ಸಾಂಗ್ ರೀ-ರೆಕಾರ್ಡಿಂಗ್​ಗೆ ಮದ್ರಾಸ್​​ಗೆ ಹೋಗುವುದನ್ನು ತಪ್ಪಿಸಿದ್ದ ಶಂಕರ್​ ನಾಗ್

ಇಂದು (ನವೆಂಬರ್ 9) ಶಂಕರ್ ನಾಗ್ ಅವರ 70ನೇ ಜನ್ಮದಿನ. ಕನ್ನಡ ಚಿತ್ರರಂಗಕ್ಕೆ ಅವರ ಅಪಾರ ಕೊಡುಗೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಸಂಗೀತ ರೀ-ರೆಕಾರ್ಡಿಂಗ್ ಸ್ಟುಡಿಯೋ ಸ್ಥಾಪಿಸಿ ಕನ್ನಡ ಚಿತ್ರರಂಗದಲ್ಲಿ ಕ್ರಾಂತಿ ಮಾಡಿದವರು. ಮೆಟ್ರೋ ಮತ್ತು ನಂದಿ ಬೆಟ್ಟದ ರೋಪ್ ವೇಯಂತಹ ಅನೇಕ ದೂರದೃಷ್ಟಿಯ ಕನಸುಗಳನ್ನು ಕಂಡಿದ್ದರು.

ಸಾಂಗ್ ರೀ-ರೆಕಾರ್ಡಿಂಗ್​ಗೆ ಮದ್ರಾಸ್​​ಗೆ ಹೋಗುವುದನ್ನು ತಪ್ಪಿಸಿದ್ದ ಶಂಕರ್​ ನಾಗ್
ಶಂಕರ್ ನಾಗ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Nov 09, 2024 | 7:35 AM

ಶಂಕರ್ ನಾಗ್ ಅವರಿಗೆ ಇಂದು (ನವೆಂಬರ್ 9) ಜನ್ಮದಿನ. ಅವರು ಬದುಕಿದ್ದರೆ 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ, ಕೇವಲ 35ನೇ ವಯಸ್ಸಿಗೆ ಶಂಕರ್ ನಾಗ್ ಅವರು ನಿಧನ ಹೊಂದಿದರು. ಶಂಕರ್ ನಾಗ್ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಅವರು ಕನ್ನಡ ಚಿತ್ರರಂಗದಲ್ಲಿ ಹಲವು ಕ್ರಾಂತಿ ಮಾಡಿದ್ದರು. ಇದರಲ್ಲಿ ಸಾಂಗ್ ರೀರೆಕಾರ್ಡಿಂಗ್ ಸ್ಟುಡಿಯೋ ಮಾಡಿದ ಖ್ಯಾತಿಯೂ ಅವರಿಗೆ ಸಿಗುತ್ತದೆ ಎಂದರೆ ತಪ್ಪಾಗಲಾರದು. ಆ ಬಗ್ಗೆ ಇಲ್ಲಿದೆ ವಿವರ.

ಮೊದಲು ಸಿನಿಮಾಗಳ ಹಾಡಿನ ರೀರೆಕಾರ್ಡಿಂಗ್ ಕೆಲಸಗಳು ಮದ್ರಾಸ್​ ಅಂದರೆ ಈಗಿನ ಚೆನ್ನೈನಲ್ಲಿ ನಡೆಯುತ್ತಿತ್ತು. ಕನ್ನಡ ಸಿನಿಮಾದ ಶೂಟಿಂಗ್ ಎಲ್ಲೇ ಆದರೂ, ಅದರ ಹಾಡಿಸ ಕೆಲಸಗಳಿಗೆ ಚೆನ್ನೈ ಅಥವಾ ಮುಂಬೈಗೆ ತೆರಳಬೇಕಿತ್ತು. ಹೀಗಾಗಿ, ಸಿನಿಮಾ ಕೆಲಸಗಳ ಕೇಂದ್ರ ಬಿಂದುವು ಮದ್ರಾಸೇ ಆಗಿತ್ತು. ಈ ಬಗ್ಗೆ ಶಂಕರ್ ನಾಗ್​ಗೆ ಬೇಸರ ಇತ್ತು. ಸಿನಿಮಾ ನಿರ್ಮಾಣ ಮಾಡೋದು ಕನ್ನಡಿಗರು, ಸಿನಿಮಾ ನೋಡೋದು ಕನ್ನಡಿಗರು ಹೀಗಿರುವಾಗ ಅದರ ಕೆಲಸಗಳು ಏಕೆ ಚೆನ್ನೈನಲ್ಲಿ ನಡೆಯಬೇಕು ಎಂಬುದು ಅವರ ಪ್ರಶ್ನೆ ಆಗಿತ್ತು.

‘ಒಂದು ಮುತ್ತಿನ ಕಥೆ’ ಚಿತ್ರದ ಶೂಟಿಂಗ್ ವಿದೇಶದಲ್ಲಿ ನಡೆದಿತ್ತು. ರಾಜ್​ಕುಮಾರ್ ನಟನೆಯ ಈ ಚಿತ್ರವನ್ನು, ಶಂಕರ್ ನಾಗ್ ನಿರ್ದೇಶನ ಮಾಡಿದ್ದರು. ಈ ಚಿತ್ರದ ಹಾಡಿನ ರೆಕಾರ್ಡ್ ಬೆಂಗಳೂರಿನಲ್ಲೇ ನಡೆದಿತ್ತು ಅನ್ನೋದು ವಿಶೇಷ. ‘ಮೊದಲು ಹಾಡುಗಳ ರೆಕಾರ್ಡಿಂಗ್ ಮಾಡಬೇಕು ಎಂದರೆ ಮದ್ರಾಸ್ ಅಥವಾ ಮುಂಬೈಗೆ ಹೋಗಬೇಕಿತ್ತು. ಆ ವ್ಯವಸ್ಥೆ ಕರ್ನಾಟಕದಲ್ಲಿ ಇರಲಿಲ್ಲ. ಪ್ರರಿ ಬಾರಿ ರೆಕಾರ್ಡಿಂಗ್ ಮಾಡಬೇಕಾದರೆ ತಿಂಗಳು ಗಟ್ಟಲೆ ನಿಂತು ಕಾಯಬೇಕಿತ್ತು’ ಎಂದಿದ್ದರು ಶಂಕರ್ ನಾಗ್.

‘ಸಿನಿಮಾ ನಿರ್ಮಾಪಕರ ಈ ಸ್ಥಿತಿ ಕಂಡು ಬೇಸರ ಆಗಿತ್ತು. ಹೀಗಾಗಿ ನಮ್ಮದೇ ಸ್ಟುಡಿಯೋ ಬೇಕು ಎನಿಸಿತು. ಅನಂತ್ ನಾಗ್​, ರಮೇಶ್ ಭಟ್, ಸೂರ್ಯ ರಾವ್ ಅವರಿಂದ ಆರ್ಥಿಕ ಸಹಾಯ ಪಡೆದು ರೀ-ರೆಕಾರ್ಡಿಂಗ್ ಸ್ಟುಡಿಯೋ ಮಾಡಿದೆವು. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅದನ್ನು ಉದ್ಘಾಟನೆ ಮಾಡಿದರು. ನಮ್ಮಲ್ಲೂ ಎಲ್ಲಾ ಸೌಲಭ್ಯ ಇದೆ ಎಂಬುದರ ಸಂಕೇತವೇ ಈ ಸ್ಟುಡಿಯೋ’ ಎಂದಿದ್ದರು ಶಂಕರ್ ನಾಗ್.

ಇದನ್ನೂ ಓದಿ: ಅಪಘಾತದ ವೇಳೆ ನಿಜಕ್ಕೂ ಶಂಕರ್ ನಾಗ್ ಕಾರು ಚಲಾಯಿಸುತ್ತಿದ್ದರಾ?

ಶಂಕರ್ ನಾಗ್ ಅವರು ಅನೇಕ ಕನಸನ್ನು ಕಂಡಿದ್ದರು. ಬೆಂಗಳೂರಲ್ಲಿ ಮೆಟ್ರೋ ನಿರ್ಮಾಣ ಮಾಡಬೇಕು ಎಂದು ಅವರು ಕನಸು ಕಂಡಿದ್ದರು. ನಂದಿ ಬೆಟ್ಟದಲ್ಲಿ ರೋಪ್​ವೇ ಬರಬೇಕು ಎಂಬುದು ಅವರ ಆಸೆ ಆಗಿತ್ತು. ಅವರು ಮೃತಪಟ್ಟ ಹಲವು ವರ್ಷಗಳ ಬಳಿಕ ಬೆಂಗಳೂರಿಗೆ ಮೆಟ್ರೋ ಬಂತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:33 am, Sat, 9 November 24

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!