AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಂಕರ್‌ನಾಗ್‌ ಜನ್ಮದಿನವನ್ನು ‘ಚಾಲಕರ ದಿನ’ವಾಗಿ ಘೋಷಿಸಲು ಮನವಿ

Shankar Nag: ಶಂಕರ್ ನಾಗ್ ಹುಟ್ಟುಹಬ್ಬ ಇಂದು, ಈ ದಿನ ಬೆಂಗಳೂರಿನ ಆಟೋ ಡ್ರೈವರ್​ಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಶಂಕರ್ ನಾಗ್ ಹುಟ್ಟುಹಬ್ಬವನ್ನು ‘ಚಾಲಕರ ದಿನ’ವನ್ನಾಗಿ ಘೋಷಿಸಿರೆಂದು ಮನವಿ ಮಾಡಿದರು.

ಶಂಕರ್‌ನಾಗ್‌ ಜನ್ಮದಿನವನ್ನು ‘ಚಾಲಕರ ದಿನ’ವಾಗಿ ಘೋಷಿಸಲು ಮನವಿ
ಮಂಜುನಾಥ ಸಿ.
|

Updated on:Nov 09, 2024 | 9:38 PM

Share

ಕನ್ನಡ ಚಿತ್ರರಂಗದ ಮೇರುನಟ ಶಂಕರ್ ನಾಗ್ ಜಯಂತಿ ಇಂದು. ಶಂಕರ್ ನಾಗ್ ಅಗಲಿ ಇಷ್ಟವಾದರೂ ಅವರನ್ನು ಜೀವಂತ ಇಟ್ಟಿರುವವರೆಂದರೆ ಅದು ಆಟೋ ಡ್ರೈವರ್​ಗಳು. ಬೆಂಗಳೂರಿನ ರಸ್ತೆಗಳಲ್ಲಿ ಕಾಣಿಸುವ ಬಹುತೇಕ ಆಟೊಗಳ ಮೇಲೆ ಶಂಕರ್ ನಾಗ್ ಫೋಟೊ ಕಂಡೇ ಕಾಣುತ್ತದೆ. ಆಟೋ ಡ್ರೈವರ್​ಗಳಿಗೂ ಶಂಕರ್ ನಾಗ್ ಅವರಿಗೂ ಅವಿನಾಭಾವ ಸಂಬಂಧ. ಇದೀಗ ಆಟೋ ಡ್ರೈವರ್​ಗಳು, ಶಂಕರ್ ನಾಗ್ ಹುಟ್ಟುಹಬ್ಬವಾದ ನವೆಂಬರ್ 09 ನ್ನು ‘ಚಾಲಕರ ದಿನ’ವನ್ನಾಗಿ ಘೋಷಿಸುವಂತೆ ಸರ್ಕಾರವನ್ನು ಆಟೋ ಡ್ರೈವರ್​ಗಳು ಮನವಿ ಮಾಡಿದ್ದಾರೆ. ಆಟೋ ಚಾಲಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಸಚಿವರು.

ಪೀಸ್‌ಆಟೋ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಯೂನಿಯನ್, ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನ ಚಾಲಕರ ಯೂನಿಯನ್, ಜೈ ಭಾರತ ವಾಹನ ಚಾಲಕರ ಸಂಘ, ನೊಂದ ಚಾಲಕರ ವೇದಿಕೆ ಸಹಯೋಗದೊಂದಿಗೆ ಶನಿವಾರ ಜಯನಗರದ ಶಾಲಿನಿ ಮೈದಾನದಲ್ಲಿ ಆಯೋಜಿಸಿದ್ದ ಮೇರುನಟ, ದಿವಂಗತ ಶಂಕರ್‌ನಾಗ್ ಅವರ ಜನ್ಮದಿನದ ಪ್ರಯುಕ್ತ 11ನೇ ವರ್ಷದ ‘ಚಾಲಕರ ದಿನವನ್ನು’ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ‘ಬೆಂಗಳೂರಿನಲ್ಲೇ 3 ಲಕ್ಷಕ್ಕೂ ಅಧಿಕ ಆಟೋ ಸಂಚರಿಸುತ್ತಿದ್ದು, ಆಟೋ ಚಾಲಕರಿಲ್ಲದೇ ಬೆಂಗಳೂರು ಇಲ್ಲ. ಬೆಂಗಳೂರಿನಲ್ಲಿ ಆಟೋ ಚಾಲಕರ ಸೇವೆ ಶ್ಲಾಘನೀಯ. ಶಂಕರ್‌ನಾಗ್‌ ಅವರು ಇಂದಿಗೂ ಸಹ ಆಟೋ ಚಾಲಕರಿಗೆ ಅತ್ಯಂತ ಪ್ರಿಯವಾದ, ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾರೆ ಇವರ ಆದರ್ಶದಂತೆ ಇನ್ನಷ್ಟು ಉತ್ತಮ ಸೇವೆಯನ್ನು ಚಾಲಕರು ನೀಡಲಿ ಎಂದು ಆಶಿಸಿದರು. ಪೀಸ್‌ ಆಟೋ ವತಿಯಿಂದ ಪ್ರತಿವರ್ಷ ಶಂಕರ್‌ನಾಗ್‌ ಅವರ ಜನ್ಮದಿನದಂದು ಚಾಲಕರ ದಿನವನ್ನಾಗಿ ಆಚರಿಸುತ್ತಾ, ಆಟೋಚಾಲಕರಿಗೆ ಹಲವು ಸಹಾಯ ಮಾಡುತ್ತಾ ಬಂದಿದ್ದಾರೆ, ಒಬ್ಬರಿಗೆ ಉಚಿತ ಆಟೋ ನೀಡುತ್ತಿದ್ದರು, ಈ ಬಾರಿ ಎರಡು ಆಟೋ ಉಚಿತವಾಗಿ ನೀಡಿದ್ದಾರೆ. ಪ್ರತಿಯೊಬ್ಬ ಆಟೋ ಚಾಲಕರು ಉತ್ತಮ ನಡವಳಿಕೆಯಿಂದ ಗಮನ ಸೆಳೆಯಬೇಕು’ ಎಂದರು.

ಇದನ್ನೂ ಓದಿ:ಶಂಕರ್ ನಾಗ್​ ಸಾವಿನ ಮುನ್ಸೂಚನೆ ನೀಡಿದ್ದ ಆ ವ್ಯಕ್ತಿ; ಹೇಳಿದ ದಿನವೇ ಸಂಭವಿಸಿತ್ತು ಸಾವು

ಮನವಿ ಸಲ್ಲಿಕೆ

ಚಾಲಕರ ಸ್ಪೂರ್ತಿಯ ಚಿಲುಮೆ ಮೇರುನಟ ದಿವಂಗತ ಶಂಕರ್‌ನಾಗ್‌ ಅವರ ಜನ್ಮದಿನವನ್ನು “ಚಾಲಕರ ದಿನ”ವನ್ನಾಗಿ ಸರ್ಕಾರ ಅಧಿಕೃತವಾಗಿ ಆಚರಿಸಬೇಕು ಎಂದು ಪೀಸ್‌ ಆಟೋ ಸೇರಿದಂತೆ ವಿವಿಧ ಚಾಲಕರ ಸಂಘಟನೆಯು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಶಂಕರ್‌ನಾಗ್‌ ಅವರೊಂದಿಗೆ ಎಲ್ಲಾ ಚಾಲಕರು ಅವಿನಾಭಾವ ನಂಟು ಹೊಂದಿದ್ದಾರೆ. ಅವರ ದಿನವನ್ನು ರಾಜ್ಯ ಸರ್ಕಾರ ಆಚರಿಸಬೇಕು ಎಂದು ಉಲ್ಲೇಖಿಸಲಾಗಿದೆ.

ಸ್ವಂತ ಆಟೋ ಖರೀದಿಗೆ ಮಹಿಳೆಯರಿಗೆ ನೆರವು

ಪೀಸ್ ಆಟೋ ಸಂಘಟನೆ ವತಿಯಿಂದ 3೦೦ ಮಹಿಳೆಯರಿಗೆ ಆಟೋ ಚಾಲನೆಯ ತರಬೇತಿ ನೀಡಿದ್ದು, ಈ ಮಹಿಳೆಯರು ಸ್ವತಃ ಆಟೋ ಖರೀದಿಗೆ ಹಣಕಾಸಿನ ನೆರವು ಸಹ ಇದೇ ವೇಳೆ ನೀಡಲಾಯಿತು. ಎಕ್ಸ್‌ಪೊನೆಂಟ್‌ ಕಂಪನಿಯ 15 ನಿಮಿಷದಲ್ಲೇ ಚಾರ್ಜ್‌ ಆಗುವ ಚಾರ್ಜರ್ ಬಿಡುಗಡೆ ಮಾಡಲಾಯ್ತು. ಹಾಗೂ ಚಾಲನಾ ವೃತ್ತಿಯಲ್ಲಿ ಮಾನವೀಯತೆ ಹಾಗೂ ಪ್ರಾಮಾಣಿಕತೆ ಮೆರೆದ ಆಯ್ದ ಚಾಲಕರಿಗೆ ಚಿನ್ನದ ಪದಕ ನೀಡಿ ಅವರನ್ನು ಗೌರವಿಸಲಾಯಿತು. ಬಡ ಚಾಲಕರ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸುಮಾರು ಹಲವು ಆಟೋ, ಟ್ಯಾಕ್ಸಿ, ಗೂಡ್ಸ್‌ ವಾಹನ, ಶಾಲಾ ವಾಹನದ ಚಾಲಕರು ಪಾಲ್ಗೊಂಡಿದ್ದರು. ಇದರಲ್ಲಿ ಸುಮಾರು 100 ಮಹಿಳಾ ಚಾಲಕಿಯರು ಸೇರಿದ್ದು ವಿಶೇಷ. ನಟ ಶ್ರೀ ಮುರುಳಿ, ನಟ ಗರುಡ ರಾಮ್‌, ಪೀಸ್-ಆಟೋ ಅಧ್ಯಕ್ಷರು ರಘು ನಾರಾಯಣ ಗೌಡ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಯೂನಿಯನ್ ಅಧ್ಯಕ್ಷರು ಮಂಜುನಾಥ್‌, ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನ ಚಾಲಕರ ಯೂನಿಯನ್ ಅಧ್ಯಕ್ಷರು ಜಿ. ರವಿ ಕುಮಾರ್‌ , ಜೈ ಭಾರತ ವಾಹನ ಚಾಲಕರ ಸಂಘದ ಅಧ್ಯಕ್ಷರು ಚಂದ್ರ ಕುಮಾರ್‌, ನೊಂದ ಚಾಲಕರ ವೇದಿಕೆ ರಾಜು, ಜೈ ಕರ್ನಾಟಕ ಅಧ್ಯಕ್ಷರು ಆನಂದ್‌, ಕಾರ್ಯಕ್ರಮದ ಉಸ್ತುವಾರಿ ರಾಘವೇಂದ್ರ ಪೂಜಾರಿ ಸೇರಿದಂತೆ ಹಲವು ಪಾಲ್ಗೊಂಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:35 pm, Sat, 9 November 24

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ