ಅಪಘಾತದ ವೇಳೆ ನಿಜಕ್ಕೂ ಶಂಕರ್ ನಾಗ್ ಕಾರು ಚಲಾಯಿಸುತ್ತಿದ್ದರಾ?
ದಾಸ್ ಹೇಳುವ ಪ್ರಕಾರ ಶಂಕರ್ನಾಗ್ ಅವರು ಕಾರು ಚಲಾಯಿಸುತ್ತಿರಲಿಲ್ಲವಂತೆ. ಅಪಘಾತ ನಡೆದ ದಿನ ಶಂಕರ್ ನಾಗ್ ಅವರ ಕಾರು ಚಾಲಕ ದಾಸ್ ಅವರು ಇರಲಿಲ್ಲ. ಲಿಂಗಣ್ಣ ಎಂಬುವವರು ಕಾರು ಚಲಾಯಿಸುತ್ತಿದ್ದರು. ಆದಿನ ದಾಸ್ ಅವರು ಬಾಗಲಕೋಟೆಯ ಲೋಕಾಪುರದಲ್ಲಿ ಇದ್ದರು.
ಶಂಕರ್ ನಾಗ್ ಅವರು ದಾವಣಗೆರೆ ಸಮೀಪದಲ್ಲಿ ಅಪಘಾತ ಹೊಂದಿದ್ದರು. ಈ ಘಟನೆಯು ನಡೆದಿರೋದು 1990ರ ಸೆಪ್ಟೆಂಬರ್ 30ರಂದು. ಅಂದರೆ ಅವರು ನಮ್ಮನ್ನು ಅಗಲಿ ಇಂದಿಗೆ ಬರೋಬ್ಬರಿ 34 ವರ್ಷಗಳು. ಒಂದೊಮ್ಮೆ ಶಂಕರ್ ನಾಗ್ ಈಗ ಇದ್ದಿದ್ದರೆ ಇನ್ನೂ ಹಲವು ಹಿಟ್ ಚಿತ್ರಗಳನ್ನು ನೀಡುತ್ತಿದ್ದರೇನೋ. ಆದರೆ, ಅವರೇ ತೆಗೆದುಕೊಂಡ ಒಂದು ನಿರ್ಧಾರದಿಂದ ಅವರು ನಿಧನ ಹೊಂದುವಂತೆ ಆಗಿತ್ತು. ಅಪಘಾತದ ದಿನ ಶಂಕರ್ ನಾಗ್ ಅವರೇ ಡ್ರೈವ್ ಮಾಡುತ್ತಿದ್ದರು ಎನ್ನವು ಮಾತು ಇತ್ತು. ಆದರೆ, ಅದು ಸುಳ್ಳು ಎಂಬುದನ್ನು ಅವರ ಕಾರು ಚಾಲಕ ದಾಸ್ ಅವರು ‘ಕಲಾ ಮಾಧ್ಯಮ’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ದಾಸ್ ಹೇಳುವ ಪ್ರಕಾರ ಶಂಕರ್ನಾಗ್ ಅವರು ಕಾರು ಚಲಾಯಿಸುತ್ತಿರಲಿಲ್ಲವಂತೆ. ಅಪಘಾತ ನಡೆದ ದಿನ ಶಂಕರ್ ನಾಗ್ ಅವರ ಕಾರು ಚಾಲಕ ದಾಸ್ ಅವರು ಇರಲಿಲ್ಲ. ಲಿಂಗಣ್ಣ ಎಂಬುವವರು ಕಾರು ಚಲಾಯಿಸುತ್ತಿದ್ದರು. ಆದಿನ ದಾಸ್ ಅವರು ಬಾಗಲಕೋಟೆಯ ಲೋಕಾಪುರದಲ್ಲಿ ಇದ್ದರು. ಅಪಘಾತದ ಸುದ್ದಿ ತಿಳಿದು ಅವರು ಬೆಂಗಳೂರಿಗೆ ಬಂದರು.
‘ಲಾರಿ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದಿತ್ತು. ಕಾರು ಸ್ಪೀಡ್ ಇತ್ತು. ಮೊದಲು ಡ್ರೈವರ್ಗೆ ಜಜ್ಜಿದೆ. ನಂತರ ಕಾರಿನ ಪೋಲ್ ಹೋಗಿ ಶಂಕರ್ನಾಗ್ಗೆ ಜಜ್ಜಿತ್ತು. ನಂತರ ಟಾಪ್ ಕಟ್ ಮಾಡಿ ಅವರನ್ನು ತೆಗೆಯಲಾಯಿತು. ಅರುಂಧತಿ ನಾಗ್ ಅವರ ಕಾಲಿಗೆ ಪೆಟ್ಟಾಗಿತ್ತು. ಮಗುಗೆ ಏನೂ ಆಗಿರಲಿಲ್ಲ’ ಎಂದಿದ್ದಾರೆ ದಾಸ್.
ಇದನ್ನೂ ಓದಿ: ಆ ದಿನ ಅನಂತ್ ನಾಗ್ ಮಾತನ್ನು ಕೇಳಿದ್ರೆ ಶಂಕರ್ ನಾಗ್ಗೆ ಅಪಘಾತ ಆಗುತ್ತಲೇ ಇರಲಿಲ್ಲ
‘ಡ್ರೈವರ್ ಸೀಟ್ನಲ್ಲಿ ಒಂದು ಶೂ ಇತ್ತು. ಆ ಶೂ ಶಂಕರ್ ನಾಗ್ ಅವರು ನನಗೆ ಕೊಟ್ಟಿದ್ದರು. ಅದು ಮುಂಬೈನಲ್ಲಿ ಶಂಕರ್ನಾಗ್ಗೆ ಕೊಟ್ಟ ಗಿಫ್ಟ್ ಆಗಿತ್ತು. ಅವರಿಗೆ ಟೈಟ್ ಆಗುತ್ತದೆ ಎಂದು ನನಗೆ ಕೊಟ್ಟರು. ನಾನು ಶೂ ಹಾಕುತ್ತಾ ಇರಲಿಲ್ಲ. ನನಗೆ ಶೂ ಆಗಲ್ಲ ಎಂದು ನಾನು ಅದನ್ನು ಲಿಂಗಣ್ಣಗೆ ಕೊಟ್ಟಿದ್ದೆ. ಒಂದೊಮ್ಮೆ ಲಿಂಗಣ್ಣ ಹಿಂದೆ ಕೂತಿದ್ದರೆ ಆ ಶೂ ಮುಂದೆ ಬರುತ್ತಿರಲಿಲ್ಲ. ಮಗು ಹಿಂದೆ ಕೂತಿತ್ತು. ಲಿಂಗಣ್ಣ ಹಾಗೂ ಮೇಡಂ (ಅರುಂಧತಿ ನಾಗ್) ಹಿಂದೆ ಕೂರೋಕೆ ಸಾಧ್ಯ ಇಲ್ಲ. ಶಂಕರ್ ನಾಗ್ ಡ್ರೈವರ್ ಮಾಡ್ತಾ ಇದ್ದಾರೆ ಅನ್ನೋದು ನಾನು ನಂಬಲ್ಲ’ ಎಂದಿದ್ದರು ದಾಸ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.