AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್ ಜೊತೆ ಮೂರು ವರ್ಷಕ್ಕೆ ಮೂರು ಸಿನಿಮಾ, ಹೊಂಬಾಳೆ ಘೋಷಣೆ

ಭಾರತದ ದೊಡ್ಡ ನಿರ್ಮಾಣ ಸಂಸ್ಥೆಯಾಗಿ ಬೆಳೆದಿರುವ ಕರ್ನಾಟಕದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್, ಇದೀಗ ಪ್ರಸ್ತುತ ಚಿತ್ರರಂಗದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ ಜೊತೆಗೆ ಮೂರು ಸಿನಿಮಾಗಳ ಮುಂಗಡ ಒಪ್ಪಂದ ಮಾಡಿಕೊಂಡಿದೆ.

ಪ್ರಭಾಸ್ ಜೊತೆ ಮೂರು ವರ್ಷಕ್ಕೆ ಮೂರು ಸಿನಿಮಾ, ಹೊಂಬಾಳೆ ಘೋಷಣೆ
ಮಂಜುನಾಥ ಸಿ.
|

Updated on: Nov 08, 2024 | 2:22 PM

Share

ಪ್ರಸ್ತುತ ಭಾರತೀಯ ಚಿತ್ರರಂಗದ ಅತಿ ದೊಡ್ಡ ಸ್ಟಾರ್ ಪ್ರಭಾಸ್. ದೊಡ್ಡ-ದೊಡ್ಡ ನಿರ್ಮಾಣ ಸಂಸ್ಥೆಗಳು ಪ್ರಭಾಸ್ ಜೊತೆಗೆ ಸಿನಿಮಾ ಮಾಡಲು ಹಣದ ಚೀಲ ಹಿಡಿದು ನಿಂತಿವೆ. ಆದರೆ ಪ್ರಭಾಸ್ ಮಾತ್ರ ಅಳೆದು ತೂಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದರ ನಡುವೆ ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ, ಪ್ರಭಾಸ್ ಜೊತೆಗೆ ದೀರ್ಘ ಕಾಲದ ಒಪ್ಪಂದವೊಂದನ್ನು ಭಾರಿ ಮೊತ್ತಕ್ಕೆ ಮಾಡಿಕೊಂಡಿದೆ. ಹೊಂಬಾಳೆ, ಮುಂದಿನ ಮೂರು ವರ್ಷಗಳಲ್ಲಿ ಪ್ರಭಾಸ್ ಜೊತೆಗೆ ಮೂರು ಸಿನಿಮಾ ನಿರ್ಮಾಣ ಮಾಡಲಿದೆ. ಈ ಬಗ್ಗೆ ಅಧಿಕೃತ ಘೋಷಣೆ ಸಹ ಮಾಡಿದೆ.

ಪ್ರಭಾಸ್​ ನಟನೆಯ ಮೂರು ಸಿನಿಮಾಗಳನ್ನು ಹೊಂಬಾಳೆ ನಿರ್ಮಾಣ ಮಾಡಲಿದ್ದು, ಮುಂದಿನ ಮೂರು ವರ್ಷಗಳಲ್ಲಿ ಅಂದರೆ 2026, 2027 ಹಾಗೂ 2028 ಕ್ಕೆ ತಲಾ ಒಂದೊಂದು ಸಿನಿಮಾಗಳನ್ನು ಹೊಂಬಾಳೆ ನಿರ್ಮಾಣ ಮಾಡಲಿದೆ. ಅಥವಾ ಬಿಡುಗಡೆ ಮಾಡಲಿದೆ. ಪ್ರಭಾಸ್ ಹೀಗೆ, ಮುಂಚಿತವಾಗಿ ನಿರ್ಮಾಣ ಸಂಸ್ಥೆಯೊಂದರ ಜೊತೆಗೆ ಸಿನಿಮಾ ಒಪ್ಪಂದ ಮಾಡಿಕೊಂಡಿರುವುದು ಇದು ಮೊದಲು ಅನಿಸುತ್ತದೆ. ಬಾಲಿವುಡ್​ನಲ್ಲಿ ಕೆಲ ಹೊಸ ನಟರೊಟ್ಟಿಗೆ ನಿರ್ಮಾಣ ಸಂಸ್ಥೆಗಳು ಹೀಗೆ ಒಪ್ಪಂದ ಮಾಡಿಕೊಳ್ಳುವುದುಂಟು ಆದರೆ ಹೊಂಬಾಳೆ, ಭಾರತದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್ ಜೊತೆಗೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಹೊಂಬಾಳೆ ಫಿಲಮ್ಸ್, ‘ರೆಬಲ್ ಸ್ಟಾರ್ ಜೊತೆಗೆ ಕೈಜೋಡಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಭಾರತೀಯ ಸಿನಿಮಾದ ಸಾರವನ್ನು ಸಂಭ್ರಮಿಸುವ ಹಾಗೂ ಅದನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಲು ಈ ಕೈಜೋಡಿಸುವಿಕೆ ಅತ್ಯಂತ ಮಹತ್ವದ್ದಾಗಲಿದೆ. ಸಿನಿಮಾ ಪ್ರೇಮಿಗಳಿಗೆ ಮರೆಯಲಾಗದ ಸಿನಿಮಾ ಅನುಭವವನ್ನು ಕೊಡುವುದು ನಮ್ಮ ಘೋಷಣೆಯಾಗಿದೆ. ವೇದಿಕೆ ಸಜ್ಜಾಗಿದೆ, ಮುಂದಿನ ಹಾದಿ ಮಿತಿಯಿಲ್ಲದ್ದಾಗಿದೆ. ‘ಸಲಾರ್ 2’ ಸಿನಿಮಾದ ಜೊತೆಗೆ ನಮ್ಮ ಈ ಪಯಣ ಪ್ರಾರಂಭ ಆಗಲಿದೆ’ ಎಂದಿದೆ ಹೊಂಬಾಳೆ.

ಇದನ್ನೂ ಓದಿ:ಹೊಂಬಾಳೆಯ ಮೊದಲ ತಮಿಳು ಸಿನಿಮಾ ‘ರಘು ತಾತ’ ಟ್ರೈಲರ್ ಬಿಡುಗಡೆ

ಈ ಹಿಂದೆ ಹರಿದಾಡಿದ್ದ ಸುದ್ದಿಯ ಪ್ರಕಾರ, ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ನಡುವೆ ಅಭಿಪ್ರಾಯ ಬೇದ ಬಂದಿರುವ ಕಾರಣ ‘ಸಲಾರ್ 2’ ಸಿನಿಮಾ ಪ್ರಾರಂಭವೇ ಆಗುವುದಿಲ್ಲ ಎನ್ನಲಾಗಿತ್ತು. ಹೊಂಬಾಳೆ ಸಹ ‘ಸಲಾರ್ 2’ ಸಿನಿಮಾದಿಂದ ಹಿಂದೆ ಸರಿದಿದೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಆದರೆ ಅವನ್ನೆಲ್ಲ ಸುಳ್ಳು ಮಾಡಿ, ಒಂದೇ ಬಾರಿ ಮೂರು ಸಿನಿಮಾದ ಒಪ್ಪಂದವನ್ನು ಪ್ರಭಾಸ್ ಜೊತೆಗೆ ಹೊಂಬಾಳೆ ಮಾಡಿಕೊಂಡಿದೆ. ಈ ಒಪ್ಪಂದದ ಒಟ್ಟು ಮೊತ್ತ ಎಷ್ಟು? ಷರತ್ತುಗಳೇನು? ಇನ್ನಿತರೆ ವಿಷಯಗಳು ಇನ್ನಷ್ಟೆ ಹೊರಬೀಳಬೇಕಿದೆ.

ಪ್ರಭಾಸ್ ಪ್ರಸ್ತುತ ರಘು ಹನುಪುಡಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ರಾಜಾ ಸಾಬ್’ ಹೆಸರಿನ ಹಾರರ್ ಸಿನಿಮಾದಲ್ಲಿ ನಟಿಸಿ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಚಾಲ್ತಿಯಲ್ಲಿದೆ. ಅದಾದ ಬಳಿಕ ‘ಸ್ಪಿರಿಟ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಸಿನಿಮಾದ ಬಳಿಕ ‘ಸಲಾರ್ 2’ ಚಿತ್ರೀಕರಣ ಪ್ರಾರಂಭ ಆಗಲಿದೆ. ಇನ್ನು ಹೊಂಬಾಳೆ ಸಹ ಹಲವು ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ