AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

100 ಕೋಟಿ ಗಳಿಸಿದ ‘ಕುಬೇರ’ ಆದರೂ ಧನುಶ್​ಗೆ ಭಾರಿ ಮುಖಭಂಗ

Kubera movie box office: ತಮಿಳು ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರಾದ ಧನುಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕುಬೇರ’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಬಾಕ್ಸ್ ಆಫೀಸ್​​ನಲ್ಲಿ 100 ಕೋಟಿಗೂ ಹೆಚ್ಚಿನ ಮೊತ್ತವನ್ನು ಗಳಿಕೆ ಮಾಡಿದೆ. ಸಿನಿಮಾದ ಗೆಲುವು ಸಹಜವಾಗಿಯೇ ಚಿತ್ರತಂಡಕ್ಕೆ ಖುಷಿ ನೀಡಿದೆ. ಆದರೆ ಸಿನಿಮಾ ಗೆದ್ದರೂ ಸಹ ಧನುಶ್​ಗೆ ಇದರಿಂದ ಭಾರಿ ಮುಖಭಂಗ ಉಂಟಾಗಿದೆ. ಕಾರಣ?

100 ಕೋಟಿ ಗಳಿಸಿದ ‘ಕುಬೇರ’ ಆದರೂ ಧನುಶ್​ಗೆ ಭಾರಿ ಮುಖಭಂಗ
Dhanush Kubera
ಮಂಜುನಾಥ ಸಿ.
|

Updated on: Jun 28, 2025 | 4:54 PM

Share

ಧನುಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕುಬೇರ’ ಸಿನಿಮಾ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಬಿಡುಗಡೆ ಆದ ಒಂದು ವಾರಕ್ಕೂ ಮುಂಚೆಯೇ ಬಾಕ್ಸ್ ಆಫೀಸ್​​ನಲ್ಲಿ 100 ಕೋಟಿ ರೂಪಾಯಿ ಬಾಚಿಕೊಂಡಿದೆ. ಧನುಶ್ ನಟನೆಯ ಸಿನಿಮಾ ಒಂದು ನೂರು ಕೋಟಿ ಗಳಿಸಿ ಬಹಳ ಸಮಯವಾಗಿತ್ತು. ‘ಕುಬೇರ’ ಮೂಲಕ ಧನುಶ್​ಗೆ ಗೆಲುವು ದೊರೆತಂತಾಗಿದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಗಳಿಕೆ ಮಾಡಿದ್ದರೂ ಸಹ ಧನುಶ್​ಗೆ ಇದರಿಂದ ಭಾರಿ ಮುಖಭಂಗವೇ ಆಗಿದೆ. ಅದಕ್ಕೆ ಕಾರಣವೂ ಇದೆ.

‘ಕುಬೇರ’ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಇದು ಮೂಲ ತೆಲುಗು ಸಿನಿಮಾ ಆಗಿದ್ದರೂ ಸಹ ಧನುಶ್ ಇರುವ ಕಾರಣಕ್ಕೆ ತಮಿಳುನಾಡಿನಲ್ಲೂ ಸಹ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ‘ಕುಬೇರ’ ಸಿನಿಮಾ ಆಂಧ್ರ ಮತ್ತು ತೆಲಂಗಾಣಗಳಲ್ಲಿ ದೊಡ್ಡ ಹಿಟ್ ಆಗಿದೆ. ಆದರೆ ತಮಿಳುನಾಡಿನಲ್ಲಿ ಸಿನಿಮಾ ಫ್ಲಾಪ್ ಎನಿಸಿಕೊಂಡಿದೆ!

ಹೌದು, ತಮಿಳಿನ ಸ್ಟಾರ್ ನಟ ಮುಖ್ಯ ಪಾತ್ರದಲ್ಲಿ ಇದ್ದ ಹೊರತಾಗಿ. ಧನುಶ್ ಅದ್ಭುತ ನಟನೆ ನೀಡಿ, ಶೇಖರ್ ಕಮ್ಮುಲ ಒಂದೊಳ್ಳೆ ಕತೆಯುಳ್ಳ ಸಿನಿಮಾ ಕೊಟ್ಟ ಹೊರತಾಗಿಯೂ ಸಹ ತಮಿಳುನಾಡಿನಲ್ಲಿ ಸಿನಿಮಾ ಒಳ್ಳೆಯ ಪ್ರದರ್ಶನ ಕಂಡಿಲ್ಲ. ಇದು ಧನುಶ್​ಗೆ ಇರುವ ಕಡಿಮೆ ಜನಪ್ರಿಯತೆ ಅಥವಾ ಸ್ಟಾರ್​ಡಂ ಅನ್ನು ಎತ್ತಿ ತೋರುತ್ತಿದೆ. ‘ಕುಬೇರ’ ಸಿನಿಮಾನಲ್ಲಿ ಧನುಶ್ ಜೊತೆಗೆ ಅಕ್ಕಿನೇನಿ ನಾಗಾರ್ಜುನ ಸಹ ನಟಿಸಿದ್ದರು. ಅಕ್ಕಿನೇನಿ ಅಭಿಮಾನಿಗಳು, ಶೇಖರ್ ಕಮ್ಮುಲ ಅಭಿಮಾನಿಗಳು ಆಂಧ್ರ ಮತ್ತು ತೆಲಂಗಾಣದಲ್ಲಿ ಸಿನಿಮಾವನ್ನು ಗೆಲ್ಲಿಸಿಕೊಂಡಿದ್ದಾರೆ. ಆದರೆ ಒಳ್ಳೆಯ ಸಿನಿಮಾ ಆಗಿರುವ ಹೊರತಾಗಿಯೂ ಧನುಶ್​ಗೆ ತಮಿಳುನಾಡಿನಲ್ಲಿ ಸಿನಿಮಾ ಅನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ.

ಇದನ್ನೂ ಓದಿ:‘ಕುಬೇರ’ ಪ್ರಚಾರ: ರಶ್ಮಿಕಾ ಮಂದಣ್ಣ ಕಾಲೆಳೆದ ನಟ ಧನುಶ್

ಸಿನಿಮಾ ಬಿಡುಗಡೆ ಆದ ದಿನ ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳು ಸೇರಿ 12 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ತಮಿಳು ಹೀರೋ ಸಿನಿಮಾ ಆಗಿದ್ದರೂ ಸಹ ತೆಲುಗು ರಾಜ್ಯಗಳ ಜನ ‘ಕುಬೇರ’ ಸಿನಿಮಾವನ್ನು ಮುಗಿಬಿದ್ದು ನೋಡಿದ್ದರು. ಅದೇ ದಿನ ತಮಿಳುನಾಡಿನಲ್ಲಿ ಗಳಿಕೆ ಆಗಿದ್ದು ಕೇವಲ 4 ಕೋಟಿ. ಈ ವರೆಗೂ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ‘ಕುಬೇರ’ ಸಿನಿಮಾ ಸುಮಾರು 60 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಆದರೆ ತಮಿಳುನಾಡಿನಲ್ಲಿ ‘ಕುಬೇರ’ ಸಿನಿಮಾ ಗಳಿಸಿರುವುದು 18 ಕೋಟಿ ಮಾತ್ರ.

ಇದೇ ಸಿನಿಮಾ ಕರ್ನಾಟಕದಲ್ಲಿ ಸುಮಾರು 9 ಕೋಟಿ ರೂಪಾಯಿಗಳು, ಕೇರಳದಲ್ಲಿ ಎರಡು ಕೋಟಿ ಮತ್ತು ಹೊರದೇಶಗಳಲ್ಲಿ ಸುಮಾರು 30 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ‘ಕುಬೇರ’ ಸಿನಿಮಾ ಸಮಾಜದಲ್ಲಿರುವ ಬಡವ-ಶ್ರೀಮಂತರ ನಡುವಿನ ಭೇದದ ಬಗ್ಗೆ ಚರ್ಚೆ ಮಾಡುವ ಸಿನಿಮಾ ಆಗಿದೆ. ಸಿನಿಮಾನಲ್ಲಿ ಧನುಶ್ ನಾಯಕ. ಅಕ್ಕಿನೇನಿ ನಾಗಾರ್ಜುನ್ ಸಹ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ