‘ಕಣ್ಣಪ್ಪ’ ಭರ್ಜರಿ ಕಲೆಕ್ಷನ್ಗೆ ಕಾರಣವೇನು? ಸತ್ಯ ಒಪ್ಪಿಕೊಂಡ ನಟ ಮಂಚು ವಿಷ್ಣು
Kannappa Movie Collections: ಮಂಚು ವಿಷ್ಣು ನಟಿಸಿ ನಿರ್ಮಾಣವೂ ಮಾಡಿರುವ ‘ಕಣ್ಣಪ್ಪ’ ಸಿನಿಮಾ ಉತ್ತಮ ಓಪನಿಂಗ್ ಪಡೆದುಕೊಂಡಿದ್ದು, ಗಳಿಕೆಯಲ್ಲೂ ನಿರಾಸೆಯನ್ನೇನೂ ಮೂಡಿಸಿಲ್ಲ. ಮೊದಲೆರಡು ದಿನ ಉತ್ತಮವಾದ ಗಳಿಕೆಯನ್ನೇ ಬಾಕ್ಸ್ ಆಫೀಸ್ನಲ್ಲಿ ಮಾಡಿದೆ. ತಮ್ಮ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿರುವ ಹಿಂದಿನ ಗುಟ್ಟೇನು ಎಂದು ಮಂಚು ವಿಷ್ಣು ಹೇಳಿದ್ದಾರೆ.

ಮಂಚು ವಿಷ್ಣು (Manchu Vishnu) ನಟಿಸಿ, ನಿರ್ಮಾಣವೂ ಮಾಡಿರುವ ‘ಕಣ್ಣಪ್ಪ’ ಸಿನಿಮಾ ಕಳೆದ ಶುಕ್ರವಾರವಷ್ಟೆ ಬಿಡುಗಡೆ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಮೊದಲ ದಿನ ಸುಮಾರು 10 ಕೋಟಿ ರೂಪಾಯಿ ಗಳಿಕೆ ಮಾಡಿದ ಸಿನಿಮಾ ಎರಡನೇ ದಿನಕ್ಕೆ 8 ಕೋಟಿ ಗಳಿಕೆ ಮಾಡಿದೆ. ಮಂಚು ವಿಷ್ಣು ವೃತ್ತಿ ಜೀವನದಲ್ಲಿಯೇ ಇದು ಭಾರಿ ದೊಡ್ಡ ಕಲೆಕ್ಷನ್. ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿರುವ ಬಗ್ಗೆ ಮಂಚು ವಿಷ್ಣು ಖುಷಿ ಆಗಿದ್ದಾರೆ. ಅದರ ಜೊತೆಗೆ ಕಲೆಕ್ಷನ್ ಹಿಂದಿನ ಗುಟ್ಟೊಂದನ್ನು ಹೇಳಿದ್ದಾರೆ.
‘ಕಣ್ಣಪ್ಪ’ ಸಿನಿಮಾವನ್ನು ಗೆಲ್ಲಿಸಲೇ ಬೇಕು ಎಂದು ಪಣತೊಟ್ಟು ಸಿನಿಮಾದ ಪ್ರಚಾರ ಮಾಡಿದ್ದರು ಮಂಚು ವಿಷ್ಣು. ಅದಕ್ಕೆ ಮುನ್ನ ಸಿನಿಮಾ ನಿರ್ಮಾಣದ ಹಂತದಲ್ಲಿಯೂ ಸಹ ಮಾರುಕಟ್ಟೆಯನ್ನು ಗಮದಲ್ಲಿಟ್ಟುಕೊಂಡೇ ಚಿತ್ರಕತೆಯನ್ನು ರಚಿಸಲಾಗಿತ್ತು. ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ಲಾಲ್ ಅಂಥಹಾ ದೊಡ್ಡ ನಟರನ್ನು ಅತಿಥಿ ಪಾತ್ರಗಳಿಗೆ ತೆಗೆದುಕೊಳ್ಳಲಾಗಿತ್ತು. ಇದೀಗ ಮಂಚು ವಿಷ್ಣು ಅವರ ಲೆಕ್ಕಾಚಾರ ಕೆಲಸ ಮಾಡಿದೆ.
ಸ್ವತಃ ಮಂಚು ವಿಷ್ಣು ಅವರೇ ಈ ವಿಷಯ ಹೇಳಿಕೊಂಡಿದ್ದು, ಪ್ರಭಾಸ್ ಇಂದಲೇ ಸಿನಿಮಾಕ್ಕೆ ಅದ್ಭುತವಾದ ಓಪನಿಂಗ್ ಸಿಕ್ಕಿದೆ. ಇದನ್ನು ಒಪ್ಪಿಕೊಳ್ಳಲು ನನಗೆ ಯಾವುದೇ ಮುಜುಗರ ಇಲ್ಲ ಎಂದಿದ್ದಾರೆ. ಮಂಚು ವಿಷ್ಣು ಮಾತು ಸತ್ಯವೂ ಆಗಿದೆ. ಸಿನಿಮಾ ನೋಡಿದ ಹಲವಾರು ಮಂದಿ ತಾವು ಪ್ರಭಾಸ್ಗಾಗಿ ಸಿನಿಮಾ ನೋಡುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸಿನಿಮಾ ನೋಡಿದ ಮಂದಿ ಸಾಮಾಜಿಕ ಜಾಲತಾಣದಲ್ಲಿ ಸಹ ಪ್ರಭಾಸ್ ಬಗ್ಗೆಯೇ ಬರೆದಿದ್ದಾರೆ. ಸಿನಿಮಾದ ಪೋಸ್ಟ್ರಗಳಲ್ಲಿಯೂ ಪ್ರಭಾಸ್ ಹೈಲೆಟ್ ಆಗಿದ್ದಾರೆ.
ಇದನ್ನೂ ಓದಿ:‘ಕಣ್ಣಪ್ಪ’ ಟ್ವಿಟ್ಟರ್ ವಿಮರ್ಶೆ: ಪರೀಕ್ಷೆ ಬರೆದಿದ್ದು ಮಂಚು ವಿಷ್ಣು, ಪಾಸ್ ಆಗಿದ್ದು ಪ್ರಭಾಸ್
‘ಕಣ್ಣಪ್ಪ’ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣದಿಂದಾಗಿ ಹಿಂದಿ ಪ್ರೇಕ್ಷಕರನ್ನು ಸೆಳೆಯಲು ಅಕ್ಷಯ್ ಕುಮಾರ್, ಮಲಯಾಳಂ ಪ್ರೇಕ್ಷಕರನ್ನು ಸೆಳೆಯಲು ಮೋಹನ್ ಲಾಲ್ ಅವರನ್ನು ಹಾಕಿಕೊಳ್ಳಲಾಗಿದೆ. ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಅವರಿದ್ದರೆ ತೆಲುಗು, ತಮಿಳು ಪ್ರೇಕ್ಷಕರು ಸಹ ಸಿನಿಮಾ ನೋಡಲು ಬರುತ್ತಾರೆಂಬುದು ಮಂಚು ವಿಷ್ಣು ಲೆಕ್ಕಾಚಾರ. ಇನ್ನು ಶಿವರಾಜ್ ಕುಮಾರ್ ಅವರನ್ನು ಸಹ ಸಿನಿಮಾದಲ್ಲಿ ನಟಿಸುವಂತೆ ಕೇಳಲಾಗಿತ್ತು. ಆದರೆ ಅನಾರೋಗ್ಯದ ಕಾರಣದಿಂದಾಗಿ ಶಿವಣ್ಣ ಆ ಸಿನಿಮಾನಲ್ಲಿ ನಟಿಸಲಿಲ್ಲ. ಆದರೆ ಬೆಂಗಳೂರಿನಲ್ಲಿ ನಡೆದ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
‘ಕಣ್ಣಪ್ಪ’ ಸಿನಿಮಾ ಗೆಲುವಿನ ಹಾದಿಯಲ್ಲಿದ್ದು ಸಹಜವಾಗಿಯೇ ಇದು ಮಂಚು ವಿಷ್ಣುಗೆ ಖುಷಿ ತಂದಿದೆ. ಇದೇ ಖುಷಿಯಲ್ಲಿ ಸಿನಿಮಾದ ಎರಡನೇ ಭಾಗವನ್ನು ಸಹ ಘೋಷಣೆ ಮಾಡಿರುವ ಮಂಚು ವಿಷ್ಣು, ಸ್ಟಾರ್ ನಿರ್ದೇಶಕರು ‘ಕಣ್ಣಪ್ಪ 2’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ