಆನಂದಿಯನ್ನು ಕರೆದು ರಾಮನಾಮ ಜಪ ಮಾಡು, ಪ್ರಸಾದ ಹಂಚೋಕೆ ಆರಂಭಿಸು ಎಂದು ಸೂಚಿಸಿದ್ದರು. ಏತಕ್ಕೆ ಎಂದು ಕೇಳಿದ್ದಕ್ಕೆ ಮಾತಾಜಿ ಅವರು ಏನನ್ನೂ ಹೇಳಲೇ ಇಲ್ಲ. 1988ರ ವಿಜಯ ದಶಮಿಯಂದು ಮಾತಾಜಿ ಅವರು ಈ ಮಾತನ್ನು ಹೇಳಿದ್ದರು. ಸರಿಯಾಗಿ ಎರಡು ವರ್ಷಗಳ ಬಳಿಕ ಏನೋ ಸಂಭವಿಸುತ್ತದೆ ಅದಕ್ಕೆ ಸಿದ್ಧರಾಗಿ ಎಂದಿದ್ದರು.

1990ರಲ್ಲಿ ವಿಜಯದಶಮಿ ದಿನವೇ ಶಂಕರ್​ನಾಗ್ ನಿಧನ ಹೊಂದಿದರು. ಶಂಕರ್ ನಾಗ್ ಅಪಘಾತದ ನಂತರ ಅನಂತ್ ನಾಗ್ ಅವರು ತಾಯಿಗೆ ಕರೆ ಮಾಡಿದರು. ಏನೋ ನಡೆದಿದೆ ಎಂದು ಅವರು ಹೇಳಿದ್ದರು. ‘ನನಗೂ ಫೋನ್ ಬಂತು. ಶಂಕರ್ ನಾಗ್ ಸತ್ತು ಹೋದ. ಮಾತಾಜಿ ಅವರು ಎರಡು ವರ್ಷದ ಹಿಂದೆಯೇ ಇದನ್ನು ಹೇಳಿದ್ದರು. ಆದರೆ ನನಗೆ ಮರೆವು. ನಾನು ಮರೆತುಬಿಟ್ಟಿದ್ದೆ’ ಎಂದು ಆನಂದಿ ಅವರು ಅನಂತ್ ನಾಗ್​ಗೆ ಹೇಳಿದ್ದರು.

ಇದನ್ನೂ ಓದಿ: ಸಾಂಗ್ ರೀ-ರೆಕಾರ್ಡಿಂಗ್​ಗೆ ಮದ್ರಾಸ್​​ಗೆ ಹೋಗುವುದನ್ನು ತಪ್ಪಿಸಿದ್ದ ಶಂಕರ್​ ನಾಗ್

ಮಾತಾಜಿ ಅವರು ಕೊಟ್ಟ ಮುನ್ಸೂಚನೆ ಸರಿ ಆಗಿತ್ತು. ಯಾರಿಗೋ ಏನೋ ಆಗುತ್ತದೆ ಎಂಬ ವಿಚಾರವನ್ನು ಪಕ್ಕಾ ಹೇಳಿದ್ದರು. ಆ ರೀತಿಯೇ ನಡೆದು ಹೋಗಿತ್ತು. ಒಂದೊಮ್ಮೆ ಎಚ್ಚರಿಕೆ ವಹಿಸಿದ್ದರೆ ಶಂಕರ್ ನಾಗ್ ಅವರು ಬುದಕುತ್ತಿದ್ದರೇನೋ. 1990ರ ಸೆಪ್ಟೆಂಬರ್ 30ರಂದು ಶಂಕರ್ ನಾಗ್ ಅವರು ಕಾರು ಅಪಘಾತದಲ್ಲಿ ಮೃತಪಟ್ಟರು. ದಾವಣಗೆರೆ ಸಮೀಪ ರಸ್ತೆ ಅಪಘಾತ ನಡೆದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:48 am, Sat, 9 November 24