‘ಒಳ ಉಡುಪು ಹಾಕಿದ್ದೀನಾ, ಇಲ್ಲವಾ ಎಂಬುದನ್ನು ನೀವು ನೋಡಿದ್ದೀರಾ?’; ನಟಿಯ ನೇರ ಪ್ರಶ್ನೆಗೆ ಫ್ಯಾನ್ಸ್ ದಂಗು
Khushi Mukherjee: ಸ್ಪ್ಲಿಟ್ಸ್‌ವಿಲ್ಲಾ ಮಾಜಿ ಸ್ಪರ್ಧಿ ಖುಷಿ ಮುಖರ್ಜಿ ಅವರ ಉಡುಗೆ ವಿವಾದವನ್ನು ಅವರು ಸ್ಪಷ್ಟಪಡಿಸಿದ್ದಾರೆ. ತಮ್ಮ ಉಡುಪಿನ ಬಗ್ಗೆ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ತಾವು ಒಳ ಉಡುಪು ಧರಿಸಿದ್ದಾಗಿ ಹೇಳಿದ್ದಾರೆ. ಈ ವಿವಾದದಿಂದ ಉಂಟಾಗಿರುವ ಟ್ರೋಲ್‌ಗಳಿಗೆ ಸಹ ಅವರು ಧೈರ್ಯದಿಂದ ಉತ್ತರಿಸಿದ್ದಾರೆ.

ಈ ಮೊದಲು ಹಿಂದಿ ಬಿಗ್ ಬಾಸ್ ಒಟಿಟಿಯಲ್ಲಿ (OTT) ಸ್ಪರ್ಧಿಸಿದ್ದ ಉರ್ಫಿ ಜಾವೇದ್ ಅವರು ಚಿತ್ರ ವಿಚಿತ್ರ ಡ್ರೆಸ್ ಹಾಕಿ ಫೇಮಸ್ ಆದರು. ನಿತ್ಯ ಒಂದೊಂದು ರೀತಿಯ ಬಟ್ಟೆಯನ್ನು ಅವರು ಧರಿಸುತ್ತಿದ್ದರು. ಈಗ ಇದೇ ತಂತ್ರವನ್ನು ಕೆಲವರು ಉಪಯೋಗಿಸುತ್ತಿದ್ದಾರೆ. ನಟಿ ಹಾಗೂ ಸ್ಪ್ಲಿಟ್ಸ್‌ವಿಲ್ಲಾ ಮಾಜಿ ಸ್ಪರ್ಧಿ ಖುಷಿ ಮುಖರ್ಜಿ ಅವರು ತುಂಡುಡುಗೆ ಮೂಲಕ ಎಲ್ಲರ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಕೇವಲ ಟಾಪ್ ಧರಿಸಿ, ಒಳ ಉಡುಪು ಹಾಕಿಲ್ಲವೇನೋ ಎಂಬ ರೀತಿಯಲ್ಲಿ ಬಿಂಬಿಸುತ್ತಾ ಎಲ್ಲರ ಎದುರು ಕಾಣಿಸಿಕೊಳ್ಳುವ ಮೂಲಕ ಅವರು ಚರ್ಚೆ ಹುಟ್ಟುಹಾಕಿದ್ದಾರೆ. ಖುಷಿ ಈಗ ಟ್ರೋಲ್‌ಗಳಿಗೆ ಉತ್ತರ ನೀಡಿದ್ದಾರೆ.
ಖುಷಿ ಈ ರೀತಿ ಬರುವಾಗ ಕೆಲವರು ಅವರನ್ನೇ ದಿಟ್ಟಿಸಿ ನೋಡಿದ್ದರು. ಕೆಲವರು ನೇರವಾಗಿಯೇ ‘ನೀವು ಒಳುಡುಪು ಹಾಕಿಲ್ಲ’ ಎಂದು ಪಕ್ಕದಲ್ಲೇ ನಿಂತು ಕಮೆಂಟ್ ಮಾಡಿದರು. ಈ ವಿಡಿಯೀ ವೈರಲ್ ಆಗಿದೆ. ಕೆಲವರು ಆ ವ್ಯಕ್ತಿಯನ್ನು ಟೀಕಿಸಿದರೆ, ಇನ್ನೂ ಕೆಲವರು ಈ ರೀತಿ ಬಟ್ಟೆ ಧರಿಸಿದ ನಟಿಯನ್ನು ತೆಗಳಿದ್ದಾರೆ.
‘ನಾನು ಚಡ್ಡಿ ಧರಿಸಿದ್ದೇನೋ ಅಥವಾ ಇಲ್ಲವೋ ಎಂಬುದನ್ನು ನೀವು ನೋಡಿದ್ದೀರಾ? ಯಾರೂ ಚಡ್ಡಿಯನ್ನು ಹೊರಗೆ ಹಾಕಿಕೊಳ್ಳೋದಿಲ್ಲ ಅಲ್ಲವಾ? ನಾನು ಚಡ್ಡಿ ಧರಿಸಿದ್ದೆ. ಅದರ ಸ್ಟ್ರಿಪ್ಗಳನ್ನು ಮೇಲಕ್ಕೆ ಎಳೆದುಕೊಂಡಿದ್ದೆ’ ಎಂದು ಹೇಳಿದ್ದಾರೆ. ಈ ಮೂಲಕ ತಾವು ಏನನ್ನು ಧರಿಸಿದ್ದೇನೆ ಎಂಬ ಬಗ್ಗೆ ತಮಗೆ ಪರಿಜ್ಞಾನ ಇದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
View this post on Instagram
View this post on Instagram
‘ಗಾಳಿ ಬೀಸುತ್ತಾ ಇತ್ತು. ಆಗ ನಾನೇನು ಮೆಲಕ್ಕೆ ಎತ್ತಿ ಎಲ್ಲವನ್ನೂ ತೋರಿಸಬೇಕಿತ್ತಾ? ನಾನು ಆ ಸಮಯದಲ್ಲಿ ಎಲ್ಲವನ್ನೂ ನಿಭಾಯಿಸಲು ಪ್ರಯತ್ನಿಸುತ್ತಿದ್ದೆ. ನನಗೆ ಅದು ಮುಜುಗರ ಅನಿಸುತ್ತಾ ಇರಲಿಲ್ಲ. ಆದಾಗ್ಯೂ ಅದನ್ನು ಆ ರೀತಿಯಲ್ಲಿ ಬಣ್ಣಿಸಲಾಗುತ್ತದೆ. ನಾನು ಏನನ್ನು ತೋರಿಸಬೇಕು ಎಂಬುದು ನನಗೆ ಗೊತ್ತಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮೈತುಂಬಾ ಬಟ್ಟೆ ಧರಿಸಿದ ಉರ್ಫಿ ಜಾವೇದ್ ನೋಡಿ ಎಲ್ಲರಿಗೂ ಅಚ್ಚರಿ
‘ಜನರಲ್ಲಿ ಸಾಕಷ್ಟು ವಿಷ ಇದೆ. ಈ ಕಾರಣಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳಲೇ? ನಾನು ಮಾಡಿಕೊಳ್ಳಲ್ಲ. ನನ್ನಿಂದಾಗಿ ಬೇಕಿದ್ದರೆ ಕೆಲವರು ಆತ್ಮಹತ್ಯೆ ಮಾಡಿಕೊಳ್ಳಬಹುದು. ಆದರೆ, ನಾನಂತೂ ಸಾಯಲ್ಲ. ನನಗೆ ಇದೆಲ್ಲ ಏನೂ ಅನಿಸೋದೇ ಇಲ್ಲ. ಹೀಗಾಗಿ, ಇವೆಲ್ಲವನ್ನೂ ಧೈರ್ಯದಿಂದ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ. ಖುಷಿ ಮುಖರ್ಜಿ ಮತ್ತೊಂದು ಉರ್ಫಿ ಜಾವೇದ್ ಆಗುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಇದನ್ನು ಅನೇಕರು ಒಪ್ಪಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:02 am, Tue, 1 July 25








