ಯಶ್ ಸಿನಿಮಾಕ್ಕಾಗಿ ಹಾಲಿವುಡ್​ನಿಂದ ಬಂದ ಜೆಜೆ ಪೆರ್ರಿ

Yash: ಯಶ್ ನಟಿಸುತ್ತಿರುವ ‘ಟಾಕ್ಸಿಕ್’ ಸಿನಿಮಾದಲ್ಲಿ ಭಾರತದ ಸ್ಟಾರ್ ನಟ-ನಟಿಯರು ಮಾತ್ರವೇ ಅಲ್ಲದೆ, ವಿದೇಶದ ಕೆಲವು ನಟರು ಸಹ ನಟಿಸುತ್ತಿದ್ದಾರೆ. ನಟರು ಮಾತ್ರವೇ ಅಲ್ಲದೆ ಹಾಲಿವುಡ್​ನ ಕೆಲ ಖ್ಯಾತ ತಂತ್ರಜ್ಞರನ್ನು ಸಹ ಸಿನಿಮಾಕ್ಕೆ ಭಾರತಕ್ಕೆ ಕರೆಸಿಕೊಳ್ಳಲಾಗಿದೆ.

ಯಶ್ ಸಿನಿಮಾಕ್ಕಾಗಿ ಹಾಲಿವುಡ್​ನಿಂದ ಬಂದ ಜೆಜೆ ಪೆರ್ರಿ
Follow us
ಮಂಜುನಾಥ ಸಿ.
|

Updated on: Nov 09, 2024 | 5:15 PM

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾವನ್ನು ಭಾರಿ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಭಾರತದ ಸ್ಟಾರ್ ಕಲಾವಿದರ ಜೊತೆಗೆ ವಿದೇಶಗಳ ನಟರೂ ಸಹ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ನಟರು ಮಾತ್ರವೇ ಅಲ್ಲದೆ ವಿದೇಶದ ಅತ್ಯುತ್ತಮ ತಂತ್ರಜ್ಞರು ಸಹ ‘ಟಾಕ್ಸಿಕ್’ ಸಿನಿಮಾಕ್ಕೆ ಬಳಸಿಕೊಳ್ಳಲಾಗುತ್ತಿದೆ. ಸಿನಿಮಾದ ವಿಎಫ್​ಎಕ್ಸ್, ಗ್ರಾಫಿಕ್ಸ್, ಮಿನಿಯೇಚರ್ ನಿರ್ಮಾಣ ಇನ್ನಿತರೆಗಳಿಗೆ ಹಾಲಿವುಡ್​ನ ಜನಪ್ರಿಯ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗ ಹಾಲಿವುಡ್​ನ ಟಾಪ್ ತಂತ್ರಜ್ಞರೊಬ್ಬರು ‘ಟಾಕ್ಸಿಕ್’ ಸಿನಿಮಾಕ್ಕಾಗಿ ಮುಂಬೈಗೆ ಬಂದಿದ್ದಾರೆ.

ಹಾಲಿವುಡ್​ನ ಬ್ಲಾಕ್ ಬಸ್ಟರ್ ಸಿನಿಮಾಗಳಾದ ‘ಐರನ್ ಮ್ಯಾನ್’, ‘ಎಕ್ಸ್ ಮ್ಯಾನ್’, ‘ಜಾನ್ ವಿಕ್ 2’ ಇನ್ನೂ ಹಲವಾರು ಕ್ಲಾಸಿಕ್ ಆಕ್ಷನ್ ಸಿನಿಮಾಗಳಿಗೆ ಕೆಲಸ ಮಾಡಿರುವ ಜನಪ್ರಿಯ ಆಕ್ಷನ್ ನಿರ್ದೇಶಕ ಜೆಜೆ ಪೆರ್ರಿ ಇದೀಗ ಮುಂಬೈಗೆ ಬಂದಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ಆಕ್ಷನ್ ದೃಶ್ಯವನ್ನು ನಿರ್ದೇಶನ ಮಾಡಲಿರುವ ಜೆಜೆ ಪೆರ್ರಿ ಇದಕ್ಕಾಗಿ ತುಸು ಮುಂಚಿತವಾಗಿಯೇ ಮುಂಬೈಗೆ ಆಗಮಿಸಿದ್ದಾರೆ.

ಯಶ್ ನಟಿಸುತ್ತಿರುವ ‘ಟಾಕ್ಸಿಕ್’ ಸಿನಿಮಾ ಹಲವು ದಿನಗಳ ಕಾಲ ಬೆಂಗಳೂರಿನ ಎಚ್​ಎಂಟಿಯಲ್ಲಿ ಸೆಟ್​ ನಿರ್ಮಾಣ ಮಾಡಿ ಶೂಟಿಂಗ್ ಮಾಡಿದೆ. ಕೆಲ ದಿನಗಳ ಹಿಂದೆಯಷ್ಟೆ ಚಿತ್ರತಂಡ ಮುಂಬೈಗೆ ಸ್ಥಳಾಂತರಗೊಂಡಿದ್ದು, ಮುಂಬೈನಲ್ಲಿ ವಿಶೇಷ ಸೆಟ್ ನಿರ್ಮಾಣ ಮಾಡಿ ಚಿತ್ರೀಕರಣ ಮಾಡುತ್ತಿದೆ. ಇಲ್ಲಿ ಸತತ 60 ದಿನಗಳ ಚಿತ್ರೀಕರಣ ನಡೆಯಲಿದೆ ಎನ್ನಲಾಗುತ್ತಿದೆ. 60 ದಿನಗಳ ಚಿತ್ರೀಕರಣದಲ್ಲಿ ಆಕ್ಷನ್ ದೃಶ್ಯಗಳ ಚಿತ್ರೀಕರಣವೂ ಸಹ ನಡೆಯಲಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾದಿಂದ ಮರ ಕಡಿದ ಆರೋಪ; ಮೊದಲ ಬಾರಿಗೆ ಸ್ಪಷ್ಟನೆ ಕೊಟ್ಟ ಎಚ್​​ಎಂಟಿ

ಜೆಜೆ ಪೆರ್ರಿ, ಭಿನ್ನವಾದ ಆಕ್ಷನ್ ದೃಶ್ಯಗಳನ್ನು ‘ಟಾಕ್ಸಿಕ್’ ಸಿನಿಮಾಕ್ಕಾಗಿ ನಿರ್ಮಾಣ ಮಾಡಲಿದ್ದಾರೆ. ಹ್ಯಾಂಡ್ ಟು ಹ್ಯಾಂಡ್ ಕಾಂಬ್ಯಾಟ್, ಗನ್ ಫೈಟ್ ಮತ್ತು ಕೆಲ ಆಕ್ಷನ್ ದೃಶ್ಯಗಳು ‘ಟಾಕ್ಸಿಕ್’ ಸಿನಿಮಾದಲ್ಲಿ ಇರಲಿವೆ. ಪ್ರತಿಯೊಂದು ಆಕ್ಷನ್ ದೃಶ್ಯವನ್ನು ಭಿನ್ನವಾಗಿ ಕಂಪೋಸ್ ಮಾಡಲಾಗುತ್ತಿದೆ. ಜೆಜೆ ಪೆರ್ರಿ ಈಗಾಗಲೇ ಆಕ್ಷನ್ ಸೆಟ್​ಪೀಸ್​ನ ಟ್ರಯಲ್ ವಿಡಿಯೋ ತಯಾರಿಸಿದ್ದು, ಅದನ್ನು ಯಶ್, ನಿರ್ದೇಶಕಿ ಗೀತು ಮೋಹನ್​ದಾಸ್ ನೋಡಿ ಒಪ್ಪಿಗೆ ನೀಡಿದ ಬಳಿಕವೇ ಈಗ ಜೆಜೆ ಪೆರ್ರಿ ಭಾರತಕ್ಕೆ ಬಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ