ಒಟಿಟಿ ಪ್ರಿಯರಿಗೆ ಈ ವಾರ ಬಂಪರ್; ರಿಲೀಸ್ ಆಗ್ತಿವೆ ಹಲವು ಸಿನಿಮಾಗಳು
ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಗಳಿಕೆ ಮಾಡಿತು. ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದಿದ್ದು ಸಿನಿಮಾ ಕಲೆಕ್ಷನ್ ಕುಗ್ಗಲು ಪ್ರಮುಖ ಕಾರಣ. ಈ ಚಿತ್ರವನ್ನು ಒಟಿಟಿಯಲ್ಲಿ ನೋಡಲು ಅನೇಕರು ಕಾದಿದ್ದಾರೆ. ಅವರಿಗೆ ಗುಡ್ನ್ಯೂಸ್ ಸಿಕ್ಕಿದೆ.
ದೀಪಾವಳಿ ಪ್ರಯುಕ್ತ ಹಲವು ಸಿನಿಮಾಗಳು ಥಿಯೇಟರ್ನಲ್ಲಿ ರಿಲೀಸ್ ಆಗಿವೆ. ಅವುಗಳ ಅಬ್ಬರ ಕಡಿಮೆ ಆಗಿಲ್ಲ. ಈ ವಾರ ಒಟಿಟಿಯಲ್ಲಿ ಸಿನಿಮಾಗಳ ಸುಗ್ಗಿ ನಡೆಯುತ್ತಿದೆ. ಥಿಯೇಟರ್ನಲ್ಲಿ ಸಿನಿಮಾ ರಿಲೀಸ್ ಆದ ನಾಲ್ಕು ವಾರ ಅಥವಾ ಆರು ವಾರಗಳಲ್ಲಿ ಸಿನಿಮಾಗಳು ಒಟಿಟಿಗೆ ಬರೋದು ವಾಡಿಕೆ. ಅದೇ ರೀತಿ ಒಂದು ತಿಂಗಳು ಹಾಗೂ ಒಂದೂವರೆ ತಿಂಗಳ ಹಿಂದೆ ರಿಲೀಸ್ ಆದ ಚಿತ್ರಗಳು ಈಗ ಒಟಿಟಿ ಹಾದಿ ಹಿಡಿದಿವೆ.
ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಗಳಿಕೆ ಮಾಡಿತು. ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದಿದ್ದು ಸಿನಿಮಾ ಕಲೆಕ್ಷನ್ ಕುಗ್ಗಲು ಪ್ರಮುಖ ಕಾರಣ. ಈ ಚಿತ್ರವನ್ನು ಒಟಿಟಿಯಲ್ಲಿ ನೋಡಲು ಅನೇಕರು ಕಾದಿದ್ದಾರೆ. ಅವರಿಗೆ ಗುಡ್ನ್ಯೂಸ್ ಸಿಕ್ಕಿದೆ. ಜೂನಿಯರ್ ಎನ್ಟಿಆರ್ ನಟನೆಯ ಈ ಚಿತ್ರ ನವೆಂಬರ್ 8ರಂದು ನೆಟ್ಫ್ಲಿಕ್ಸ್ ಮೂಲಕ ಪ್ರಸಾರ ಕಾಣುತ್ತಿದೆ.
ಕೊರಟಾಲ ಶಿವ ‘ದೇವರ’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾಗೆ ಎರಡನೇ ಪಾರ್ಟ್ ಕೂಡ ಬರಬೇಕಿದೆ. ಆ ಚಿತ್ರ ಸೆಟ್ಟೇರುತ್ತದೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆ ಮೂಡಿದೆ.
ರಜನಿಕಾಂತ್ ನಟನೆಯ ‘ವೆಟ್ಟೈಯಾನ್’ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆಯಿತು. ಈ ಚಿತ್ರ 29 ದಿನಗಳಲ್ಲಿ ಒಟಿಟಿಗೆ ಕಾಲಿಡುತ್ತಿದೆ. ರಜನಿಕಾಂತ್ ಜೊತೆಗೆ ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್, ಮಂಜು ವಾರಿಯರ್ ಮೊದಲಾದವರು ನಟಿಸಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಈ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ರಿಲೀಸ್ ಆಗಲಿದೆ.
#DevaraOnNetflix from Nov 8th 🌊 #Devara 🔥 pic.twitter.com/EWRKcteuPZ
— Devara (@DevaraMovie) November 5, 2024
ಇದನ್ನೂ ಓದಿ: ತೆಲುಗು ಬಿಗ್ ಬಾಸ್ ವೇದಿಕೆ ಮೇಲೆ ಕನ್ನಡದಲ್ಲೇ ಮಾತನಾಡಿದ್ದ ಜೂನಿಯರ್ ಎನ್ಟಿಆರ್
ಟುವಿನೋ ಥಾಮಸ್ ನಟನೆಯ ‘ARM’ ಕೂಡ ಒಟಿಟಿಗೆ ಬರುತ್ತಿದೆ. ಈ ಸಿನಿಮಾ ಎರಡು ತಿಂಗಳ ಬಳಿಕ ಒಟಿಟಿಗೆ ಬರುತ್ತಿದೆ. ಈ ಚಿತ್ರದ ಕಥೆ 1900, 1950 ಹಾಗೂ 1990ರಲ್ಲಿ ಸಾಗುತ್ತದೆ. ನವೆಂಬರ್ 8ರಂದು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಮೂಲಕ ಚಿತ್ರ ಬಿಡುಗಡೆ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.