‘ಕುಬೇರ’ ಪರ ರಾಜ್ಯದಲ್ಲಿ ಹಿಟ್, ಧನುಶ್ ರಾಜ್ಯದಲ್ಲಿ ಅಟ್ಟರ್ ಫ್ಲಾಪ್
ಕುಬೇರ ಚಿತ್ರವು ತೆಲುಗಿನಲ್ಲಿ ಭಾರಿ ಯಶಸ್ಸು ಕಂಡಿದ್ದರೂ, ತಮಿಳುನಾಡಿನಲ್ಲಿ ನಿರೀಕ್ಷಿತ ಯಶಸ್ಸು ಪಡೆಯಲು ವಿಫಲವಾಗಿದೆ. ಧನುಷ್ ಅವರ ನಟನೆಯ ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಈ ವ್ಯತ್ಯಾಸ ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದೆ. ಸಿನಿಮಾದಗಳಿಕೆ 100 ಕೋಟಿ ರೂಪಾಯಿ ಸನಿಹದಲ್ಲಿ ಇದೆ.

‘ಕುಬೇರ’ ಸಿನಿಮಾ (Kubera Movie) ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ನಟ ಧನುಶ್ ನಟಿಸಿದ್ದು, ಶೇಖರ್ ಕಮ್ಮುಲ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಕಲೆಕ್ಷನ್ ಏನೋ ಚೆನ್ನಾಗಿಯೇ ಆಗುತ್ತಿದೆ. ಆದರೆ, ಒಂದು ರಾಜ್ಯದಲ್ಲಿ ಸಿನಿಮಾ ಹಿಟ್ ಆದರೆ, ಮತ್ತೊಂದು ರಾಜ್ಯದಲ್ಲಿ ಫ್ಲಾಪ್ ಆಗಿದೆ. ಈ ವಿಚಾರ ಧನುಶ್ ಅಭಿಮಾನಿಗಳಿಗೂ ಅಚ್ಚರಿ ಮೂಡಿಸಿದೆ. ಆ ಬಗ್ಗೆ ಈ ಸ್ಟೋರಿಯಲ್ಲಿ ಇದೆ ವಿವರ.
‘ಕುಬೇರ’ ಸಿನಿಮಾ ತೆಲುಗು ತಂತ್ರಜ್ಞರು ಹಾಗೂ ಬಹುಭಾಷಾ ಕಲಾವಿದರ ಸಮ್ಮಿಲನ. ತಮಿಳಿನ ನಟ ಧನುಶ್, ತೆಲುಗು ನಟ ನಾಗಾರ್ಜುನ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಈ ನಿರೀಕ್ಷೆ ಸುಳ್ಳಾಗಿಲ್ಲ. ಸಿನಿಮಾ ಭಾರತದಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಸನಿಹದಲ್ಲಿ ಇದೆ. ವಿಶ್ವಮಟ್ಟದಲ್ಲಿ ಸಿನಿಮಾ ಶತಕ ಬಾರಿಸಿದೆ.
‘ಕುಬೇರ’ ಚಿತ್ರ ಶನಿವಾರ (4.2 ಕೋಟಿ ರೂಪಾಯಿ) ಹಾಗೂ ಭಾನುವಾರ (4.50) ಕಲೆಕ್ಷನ್ ಆಗಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 80 ಕೋಟಿ ರೂಪಾಯಿ ಅಷ್ಟಾಗಿದೆ. ಮೊದಲ ವಾರದಲ್ಲಿ ಸಿನಿಮಾ 69 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದರಲ್ಲಿ ತೆಲುಗಿನಿಂದಲೇ 48 ಕೋಟಿ ರೂಪಾಯಿ ಬಂದರೆ, ತಮಿಳಿನಿಂದ 18 ಕೋಟಿ ರೂಪಾಯಿ ಆಗಿದೆ.
ಎರಡನೇ ವಾರದಿಂದ ತಮಿಳಿನಲ್ಲಿ ಕಲೆಕ್ಷನ್ ಲಕ್ಷರೂಪಾಯಿಗೆ ಇಳಿಕೆ ಆಗಿದೆ. ಈ ಸಿನಿಮಾ ತಮಿಳಿನಲ್ಲಿ ಶುಕ್ರವಾರ 30 ಲಕ್ಷ ರೂಪಾಯಿ, ಶನಿವಾರ 63 ಲಕ್ಷ ರೂಪಾಯಿ ಹಾಗೂ ಭಾನುವಾರ ಕೂಡ ಇದೆ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ. ಹೀಗಾಗಿ, ಸಿನಿಮಾದ ಗಳಿಕೆ ತಮಿಳಿನಲ್ಲಿ ತಳಮಟ್ಟ ತಲುಪಿದೆ.
ಇದನ್ನೂ ಓದಿ: 100 ಕೋಟಿ ಗಳಿಸಿದ ‘ಕುಬೇರ’ ಆದರೂ ಧನುಶ್ಗೆ ಭಾರಿ ಮುಖಭಂಗ
ಸಾಮಾನ್ಯವಾಗಿ ಸಿನಿಮಾಗಳು ಒಂದು ರಾಜ್ಯದಲ್ಲಿ ಹಿಟ್ ಆದರೆ, ಪರ ಭಾಷೆಯಲ್ಲೂ ಹಿಟ್ ಆಗುತ್ತದೆ. ಆದರೆ, ‘ಕುಬೇರ’ ಸಿನಿಮಾದಲ್ಲಿ ಈ ವಿಚಾರ ಉಲ್ಟಾ ಆಗಿದೆ. ಧನುಶ್ ಅವರ ರಾಜ್ಯದಲ್ಲೇ ಚಿತ್ರಕ್ಕೆ ಕಡಿಮೆ ಗಳಿಕೆ ಆಗುತ್ತಿದೆ ಅನ್ನೋದು ಬೇಸರದ ವಿಚಾರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.