ತೆಲುಗು ಬಿಗ್ ಬಾಸ್ ವೇದಿಕೆ ಮೇಲೆ ಕನ್ನಡದಲ್ಲೇ ಮಾತನಾಡಿದ್ದ ಜೂನಿಯರ್ ಎನ್ಟಿಆರ್
ಜೂನಿಯರ್ ಎನ್ಟಿಆರ್ ಅವರಿಗೆ ಕರ್ನಾಟಕದಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಅವರ ತಾಯಿ ಕುಂದಾಪುರದವರು ಎಂಬುದು ಅವರ ಕನ್ನಡದೊಂದಿಗಿನ ನಂಟನ್ನು ಸೂಚಿಸುತ್ತದೆ. ಬಿಗ್ ಬಾಸ್ ಕನ್ನಡದಲ್ಲಿ ಅವರ ಭಾಗವಹಿಸುವಿಕೆ ಮತ್ತು ಕನ್ನಡ ಕಲಾವಿದರೊಂದಿಗಿನ ಸಂಬಂಧಗಳು ಅವರ ಕನ್ನಡ ಪ್ರೀತಿಯನ್ನು ತೋರಿಸುತ್ತವೆ.
ತೆಲುಗು ನಟ ಜೂನಿಯರ್ ಎನ್ಟಿಆರ್ ಅವರಿಗೆ ಕರ್ನಾಟಕದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಇತ್ತೀಚಿಗಿನ ವರ್ಷಗಳಲ್ಲಂತೂ ಕನ್ನಡದ ಹಾಗೂ ಕರ್ನಾಟಕದ ಜೊತೆಗಿನ ನಂಟು ಹೆಚ್ಚಿದೆ. ಅವರು ಈ ಮೊದಲು ಬಿಗ್ ಬಾಸ್ನಲ್ಲಿ ಕನ್ನಡದಲ್ಲಿ ಮಾತನಾಡಿದ್ದರು. ಈ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಕನ್ನಡದ ಸ್ಪರ್ಧಿಗಳು ಬಿಗ್ ಬಾಸ್ಗೆ ಬಂದಿದ್ದರು. ಅವರ ಜೊತೆ ಮಾತನಾಡಿದ್ದರು.
ತೆಲುಗು ಭಾಷೆಯಲ್ಲಿ ಕನ್ನಡದ ಕಲಾವಿದರು ಇದ್ದಾರೆ. ಅಲ್ಲಿನ ರಿಯಾಲಿಟಿ ಶೋನಲ್ಲೂ ಕನ್ನಡದವರು ಭಾಗಿ ಆಗಿದ್ದು ಇದೆ. ಜೂನಿಯರ್ ಎನ್ಟಿಆರ್ ಅವರು ಒಮ್ಮೆ ಬಿಗ್ ಬಾಸ್ ಹೋಸ್ಟ್ ಮಾಡಿದ್ದರು. ಆಗ ಸ್ಪರ್ಧಿಗಳು ಕನ್ನಡದಲ್ಲಿ ಮಾತನಾಡಿದ್ದರು. ಇದನ್ನು ಕೇಳಿ ಜೂನಿಯರ್ ಎನ್ಟಿಆರ್ ಖುಷಿಪಟ್ಟಿದ್ದರು.
‘ಕನ್ನಡದಲ್ಲಿ ಚೆನ್ನಾಗಿ ಮಾತಾಡ್ತಾ ಇದೀರಾ ನೀವು. ಅವರು ಕನ್ನಡದವರಾ ಅಥವಾ ನೀವು ಕನ್ನಡದವರಾ’ ಎಂದು ಜೂನಿಯರ್ ಎನ್ಟಿಆರ್ ಕೇಳಿದರು. ‘ನಾವಿಬ್ಬರೂ ಕನ್ನಡಿಗರು’ ಎನ್ನುವ ಉತ್ತರ ಅವರ ಕಡೆಯಿಂದ ಬಂತು. ಇದಕ್ಕೆ ಖುಷಿಯಿಂದ ಉತ್ತರಿಸಿದ ಜೂನಿಯರ್ ಎನ್ಟಿಆರ್, ‘ನನ್ನ ಅಮ್ಮ ಕೂಡ ಕನ್ನಡದವರು. ಕುಂದಾಪುರದವರು’ ಎಂದು ಹೆಮ್ಮೆಯಿಂದ ಹೇಳಿಕೊಂಡರು ಜೂನಿಯರ್ ಎನ್ಟಿಆರ್.
ಜೂನಿಯರ್ ಎನ್ಟಿಆರ್ ಅವರು ಇತ್ತೀಚೆಗಷ್ಟೇ ಅಮ್ಮನ ಜೊತೆ ಕುಂದಾಪುರಕ್ಕೆ ಭೇಟಿ ಕೊಟ್ಟಿದ್ದರು. ಅವರ ತಾಯಿಗೆ ಉಡುಪಿಗೆ ಭೇಟಿ ಕೊಡಬೇಕು ಎಂಬ ಆಸೆ ಇತ್ತು. ಅದನ್ನು ಈಡೇರಿಸಿದ್ದಾರೆ. ಕರ್ನಾಟಕಕ್ಕೆ ಬಂದಾಗೆಲ್ಲ ಜೂನಿಯರ್ ಎನ್ಟಿಆರ್ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆಯುತ್ತಾರೆ. ಪುನೀತ್ ರಾಜ್ಕುಮಾರ್ಗಾಗಿ ಅವರು ಒಂದನ್ನು ಹಾಡು ಹಾಡಿದ್ದರು. ಅವರು ಪುನೀತ್ ನಿಧನ ಹೊಂದಿದಾಗ ಸಾಕಷ್ಟು ಸಾಕಷ್ಟು ನೊಂದುಕೊಂಡಿದ್ದರು.
View this post on Instagram
ಇದನ್ನೂ ಓದಿ: ಒಟಿಟಿಗೆ ಬರಲಿದೆ ಜೂ ಎನ್ಟಿಆರ್ ‘ದೇವರ’, ಯಾವ್ಯಾವ ಸಿನಿಮಾ ಈ ವಾರ?
ಸಿನಿಮಾ ವಿಚಾರಕ್ಕೆ ಬರೋದಾದರೆ ಜೂನಿಯರ್ ಎನ್ಟಿಆರ್ ಅವರ ನಟನೆಯ ‘ದೇವರ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆಯಿತು. ಇದನ್ನು ಸೋಲು ಎಂದಾಗಲೀ ಗೆಲುವು ಎಂದಾಗಲೀ ಹೇಳಲು ಸಾಧ್ಯವೇ ಇಲ್ಲ. ಇದಲ್ಲದೆ ‘ವಾರ್ 2’ ಸಿನಿಮಾ ಕೆಲಸಗಳಲ್ಲೂ ಅವರು ಬ್ಯುಸಿ ಆಗಲಿದ್ದಾರೆ. ಇದರ ಶೂಟ್ ಮುಂಬೈನಲ್ಲಿ ನಡೆಯುತ್ತಿದೆ. ಮತ್ತೊಂದು ವಿಶೇಷ ಎಂದರೆ ಕನ್ನಡಿಗ ಪ್ರಶಾಂತ್ ನೀಲ್ ಜೊತೆ ಅವರು ಸಿನಿಮಾ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.