AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣ್ಣಾವ್ರು, ಪುನೀತ್​ಗೆ ಊಟ ಬಡಿಸುತ್ತಿರೋದು ಖ್ಯಾತ ರಾಜಕಾರಣಿ; ಯಾರೆಂದು ಗುರುತಿಸಿ

ರಾಜ್​ಕುಮಾರ್ ಹಾಗೂ ಪುನೀತ್ ಇಂದು ನಮ್ಮ ಜೊತೆ ಇಲ್ಲ. ಅವರು ಇಲ್ಲ ಎನ್ನುವ ನೋವು ಅಭಿಮಾನಿಗಳಿಗೆ ಎಂದಿಗೂ ಮಾಯ ಆಗುವಂಥದ್ದಲ್ಲ. ಅವರ ಹಳೆಯ ಫೋಟೋಗಳು ವೈರಲ್ ಆಗುತ್ತಾ ಇರುತ್ತವೆ. ಈಗ ಅವರ ಹಳೆಯ ಫೋಟೋ ಒಂದು ವೈರಲ್ ಆಗಿದೆ. ಇದಕ್ಕೆ ಮೆಚ್ಚುಗೆ ಸಿಕ್ಕಿದೆ.

ಅಣ್ಣಾವ್ರು, ಪುನೀತ್​ಗೆ ಊಟ ಬಡಿಸುತ್ತಿರೋದು ಖ್ಯಾತ ರಾಜಕಾರಣಿ; ಯಾರೆಂದು ಗುರುತಿಸಿ
ಅಣ್ಣಾವ್ರು, ಪುನೀತ್​ಗೆ ಊಟ ಬಡಿಸುತ್ತಿರೋದು ಖ್ಯಾತ ರಾಜಕಾರಣಿ; ಯಾರೆಂದು ಗುರುತಿಸಿ
ರಾಜೇಶ್ ದುಗ್ಗುಮನೆ
|

Updated on: Sep 30, 2024 | 11:02 AM

Share

ರಾಜ್​ಕುಮಾರ್ ಅವರಿಗೆ ಹಾಗೂ ಪುನೀತ್ ರಾಜ್​ಕುಮಾರ್​ಗೆ ಊಟದ ಬಗ್ಗೆ ವಿಶೇಷ ಪ್ರೀತಿ ಇತ್ತು. ರಾಜ್​ಕುಮಾರ್ ಊಟ ಮಾಡೋಕೆ ಕುಳಿತರೆ ಒಂದೇ ಒಂದು ಅಗಳು ಕೂಡ ಅವರು ಬಟ್ಟಲಮೇಲೆ ಇರೋಕೆ ಬಿಡುತ್ತಿರಲಿಲ್ಲ. ಈಗ ರಾಜ್​ಕುಮಾರ್ ಹಾಗೂ ಪುನೀತ್ ಒಟ್ಟಾಗಿ ಕುಳಿತು ಊಟ ಮಾಡುತ್ತಿರುವ ಅಪರೂಪದ ಫೋಟೋ ವೈರಲ್ ಆಗಿದೆ. ಅವರಿಗೆ ಊಟ ಬಡಿಸುತ್ತಿರೋದು ಖ್ಯಾತ ರಾಜಕಾರಣಿ.

ಈ ಫೋಟೋದಲ್ಲಿ ಇರೋದು ಬೇರೆ ಯಾರೂ ಅಲ್ಲ ಶಾಸಕ ಹಾಗೂ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರೋ ಜಮೀರ್ ಅಹ್ಮದ್. ಸ್ವತಃ ಜಮೀರ್ ಅಹ್ಮದ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರಾಜ್​ಕುಮಾರ್ ಕುಟುಂಬವನ್ನು ಆಮಂತ್ರಿಸಿ ಅವರು ಊಟ ಬಡಿಸಿದ್ದಾರೆ.

2 ಫೋಟೋಗಳನ್ನು ಜಮೀರ್ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ರಾಜ್​ಕುಮಾರ್ ಹಾಗೂ ಪುನೀತ್ ಇದ್ದಾರೆ. ಪುನೀತ್ ಎದುರಲ್ಲಿ ಮುದ್ದೆ ಇದೆ. ನಾನ್ ವೆಜ್​ ಊಟವನ್ನು ಜಮೀರ್ ಉಣ ಬಡಿಸುತ್ತಿದ್ದಾರೆ. ಇನ್ನು, ರಾಜ್​ಕುಮಾರ್ ಪ್ಲೇಟ್​ನಲ್ಲೂ ಮುದ್ದೆ ಹಾಗೂ ನಾನ್​ವೆಜ್ ಇದೆ. ಅವರು ಆನಂದಿಸಿ ಊಟ ಮಾಡುತ್ತಿದ್ದಾರೆ.

ಮತ್ತೊಂದು ಫೋಟೋದಲ್ಲಿ ರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್ ಹಾಗೂ ಜಮೀರ್ ಅಹ್ಮದ್ ಇದ್ದಾರೆ. ಜಮೀರ್ ನಗುನಗುತ್ತಾ ನಿಂತಿದ್ದಾರೆ. ‘ಕನ್ನಡ ಚಿತ್ರರಂಗದ ಲೆಜೆಂಡ್ಸ್ ದಿವಂಗತ ಡಾ.ರಾಜಕುಮಾರ್ ಮತ್ತು ದಿವಂಗತ ಪುನೀತ್ ಕುಮಾರ್ ಅವರೊಂದಿಗೆ ಮರೆಯಲಾಗದ ಕೆಲವು ಸುವರ್ಣ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಮುಂಗಾರು ಮಳೆ’ ಚಿತ್ರದ ಆಫರ್ ಗಣೇಶ್ ಕೈ ಸೇರಲು ಕಾರಣ ಆಗಿದ್ದೇ ಪುನೀತ್ ರಾಜ್​ಕುಮಾರ್

ರಾಜ್​ಕುಮಾರ್ ಹಾಗೂ ಪುನೀತ್ ಇಂದು ನಮ್ಮ ಜೊತೆ ಇಲ್ಲ. ಅವರು ಇಲ್ಲ ಎನ್ನುವ ನೋವು ಅಭಿಮಾನಿಗಳಿಗೆ ಎಂದಿಗೂ ಮಾಯ ಆಗುವಂಥದ್ದಲ್ಲ. ಪುನೀತ್ ಅವರು ನಿಧನ ಹೊಂದಿ ಮೂರು ವರ್ಷ ಕಳೆಯುತ್ತಾ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ