ಚಿರಂಜೀವಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್; ಅಸಮಾಧಾನ ಹೊರಹಾಕಿದ ಫ್ಯಾನ್ಸ್
ಚಿರಂಜೀವಿ ನಟನೆಯ "ವಿಶ್ವಂಭರ" ಸಿನಿಮಾದ ಬಿಡುಗಡೆ ಮತ್ತೆ ಮುಂದೂಡಲ್ಪಟ್ಟಿದೆ. ಗ್ರಾಫಿಕ್ಸ್ ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ ಎಂಬುದು ಕಾರಣ. ಇದರಿಂದ ಅಭಿಮಾನಿಗಳು ನಿರಾಶರಾಗಿದ್ದಾರೆ. ಈ ಚಿತ್ರದ ಜೊತೆಗೆ ಚಿರಂಜೀವಿ ಅವರು ಇನ್ನೂ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಲವು ಚಿತ್ರಗಳು ಸೋತ ನಂತರ ಅವರು ಹೆಚ್ಚು ಎಚ್ಚರಿಕೆಯಿಂದ ಸಿನಿಮಾಗಳನ್ನು ಆಯ್ಕೆ ಮಾಡುತ್ತಿದ್ದಾರೆ.

‘ವಿಶ್ವಂಭರ’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ಸಿನಿಮಾಗೆ ಚಿರಂಜೀವಿ ಅವರು ಹೀರೋ. ಈ ಸಿನಿಮಾ ರಿಲೀಸ್ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಇದೆ. ಈಗ ಕೇಳಿ ಬರುತ್ತಿರುವ ಹೊಸ ಮಾಹಿತಿ ಪ್ರಕಾರ ಸಿನಿಮಾದ ರಿಲೀಸ್ ಮತ್ತಷ್ಟು ವಿಳಂಬ ಆಗಲಿದೆಯಂತೆ. ಇದಕ್ಕೆ ಕಾರಣ ಕೂಡ ಇದೆ ಎನ್ನಲಾಗಿದೆ.
‘ವಿಶ್ವಂಭರ’ ಫ್ಯಾಂಟಸಿ ಡ್ರಾಮ. ಈ ಸಿನಿಮಾದ ಶೂಟ್ ಭರದಿಂದ ಸಾಗುತ್ತಿದೆ. ಆದರೆ ಚಿತ್ರಕ್ಕೆ ಸಾಕಷ್ಟು ಗ್ರಾಫಿಕ್ಸ್ ಕೆಲಸಗಳು ಬಾಕಿ ಇವೆ. ಈ ಕಾರಣದಿಂದ ಮುಂದಿನ ವರ್ಷ ಬೇಸಿಗೆಗೆ ಚಿತ್ರ ರಿಲೀಸ್ ಆಗಲಿದೆ ಎಂದು ವರದಿ ಆಗಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಈ ಚಿತ್ರವನ್ನು ಬಿಂಬಿಸಾರ ಖ್ಯಾತಿಯ ವಸಿಷ್ಠ ಅವರು ನಿರ್ದೇಶನಮಾಡುತ್ತಿದ್ದಾರೆ.
ಚಿರಂಜೀವಿ ಹಾಗೂ ನಿರ್ದೇಶಕ ಅನಿಲ್ ರವಿಪುಡಿ ಒಟ್ಟಾಗಿ ಸಿನಿಮಾ ಮಾಡಬೇಕಿದೆ. ಆದರೆ,ಈ ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಹಾಗಾಗಿ, ಮೊದಲು ಈ ಚಿತ್ರ ರಿಲೀಸ್ ಆಗಿ ಆ ಬಳಿಕ ‘ವಿಶ್ವಂಭರ’ ತೆರೆಗೆ ಬಂದರೂ ಅಚ್ಚರಿ ಏನಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ನಾಗಾರ್ಜುನ, ಚಿರಂಜೀವಿಗೆ ರಶ್ಮಿಕಾ ಮಂದಣ್ಣ ಮೇಲೆ ಉಂಟಾಯ್ತು ಕ್ರಶ್
ಚಿರಂಜೀವಿ ಅವರಿಗೆ ಇತ್ತೀಚೆಗೆ ದೊಡ್ಡ ಯಶಸ್ಸು ಸಿಕ್ಕಿಲ್ಲ. ‘ಆಚಾರ್ಯ’ ಚಿತ್ರವನ್ನು ಸಾಕಷ್ಟು ದೊಡ್ಡ ಮಟ್ಟದಲ್ಲಿ ನಷ್ಟವನ್ನು ಅನುಭವಿಸಿದ್ದನ್ನು ನೀವು ಕಂಡಿರಬಹುದು. ಇದು ಅವರಿಗೆ ಸಾಕಷ್ಟು ಬೇಸರ ಮೂಡಿಸಿತ್ತು. ಇದಾದ ಬಳಿಕ ಅವರು ಮತ್ತೆ ಗೆಲ್ಲುವ ಭರವಸೆಯಲ್ಲಿ ಇದ್ದರು. ಆದರೆ, ಅದು ಸಾಧ್ಯ ಆಗಿರಲಿಲ್ಲ. ಅದೇ ರೀತಿ, ‘ವಾಲ್ಟೇರ್ ವೀರಯ್ಯ’, ‘ಭೋಲಾ ಶಂಕರ್’ ಕೂಡ ಹಿನ್ನಡೆ ಅನುಭವಿಸಿದವು. ಹೀಗಾಗಿ, ಅವರು ಹೆಚ್ಚು ಎಚ್ಚರಿಕೆ ವಹಿಸಿ ಸಿನಿಮಾ ಮಾಡುತ್ತಿದ್ದಾರೆ. ‘ವಿಶ್ವಂಭರ’ ಅಲ್ಲದೆ, ಅವರ ಬಳಿ ಇನ್ನೂ ಎರಡೂ ಸಿನಿಮಾಗಳು ಇದ್ದು ಅದರ ಕೆಲಸ ನಡೆಯುತ್ತಿದೆ. ಕಳೆದ ವರ್ಷ ಅವರಿಗೆ ಪದ್ಮ ವಿಭೂಷಣ ಅವಾರ್ಡ್ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.