‘ನವಗ್ರಹ’ ಜೊತೆ ಈ ವಾರ ಬಿಡುಗಡೆ ಆಗಲಿರುವ ಸಿನಿಮಾಗಳ ಪಟ್ಟಿ

This week release: ಮತ್ತೊಂದು ಶುಕ್ರವಾರ ಬಂದಿದೆ. ಈ ವಾರ ಕೆಲವು ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ದರ್ಶನ್ ನಟನೆಯ ‘ನವಗ್ರಹ’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಅದರ ಜೊತೆಗೆ ಬಿಡುಗಡೆ ಆಗುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.

‘ನವಗ್ರಹ’ ಜೊತೆ ಈ ವಾರ ಬಿಡುಗಡೆ ಆಗಲಿರುವ ಸಿನಿಮಾಗಳ ಪಟ್ಟಿ
Follow us
ಮಂಜುನಾಥ ಸಿ.
|

Updated on: Nov 07, 2024 | 5:53 PM

ಮತ್ತೊಂದು ಶುಕ್ರವಾರ ಬಂದಿದೆ. ಹೊಸ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ದಿನವಿದು. ಆದರೆ ಈ ಶುಕ್ರವಾರ ಕನ್ನಡ ಸಿನಿಮಾ ಪ್ರೇಮಿಗಳಿಗೆ ತುಸು ನಿರಾಸೆಯೇ ಹೆಚ್ಚಿದ್ದಂತಿದೆ. ಈ ವಾರ ಯಾವುದೇ ಸ್ಟಾರ್ ನಟರ ಅಥವಾ ನಿರೀಕ್ಷಿತ ಎನ್ನಬಹುದಾದ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಆದರೆ ದರ್ಶನ್ ನಟನೆಯ ‘ನವಗ್ರಹ’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಇದರ ಜೊತೆಗೆ ಕೆಲವು ಹೊಸ ತಂಡಗಳ ಸಿನಿಮಾಗಳು ಸಹ ಚಿತ್ರಮಂದಿರಕ್ಕೆ ಬರುತ್ತಿವೆ.

ಬಿಟಿಎಸ್

ಐದು ನಿರ್ದೇಶಕರು ಸೇರಿ ನಿರ್ದೇಶನ ಮಾಡಿರುವ ಸಿನಿಮಾ ‘ಬಿಟಿಎಸ್’, ಬಿಹೈಂದ್ ದಿ ಸೀನ್ಸ್ ಎಂಬುದು ಇದರ ಪೂರ್ಣ ಹೆಸರು, ತೆರೆಯ ಹಿಂದೆ ನಡೆಯುವ ಕತೆಗಳ ಸಿನಿಮಾ ಇದು. ಐದು ಭಿನ್ನ ಕತೆಗಳು ಸಿನಿಮಾದಲ್ಲಿದ್ದು, ಕತೆಗಳನ್ನು ಪೂರ್ವ ಭಾರದ್ವಾಜ್, ಪ್ರಜ್ವಲ್ ರಾಜ್, ಸಾಯಿ ಶ್ರೀನಿಧಿ, ಕುಲದೀಪ್ ಕಾರಿಯಪ್ಪ, ರಾಜೇಶ್ ಎನ್. ಶಂಕದ್ ಸೇರಿ ನಿರ್ದೇಶನ ಮಾಡಿದ್ದಾರೆ. ಪ್ರತಿಭಾವಂತ ನಟ, ನಟಿಯರ ತಂಡ ಈ ಸಿನಿಮಾದಲ್ಲಿ ಕೆಲಸ ಮಾಡಿದೆ. ಸಿನಿಮಾದ ಟ್ರೈಲರ್ ಗಮನ ಸೆಳೆಯುತ್ತಿದೆ.

ನವಗ್ರಹ

2008 ರಲ್ಲಿ ಬಿಡುಗಡೆ ಆಗಿದ್ದ ದರ್ಶನ್ ನಟನೆಯ ‘ನವಗ್ರಹ’ ಸಿನಿಮಾ ನಾಳೆ (ನವೆಂಬರ್ 08) ಮರು ಬಿಡುಗಡೆ ಆಗುತ್ತಿದೆ. ಈ ಸಿನಿಮಾವನ್ನು ರಾಜ್ಯದಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಸಿನಿಮಾದ ಮರು ಬಿಡುಗಡೆ ಪ್ರಚಾರಕ್ಕೆ ಸಿನಿಮಾದಲ್ಲಿ ನಟಿಸಿದ್ದ ಕೆಲ ಕಲಾವಿದರು ಒಂದಾಗಿದ್ದರು. ತರುಣ್, ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್ ಅವರುಗಳು ಸಿನಿಮಾ ಬಿಡುಗಡೆ ದಿನ, ಅಭಿಮಾನಿಗಳೊಟ್ಟಿಗೆ ಸೇರಿ ಸಿನಿಮಾ ಸಹ ನೋಡಲಿದ್ದಾರೆ.

ಇದನ್ನೂ ಓದಿ:ಒಟಿಟಿ ಪ್ರಿಯರಿಗೆ ಈ ವಾರ ಬಂಪರ್; ರಿಲೀಸ್ ಆಗ್ತಿವೆ ಹಲವು ಸಿನಿಮಾಗಳು

ಯು

ರಾಜೇಶ್ ನಟರಂಗ, ದೇವರಾಜ್ ಇನ್ನೂ ಕೆಲವು ಪ್ರಮುಖ ಕಲಾವಿದರು ನಟಿಸಿರುವ ಕ್ರೈಂ ಥ್ರಿಲ್ಲರ್ ಸಿನಿಮಾ ‘ಯು’ ನವೆಂಬರ್ 8 ರಂದು ಬಿಡುಗಡೆ ಆಗಲಿದೆ. ಒಂದು ಊರಿನಲ್ಲಿ ನಡೆಯುವ ಸರಣಿ ಸಾವು ಅದರ ಹಿಂದಿನ ರಹಸ್ಯ ಇನ್ನಿತರೆ ಕುತೂಹಲಕಾರಿ ತಿರುವುಗಳಿರುವ ಕತೆಯನ್ನು ‘ಯು’ ಸಿನಿಮಾ ಒಳಗೊಂಡಿದೆ.

ಸಂಗೀತ ಸಂತೋಷ

ರೊಮ್ಯಾಂಟಿಕ್ ಆಕ್ಷನ್ ಸಿನಿಮಾ ‘ಸಂಗೀತ ಸಂತೋಷ’ ನವೆಂಬರ್ 08ಕ್ಕೆ ಬಿಡುಗಡೆ ಆಗುತ್ತಿದೆ. ಯುವ ಬ್ಯುಸಿನೆಸ್ ಮ್ಯಾನ್ ಹಾಗೂ ಯುವ ಮಹಿಳಾ ಮಹಿಳಾ ಉದ್ಯಮಿಯ ಜಗಳ, ಅವರ ಪ್ರೇಮಕತೆ ಇತ್ಯಾದಿಗಳನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಕೆಲ ಹೊಸ ನಟರ ಜೊತೆಗೆ ಅವಿನಾಶ್, ದೊಡ್ಡಣ್ಣ ಸೇರಿದಂತೆ ಕೆಲ ಹಿರಿಯ ಕಲಾವಿದರು ನಟಿಸಿದ್ದಾರೆ. ‘ಅಸುರರು’ ಹೆಸರಿನ ಸಿನಿಮಾ ಸಹ ಇದೇ ನವೆಂಬರ್ 08 ಕ್ಕೆ ತೆರೆಗೆ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ